Karnataka State Police

ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ರವರ ಸಂದೇಶ




ಒಂದು ಸಂಸ್ಥೆಯ ಅಂತರ್ಜಾಲ ತಾಣವು ತನ್ನ ವ್ಯವಹರೀಕರಣದ ಭಾಗೀದಾರರ ಮತ್ತು ಸಾಮಾನ್ಯ ಜನರ ನಡುವೆ ಪ್ರಮುಖ ಮಾಧ್ಯಮವಾಗಿದೆ. ಈ ವ್ಯವಹರೀಕರಣವು ಸಂಸ್ಥೆಯ ನಿರ್ವಹಣೆ ಮತ್ತು ಸಾಮಾಜಿಕ ಲೆಕ್ಕಾಚಾರವನ್ನು ಉನ್ನತೀಕರಿಸಲು ಸಹಕಾರಿಯಾಗಿದೆ. ನಮ್ಮ ಪೊಲೀಸ್ ಠಾಣೆಗಳು ನಾಗರೀಕರಿಗೆ ಸೇವೆ ಸಲ್ಲಿಸುವ ಮತ್ತು ಅಭಯ ನೀಡುವ ಕೇಂದ್ರಗಳನ್ನಾಗಿಸುವ ಆಶಯ ನಮ್ಮದಾಗಿದೆ.


ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಅಪರಾಧಗಳನ್ನು ಹತ್ತಿಕ್ಕಲು, ಮಾನವ ಹಕ್ಕುಗಳನ್ನು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಕರ್ನಾಟಕ ಪೊಲೀಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಸಂಸ್ಥೆಯೊಳಗೆ ಶಿಸ್ತು, ಸಾಂಘಿಕವಾಗಿ ಕಾರ್ಯ ನಿರ್ವಹಿಸುವುದು, ಜವಾಬ್ದಾರಿ ಮತ್ತು ಹೊಣೆಗಾರಿಕೆಗೆ ಒತ್ತು ನೀಡಲಾಗುವುದು.


ಪೊಲೀಸ್ ಸೇವೆಯ ದಕ್ಷತೆ ಹೆಚ್ಚಿಸಲು ನಾಗರಿಕರು, ಸಂಶೋಧಕರು, ಎನ್.ಜಿ.ಓ ಗಳು, ಮಾಧ್ಯಮ ಮತ್ತು ಭಾಗೀಧಾರರನ್ನು ಸೂಕ್ತ ಸಲಹೆ ನೀಡಲು ಆಮಂತ್ರಿಸಲಾಗಿದೆ. 

ಸಹಿ/-
(ನೀಲಮಣಿ.ಎನ್. ರಾಜು. ಐ.ಪಿ.ಎಸ್)
ಮಹಾನಿರ್ದೇಶಕರು ಮತ್ತು
ಆರಕ್ಷಕ ಮಹಾನಿರೀಕ್ಷಕರು
ಕರ್ನಾಟಕ ರಾಜ್ಯ.