Karnataka State Police

ನೀತಿ ಸಂಹಿತೆ

ಕನರ್ಾಟಕ ರಾಜ್ಯ ಪೊಲೀಸ್ ದಳದ ನೀತಿ ಸಂಹಿತೆ ಮತ್ತು ತತ್ವಗಳು

1. ಪೊಲೀಸ್ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು ಈ ಕೆಳಗಿನಂತಿವೆ.

ಸಾರ್ವಜನಿಕ ಸುವ್ಯವಸ್ಥೆಯ ಸಂರಕ್ಷಣೆ ಮತ್ತು ಪ್ರಗತಿ;
ಅಪರಾಧಗಳ ತನಿಖೆ ಮಾಡುವುದು ಮತ್ತು ಅಪರಾಧಿಗಳನ್ನು ಬಂಧಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಕಾನೂನಿನ ಮುಂದಿನ ವ್ಯವಹರಣೆಗಳಲ್ಲಿ ಭಾಗವಹಿಸುವುದು;
ಅಪರಾಧಗಳನ್ನು ಮಾಡುವುದಕ್ಕೆ ಕಾರಣವಾಗಬಹುದಾದ ಸಮಸ್ಯೆಗಳನ್ನು ಮತ್ತು ಸನ್ನಿವೇಶಗಳನ್ನು ಗುರುತಿಸುವುದು; ಗಸ್ತು ಕಾವಲು ಮಾಡುವ ಮೂಲಕ ಮತ್ತು ಇತರೆ ಸೂಕ್ತ ಪೊಲೀಸ್ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಅಪರಾದ ಎಸಗುವ ಅವಕಾಶಗಳನ್ನು ಕಡಿಮೆ ಮಾಡುವುದು;
ಅಪರಾಧಗಳನ್ನು ತಡೆಗಟ್ಟಲು ಅವಶ್ಯವಿರುವ ಸೂಕ್ತ ಕ್ರಮಗಳನ್ನು ಜಾರಿಗೊಳಿಸುವ ಸಂಬಂಧ ಇತರೆ ಏಜೆನ್ಸಿಗಳಿಗೆ ನೆರವಾಗುವುದು ಮತ್ತು ಅವುಗಳೊಂದಿಗೆ ಸಹಕರಿಸುವುದು;
ದೈಹಿಕ ಹಾನಿಂಛಿು ಅಪಾಯದಲ್ಲಿರುವ ವ್ಯಕ್ತಿಗಳಿಗೆ ನೆರವಾಗುವುದು;
ಜನಸಮುದಾಯದಲ್ಲಿ ಭದ್ರತೆಯ ಭಾವನೆಯನ್ನು ಉಂಟುಮಾಡುವುದು ಮತ್ತು ಆ ಭಾವನೆಯನ್ನು ಉಳಿಸಿಕೊಂಡು ಬರುವುದು; ಜನರ ಮತ್ತು ವಾಹನಗಳ ಕ್ರಮಬದ್ಧ ಚಲನವಲನ ಸುಗಮವಾಗುವಂತೆ ಮಾಡುವುದು;
