Karnataka State Police

Beta                               

Mandya District Daily Crime Report Date: 09-03-2010



Posted by mandya on March 10, 2010

ಜಿಲ್ಲೆಯಲ್ಲಿ ಈ ದಿನ ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 04 ರಸ್ತೆ ಅಪಘಾತ ಪ್ರಕರಣಗಳು, 6 ಯು.ಡಿಆರ್ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳ್ಳತನ ಪ್ರಕರಣ ಮತ್ತು 8 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.

ಯು.ಡಿ.ಆರ್. ಪ್ರಕರಣ
ಹಲಗೂರು ಪೊಲೀಸ್ ಠಾಣೆ 
1] ಮೊ.ಸಂ 05/10 ಕಲಂ 174 ಸಿಆರ್.ಪಿ.ಸಿ. ಮೃತ ಸಿದ್ದರಾಜು ರವರು ಕಳೆದ 2 ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 02-03-10 ರಂದು ಇದನ್ನು ತಾಳಲಾರದೆ ವಿಷ ಸೇವನೆ ಮಾಡಿ ಚಿಕಿತ್ಸೆಗೆ ಆಸ್ಪತ್ರೆ ಸೇರಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.
ಬೆಸಗರಹಳ್ಳಿ ಪೊಲೀಸ್ ಠಾಣೆ 
2] ಯು.ಡಿ.ಆರ್. ನಂ 01/10 ಕಲಂ 174 ಸಿಆರ್.ಪಿ.ಸಿ. ಮೃತ ತಮ್ಮಯ್ಯ ಬಿನ್ ಗೂಲಯ್ಯ, 48 ವರ್ಷ ರವರು ಅವರ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ನಿಶ್ಚಿಸಿದ್ದು ಇದಕ್ಕೆ ಹುಡುಗಿಯ ಮನೆಯರು ನಿರಾಕರಿಸಿದಕ್ಕೆ ಇದರಿಂದ ಮನನೊಂದ ಮೃತ ದಿನಾಂಕ 08-03-10 ರಂದು ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ.
ಪಾಂಡವಪುರ ಪೊಲೀಸ್ ಠಾಣೆ 
3] ಯು.ಡಿ.ಆರ್. 09/10 ಕಲಂ 174 ಸಿಆರ್.ಪಿ.ಸಿ ದಿನಾಂಕ 06-03-10 ರಂದು ಮೃತ ರಾಜೇಗೌಡ ನೀರು ಕುಡಿಯಲೆಂದು ತೊಣ್ಣೂರು ಕೆರೆಗೆ ಹೋಗಿದ್ದು ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ.
ಕೆ.ಆರ್. ಸಾಗರ ಪೊಲೀಸ್ ಠಾಣೆ 
4] ಯು.ಡಿ.ಆರ್. 09/10 ಕಲಂ 174 ಸಿಆರ್.ಪಿ.ಸಿ. ದಿನಾಂಕ 08-03-10 ರಂದು ಮೃತ ಮನುನಾಯಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ.
5] ಯು.ಡಿ.ಆರ್. 10/10 ಕಲಂ 174 ಸಿಆರ್.ಪಿ.ಸಿ. ದಿನಾಂಕ 08-03-10 ರಂದು ಮೃತ ವಿ.ಕೆ. ಶರ್ಮ ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ. 
6] ಯು.ಡಿ.ಆರ್. 11/10 ಕಲಂ 174 ಸಿಆರ್.ಪಿ.ಸಿ. ದಿನಾಂಕ 08-03-10 ರಂದು ಮೃತ ಶ್ರೀನಿವಾಸ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ.
ಮನುಷ್ಯ ಕಾಣೆಯಾಗಿದ್ದಾನೆ 
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ 
1] ಮೊ.ಸಂ 50/10 ಕಲಂ ಹುಡುಗಿ ಕಾಣೆಯಾಗಿದ್ದಾಳೆ ಕಾಣೆಯಾದ ಹುಡುಗಿ ರಮ್ಯ, 17 ವರ್ಷ ರವರು ದಿನಾಂಕ 05-03-10 ರಂದು ಸಾಮಾನು ತರುವುದಾಗಿ ಹೇಳಿ ಮನೆಯಿಂದ ಹೊರೆಗೆ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
ಕಳ್ಳತನ ಪ್ರಕರಣ
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ 
1] ಮೊ.ಸಂ 51/10 ಕಲಂ 379 ಐಪಿಸಿ ದಿನಾಂಕ 06-03-10 ರಂದು ಪಿರ್ಯಾದಿ ಬಿ.ಎಸ್. ಮಹೇಂದ್ರ ರವರು ಅವರ ಬಾಬ್ತು ಹೀರೊ ಹೊಂಡಾ ಮೋಟಾರ್ ಸೈಕಲ್ ನಂ ಕೆಎ-11-ಕೆ-6541 ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.