Karnataka State Police

Beta                               

Mandya District Daily Crime Report Date: 11-03-2010



Posted by mandya on March 12, 2010

ಜಿಲ್ಲೆಯಲ್ಲಿ ಈ ದಿನ ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 05 ರಸ್ತೆ ಅಪಘಾತ ಪ್ರಕರಣಗಳು, 2 ಕಳ್ಳತನ ಪ್ರಕರಣಗಳು, 3 ಯು.ಡಿ.ಆರ್. ಪಕ್ರರಣಗಳು, 1 ಸುಲಿಗೆ ಪ್ರಕರಣ ಮತ್ತು 20 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣ 
ಮದ್ದೂರು ಪೊಲೀಸ್ ಠಾಣೆ 
1] ಮೊ.ಸಂ 141/10 ಕಲಂ 279, 304[ಎ] ಐಪಿಸಿ ದಿನಾಂಕ 10-03-10 ರಂದು ಆರೋಪಿ ಹೆಚ್. ಎಲ್. ಉಮೇಶ ಹೀರೊ ಹೊಂಡಾ ನಂ ಕೆಎ-05-ಇವೈ-7439 ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಹಂಪ್ಸ್ ಹತ್ತಿರ ಬ್ರೇಕ್ ಹಾಕಿದ ಪರಿಣಾಮ ವಾಹನದ ಹಿಂದೆ ಕುಳಿತ್ತಿದ್ದ ರಾಜೇಶ ರವರು ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ.
ಶಿವಳ್ಳ ಪೊಲೀಸ್ ಠಾಣೆ 
2] ಮೊ.ಸಂ 31/10 ಕಲಂ 279, 304[ಎ] ಐಪಿಸಿ ದಿನಾಂಕ 10-03-10 ರಂದು ಆರೋಪಿ ಮಹೇಶ ಮೋಟಾರ್ ಸೈಕಲ್ ಸವಾರ ನಂ ಕೆಎ-11-ಎಸ್-10 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಜೋಗಿಗೌಡ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮೃತಪಟ್ಟಿರುತ್ತಾನೆ.
ಕಳ್ಳತನ ಪ್ರಕರಣ
ಮದ್ದೂರು ಪೊಲೀಸ್ ಠಾಣೆ 
1] ಮೊ.ಸಂ 142/10 ಕಲಂ. 457, 380 ಐಪಿಸಿ ದಿನಾಂಕ 11-03-10 ರಂದು ಯಾರೋ ಕಳ್ಳರು ಪಿರ್ಯಾದಿ ದೇವರಾಜು ರವರ ಮನೆಯ ಬೀಗ ಮುರಿದು ಒಳಪ್ರವೇಶಿ ಮನೆಯಲ್ಲಿದ್ದ 16 ಸಾವಿರ ಬೆಲೆ ಬಾಳುವ ಚಿನ್ನದ ಒಡೆವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಕೆ.ಆರ್. ಪೇಟ್ ಟೌನ್ 
2] ಮೊ.ಸಂ 50/10 ಕಲಂ 379 ಐಪಿಸಿ ದಿನಾಂಕ 06-03-10 ರಂದು ಯಾರೋ ಕಳ್ಳರು ಜನತಾ ಮಿಲ್ಟ್ರೀ ಹೋಟಲ್ ನ ಬಳಿ ನಿಲ್ಲಿಸಿದ್ದ ಪಿರ್ಯಾದಿ ಯಶವಂತ ಕುಮಾರ ರವರ ಬಾಬ್ತು ಮೋಟಾರ್ ಸೈಕಲ್ ನಂ ಕೆಎ-54-ಇ-1458 ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಯು.ಡಿ.ಆರ್. ಪ್ರಕರಣ
ಮದ್ದೂರು ಪೊಲೀಸ್ ಠಾಣೆ 
1] ಯು.ಡಿ.ಆರ್. 11/10 ಕಲಂ 174 ಸಿಆರ್.ಪಿ.ಸಿ ಮೃತ ಚಿಕ್ಕಪುಟ್ಟಯ್ಯ, 35 ವರ್ಷ ನವರು ದಿನಾಂಕ 10-03-10 ರಂದು ಕುಡಿದ ಆಮಲಿನಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದು ಚಿಕಿತ್ಸೆಗೆ ಆಸ್ಪತ್ರೆ ಸೇರಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.
2] ಯು.ಡಿ.ಆರ್. 12/10 ಕಲಂ 174 ಸಿಆರ್.ಪಿ.ಸಿ. ಮೃತ ಕೃಷ್ಣ, 40 ವರ್ಷ ದಿನಾಂಕ 10-03-10 ರಂದು ಯಾವುದೋ ಕ್ರಿಮಿನಾಶಕ ಸೇವನೆ ಮಾಡಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿದ್ದು ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.
ಕೆ.ಆರ್. ಪೇಟ್ ಟೌನ್ ಪೊಲೀಸ್ ಠಾಣೆ 
3] ಯು.ಡಿ.ಆರ್. ನಂ 02/10 ಕಲಂ 174[ಸಿ] ಸಿಆರ್.ಪಿ.ಸಿ ದಿನಾಂಕ 11-03-10 ರಂದು ಫಿರ್ಯಾದಿ ಕೆ. ಕುಮಾರ್ ರವರ ಜಮೀನಿನ ಬಾವಿಯಲ್ಲಿ ಒಂದು ಅಪರಿಚಿತ ಅನಾಥ ಶವವು ಬಾವಿಯ ನೀರಿನಲ್ಲಿ ತೆಲುತ್ತಿದ್ದು ಹಾಗೂ ಶವವನ್ನು ಹೊರ ತೆಗೆದು ನೋಡಲಾಗಿ ಸಾವಿನ ಬಗ್ಗೆ ಸಂಶಯವಿರುತ್ತೆ.
ಸುಲಿಗೆ ಪ್ರಕರಣ 
ಪಾಂಡವಪುರ ಪೊಲೀಸ್ ಠಾಣೆ 
1] ಮೊ.ಸಂ 140/10 ಕಲಂ 393 ಐಪಿಸಿ ದಿನಾಂಕ 11-03-10 ರಂದು ಸಂಜೆ 4:00 ಗಂಟೆ ಸಮಯದಲ್ಲಿ ಯುವಕನೊಬ್ಬ ಕೆನ್ನಾಳು ಗೇಟ್ ಬಳಿ ಹಿಂದಿನಿಂದ ಬಂದು ಪಿರ್ಯಾದಿ ಮಹಾಲಕ್ಷ್ಮಿ ಸಿ ರವರ ಕತ್ತಿಗೆಗೆ ಕೈ ಹಾಕಿ ಸರ ಕೀಳಲು ಪ್ರಯತ್ನಿಸಿದ್ದು ಪಿರ್ಯಾದಿಯವರ ಕಿರಿಚಕೊಳ್ಳಲಾಗಿ ಚಾಕುವನ್ನು ಬಿಸಾಕಿ ಓಡಿ ಹೋಗಿರುತ್ತಾನೆ.