ಮಧ್ಯಸ್ಥಿಕೆವಹಿಸಿ ಜನರ ವಿವಾದವನ್ನು ಪರಿಹರಿಸುವುದು ಹಾಗೂ ಜನರು ಅನ್ಯೋನತೆಯಿಂದ ಬಾಳುವಂತೆ ಮಾಡುವುದು; ಇತರ ಸೂಕ್ತ ಸೇವೆಗಳನ್ನು ಸಲ್ಲಿಸುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು;
ಸಾರ್ವಜನಿಕ ಶಾಂತಿಗೆ ಭಂಗ ತರುವ ವಿಷಯಗಳಿಗೆ ಸಂಬಂಧಿಸಿದಂತೆ, ಹಾಗೂ ರಾಷ್ಟ್ರೀಯ ಭದ್ರತೆ, ಐಕ್ಯತೆ, ಆಥರ್ಿಕ ಮತ್ತು ಸಾಮಾಜಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಬೇಹುಗಾರಿಕೆಯನ್ನು ಸಂಗ್ರಹಿಸುವುದು;
ಕಾನೂನಿನ ಮೂಲಕ ಆಜ್ಞಾಪಿಸಬಹುದಾದಂಥ ಇತರ ಕರ್ತವ್ಯಗಳನ್ನು ನಿರ್ವಹಿಸುವುದು;
ದಂಡ ಪ್ರಕ್ರಿಯಾ ಸಂಹಿತೆ 1973 (1974 ರ ಅಧಿನಿಯಮ ಸಂಖ್ಯೆ 2) ಮತ್ತು ಕನರ್ಾಟಕ ಪೊಲೀಸ್ ಅಧಿನಿಯಮ 1963 (1964 ರ ಕನರ್ಾಟಕ ಅಧಿನಿಯಮ ಸಂಖ್ಯೆ 4) ಅಲ್ಲದೆ, ಹಲವಾರು ವಿಶೇಷ ಅಧಿನಿಯಮಗಳಡಿಯಲ್ಲಿ ಭಾರತ ಸಕರ್ಾರ ಮತ್ತು ಕನರ್ಾಟಕ ಸರಕಾರ ಮೇಲೆ ಸೂಚಿಸಿದ ಕರ್ತವ್ಯಗಳ ಸಲುವಾಗಿ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿದೆ.
ಪೊಲೀಸರು ಭಾರತ ಸಂವಿಧಾನಕ್ಕೆ ನಿಷ್ಠರಾಗಿರತಕ್ಕದ್ದು ಮತ್ತು ಸಂವಿಧಾನದಿಂದ ನಾಗರೀಕರಿಗೆ ಪ್ರಾಪ್ತವಾದ ಹಕ್ಕುಗಳನ್ನು ಗೌರವಿಸುವುದಲ್ಲದೆ, ಅವುಗಳನ್ನು ರಕ್ಷಿಸಬೇಕು.
ಪೊಲೀಸರು ಪ್ರಮುಖವಾಗಿ ಕಾನೂನು ಜಾರಿಗೊಳಿಸುವವರಾದ್ದರಿಂದ, ಅವರು ಯಾವುದೇ ಅಧಿನಿಯಮದ ಸಿಂಧುತ್ವ ಅಥವಾ ಅವಶ್ಯಕತೆಯನ್ನು ಪ್ರಶ್ನಿಸಲಾಗದು. ಅವರು ನಿಭರ್ೀತಿಯಿಂದ ಮತ್ತು ನಿಷ್ಪಕ್ಷಪಾತವಾಗಿ ಯಾವುದೇ ಭಯ ಅಥವಾ ಒಲವಿಲ್ಲದೆ, ದ್ವೇಷ ಅಥವಾ ಪ್ರತೀಕಾರ ಮನೋಭಾವನೆಯಿಲ್ಲದೆ ಕಾನೂನನ್ನು ಜಾರಿಗೊಳಿಸತಕ್ಕದ್ದು.

ಪೊಲೀಸರು ತಮ್ಮ ಅಧಿಕಾರ ಮತ್ತು ಕರ್ತವ್ಯಗಳ ಇತಿಮಿತಿಗಳನ್ನು ತಿಳಿದಿರುವುಲ್ಲದೆ, ನ್ಯಾಯಾಂಗದ ಕಾರ್ಯಕ್ಷೇತ್ರವನ್ನು ಯಾವತ್ತೂ ಅಕ್ರಮಿಸಬಾರದು ಅಥವಾ ಅಕ್ರಮಿಸದಂತೆ ಎಚ್ಚರವಾಗಿರಬೇಕು ಮತ್ತು ಯಾವುದೇ ಪ್ರಕರಣಗಳ ತೀಮರ್ಾನವನ್ನು ತಾವೇ ಕೈಗೊಳ್ಳಬಾರದು, ಹಾಗೂ ಯಾವುದೇ ವ್ಯಕ್ತಿಗಳೊಡನೆ ಹಗೆ ತೀರಿಸಿಕೊಳ್ಳಬಾರದು, ಮತ್ತು ತಪ್ಪಿತಸ್ಥರನ್ನು ತಾವೇ ಶಿಕ್ಷಿಸಬಾರದು.

ಪೊಲೀಸರು ಕಾನೂನು ಪಾಲನೆಯನ್ನು ಮಾಡುವಾಗ ಅಥವಾ ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವಾಗ, ಮನವೊಲಿಕೆ, ಬುಧ್ಧಿವಾದ ಮತ್ತು ಎಚ್ಚರಿಕೆಯ ಮಾರ್ಗವನ್ನು ಅನುಸರಿಸತಕ್ಕದ್ದು, ಆ ಮನವೊಲಿಕೆ, ಬುದ್ದಿವಾದ ಎಚ್ಚರಿಕೆಗಳು ವಿಫಲವಾದ ಸಂದರ್ಭದಲ್ಲಿ ಬಲಪ್ರಯೋಗವು ಅನಿವಾರ್ಯವೆಂದು ಕಂಡುಬಂದಾಗ, ಸಂಧರ್ಭಕ್ಕನುಗುಣವಾಗಿ ಕನಿಷ್ಠ ಬಲಪ್ರಯೋಗ ಮಾಡಬಹುದು.

ಅಪರಾಧ ಘಟಿಸದಂತೆ ಮತ್ತು ಗಲಭೆ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಪ್ರಥಮ ಕರ್ತವ್ಯವಾಗಿದೆ. ಅವುಗಳು ಸಂಭವಿಸದಂತೆ ನೋಡಿಕೊಳ್ಳುವುದು ಪೊಲೀಸರ ಕಾರ್ಯದಕ್ಷತೆಯನ್ನು ತೋರಿಸುತ್ತದೆಯಲ್ಲದೆ, ಅಪರಾಧಗಳು ಜರುಗುತ್ತಿರುವಾಗ ಅವುಗಳನ್ನು ನಿಗ್ರಹಿಸಲು ತೆಗೆದುಕೊಂಡ ಕಣ್ಣಿಗೆ ಕಾಣುವಂತಹ ಪೊಲೀಸ್ ಕಾಯರ್ಾಚರಣೆ ಆಗುವುದಿಲ್ಲ. ಪೊಲೀಸರು ತಾವು ಕೂಡಾ ಸಾರ್ವಜನಿಕರಲ್ಲೊಬ್ಬರೆನ್ನುವ ಭಾವನೆಯನ್ನು ಹೊಂದಿರಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬ ನಾಗರೀಕನು ನಿರ್ವಹಿಸಲು ಕರ್ತವ್ಯಬದ್ದನಾಗಿರುವ ಕಾರ್ಯಗಳನ್ನು ಪೊಲೀಸರು ಸಾರ್ವಜನಿಕರ ಹಿತಾಸಕ್ತಿಯಿಂದ ಮತ್ತು ಸಾರ್ವಜನಿಕರ ಪರವಾಗಿ ಪೂರ್ಣವೇಳೆಗೆ ಕರ್ತವ್ಯ ನಿರ್ವಹಿಸಲು ನಿಯೋಜಿತರಾದವರೆಂದು ತಿಳಿದಿರತಕ್ಕದ್ದು.

ಪೊಲೀಸರ ಕಾರ್ಯದಕ್ಷತೆಯು, ತಾವು ಸಾರ್ವಜನಿಕರಿಂದ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪಡೆಯುವ ಸಕ್ರಿಯ ಸಹಕಾರವನ್ನು ಅವಲಂಬಿಸಿರುತ್ತದೆನ್ನುವುದನ್ನು, ಮನಗಂಡಿರತಕ್ಕದ್ದು, ಹಾಗೂ ಸಾರ್ವಜನಿಕರ ಸಕ್ರಿಯ ಸಹಕಾರವನ್ನು ಪಡೆಯುವ ಸಾಮಥ್ರ್ಯವು ತಾವು ಎಷ್ಟರ ಮಟ್ಟಿಗೆ ಅವರ ವಿಶ್ವಾಸಗಳಿಸಿ ಉಳಿಸಿಕೊಂಡಿದ್ದೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪೊಲೀಸರು ಯಾವ ಪ್ರಮಾಣದಲ್ಲಿ ಸಾರ್ವಜನಿಕರ ಸಕ್ರಿಯ ಸಹಕಾರ ಪಡೆಯುವಲ್ಲಿ ಸಫಲರಾಗುತ್ತಾರೋ, ಅದೇ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಣೆಗಾಗಿ ಬಲಪ್ರಯೋಗಿಸುವ ಅವಶ್ಯಕತೆಯು ಕ್ರಮೇಣ ಕಡಿಮೆಯಾಗುತ್ತದೆ.

ಪೊಲೀಸರು ಸಮಸ್ತ ನಾಗರೀಕರಿಗೆ ಅನುಕಂಪ ಮತ್ತು ದಾಕ್ಷಿಣ್ಯವನ್ನು ತೋರಿಸುವುದಲ್ಲದೆ, ಸಮಸ್ತ ನಾಗರೀಕರ ಶ್ರೆಯೋಭಿವೃದ್ದಿಗಾಗಿ ಅವಿರತ ಕಾಳಜಿ ಹೊಂದಿರತಕ್ಕದ್ದು, ನಾಗರೀಕರ ಸ್ಥಾನಮಾನ, ಸಿರಿಸಂಪತ್ತುಗಳನ್ನು ಗಣನೆಗೆ ತೆಗೆದುಕೊಳ್ಳದೆ, ತಮ್ಮ ವೈಯುಕ್ತಿಕ ಸೇವೆ, ಸ್ನೇಹ, ಸಹಾಯ ಮತ್ತು ಪ್ರತಿಯೊಬ್ಬರಿಗೂ ಯಾವಾಗಲೂ ನೀಡಲು ಸಿದ್ದರಾಗಿರಬೇಕು.

ಪೊಲೀಸರು ಯಾವಾಗಲು ತಮ್ಮ ಸ್ವಾರ್ಥಕ್ಕಿಂತ ಕರ್ತವ್ಯವೇ ಮುಖ್ಯವೆಂದು ಭಾವಿಸತಕ್ಕದ್ದು, ಎಂತಹ ಅಪಾಯಕರ ಸನ್ನಿವೇಶವಿರಲಿ ಅಥವಾ ಪ್ರಚೋದನೆಯ ಸಂದರ್ಭವಿರಲಿ, ತಾವು ಶಾಂತರೀತಿಯಿಂದ, ಪ್ರಸನ್ನಚಿತ್ತರಾಗಿ ಇರತಕ್ಕದ್ದಲ್ಲದೆ, ಇತರರ ರಕ್ಷಣೆಗಾಗಿ ತಮ್ಮ ಜೀವನವನ್ನು ಬಲಿದಾನ ಮಾಡಲು ಸಿದ್ದರಾಗಿರಬೇಕು.

ಪೊಲೀಸರು ಯಾವಾಗಲೂ ಸವಿನಯದಿಂದ ಮತ್ತು ಸನ್ನಡತೆಯಿಂದ ವತರ್ಿಸುವುದಲ್ಲದೆ, ನಂಬಲರ್ಹ ವ್ಯಕ್ತಿಗಳಾಗಿ ಆಲಿಪ್ತರಾಗಿದ್ದು, ಸದ್ಗುಣಗಳನ್ನು ರೂಢಿಸಿಕೊಂಡು, ಗಾಂಭೀರ್ಯ ಹಾಗೂ ಸ್ಥೈರ್ಯದೊಂದಿಗೆ ಸಾರ್ವಜನಿಕರ ವಿಶ್ವಾಸವನ್ನು ಬೆಳೆಸಿಕೊಳ್ಳತಕ್ಕದ್ದು.

ಪೊಲೀಸರ ಘನತೆಯ ಮೂಲಾಧಾರವೇ ಅವರ ಅತ್ಯತ್ತಮ ಶ್ರೇಣಿಯ ಪ್ರಮಾಣಿಕತೆ, ಪೊಲೀಸರು ತಮ್ಮ ವ್ಯಯಕ್ತಿಕ ಜೀವನವನ್ನು ಅತ್ಯಂತ ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಜೊತೆಗೆ, ತಾಳ್ಮೆಯನ್ನು ಹೆಚ್ಚಿಸಿಕೊಂಡು, ತಮ್ಮ ಕೃತ್ಯ ಮತ್ತು ವಿಚಾರದಲ್ಲಿ ನೀತಿವಂತರೂ, ಸತ್ಯವಂತರೂ ಆಗಿದ್ದು, ವ್ಯಯಕ್ತಿಕ ಮತ್ತು ಅಧಿಕಾರಿ ಜೀವನದಲ್ಲಿ, ಸಾರ್ವಜನಿಕರು ತಮ್ಮನ್ನು ಅತ್ಯಂತ ಸುಸಂಸ್ಕೃತ ನಾಗರೀಕರೆಂದು ಪರಿಗಣಿಸುವ ರೀತಿಯಲ್ಲಿ ವತರ್ಿಸತಕ್ಕದ್ದು.
ಉಚ್ಚ ಮಟ್ಟದ ಶಿಸ್ತು, ಮೇಲಾಧಿಕಾರಿಗಳಿಗೆ ನಿಷ್ಕಳಂಕ ವಿಧೇಯತೆ, ಪೊಲೀಸ ದಳದ ಮೇಲಿನ ರಾಜಭಕ್ತಿ, ನಿರಂತರ ತರಬೇತಿ, ಹಾಗೂ ಸದಾ ಕಾರ್ಯತತ್ಪರತೆ, ಮುಂತಾದ ಉತ್ತಮ ಗುಣಗಳನ್ನು ತಮ್ಮೊಳಗೆ ಅಳವಡಿಸಿಕೊಂಡಾಗಲೇ, ತಮ್ಮ ಉಪಯುಕ್ತತೆಯ ಆಡಳಿತಕ್ಕೆ ಮತ್ತು ದೇಶಕ್ಕೆ ಹೆಚ್ಚುವರಿಯಾಗಿ ಲಭ್ಯವಾಗುತ್ತದೆ ಎನ್ನುವುದನ್ನು ಪೊಲೀಸರು ಮನಗಾಣಬೇಕು.

ಪ್ರತಿಯೊಬ್ಬ ಪೊಲೀಸು ಅಧಿಕಾರಿಯು ತಾನು ಸದಾ ಕಾಲ ಕರ್ತವ್ಯನಿರತನೆಂದು ತಿಳಿದುಕೊಳ್ಳುವುದಲ್ಲದೆ ಭಾರತದ ಯಾವುದೇ ಪ್ರದೇಶದಲ್ಲಿ ಸೇವೆ ಮಾಡಲು ಬದ್ದನಾಗಿದ್ದು, ಯಾವುದೇ ಪ್ರದೇಶದಲ್ಲಿ ನೇಮಕಗೊಂಡಿರಲಿ, ತಾನು ಓರ್ವ ಪೊಲೀಸ್ ಅಧಿಕಾರಿಯ ಕರ್ತವ್ಯ, ಸೌಲಭ್ಯ ಹಾಗೂ ಕಾನೂನುಬದ್ದ ಹೊಣೆಗಾರಿಕೆಯನ್ನು ಹೊಂದಿದ್ದೇನೆಂದು ಮನವರಿಕೆಮಾಡಿಕೊಳ್ಳಬೇಕು. ಮಾನವ ಹಕ್ಕುಗಳ ಪಾಲನೆ ಮಾಡುವುದು ಪೊಲೀಸರ ಸವರ್ೊಚ್ಚ ಕರ್ತವ್ಯವಾಗಿದೆ. ಪೊಲೀಸ್ ದಳವು ಒಂದು ಸಂಸ್ಥೆಯಾಗಿದ್ದು, ಜನರಿಗೆ ಉತ್ತರದಾಯಿತ್ವದಾಗಿದೆ ಹಾಗೂ ಪೊಲೀಸರ ಪಾತ್ರ ಮತ್ತು ಪ್ರಕಾರ್ಯಗಳು ಕಾನೂನನ್ನು ಜಾರಿಗೊಳಿಸುವುದಕ್ಕಷ್ಟೆ ಸೀಮಿತವಾಗಿರದೆ, ಸಾಮಾಜಿಕ ಸೇವೆಗಳು, ಹಾಗೂ ತುತರ್ು ಸೇವೆಗಳು ಒಳಗೊಂಡಂತೆ, ಇತರ ಹಲವಾರು ಪ್ರಕಾರ್ಯಗಳಿಗೂ ವ್ಯಾಪಿಸಿಕೊಂಡಿದೆ. ಮಾನವ ಹಕ್ಕುಗಳ ನಿಬಂಧನೆಗಳು ಉಲ್ಲಂಘನೆಯಾಗದಂತೆ ಪೊಲೀಸರು ನೋಡಿಕೊಳ್ಳುವುದಲ್ಲದೆ, ಮಾನವನ ಘನತೆಯನ್ನು ಕಾಪಾಡುವ ಎಲ್ಲಾ ಅಯಾಮಗಳ ಸಹಿತ ಗೌರವಿಸಬೇಕು. ಕಾನೂನಿನ ಅಧಿಪತ್ಯ ತತ್ವಗಳ ಅನುಸರಣೆಯಿಂದ ಮಾತ್ರವೇ ಮಾನವ ಹಕ್ಕುಗಳ ಪಾಲನೆ ಸಾಧ್ಯವೆಂಬುದನ್ನು ಸದಾ ನೆನಪಿನಲ್ಲಿಡಬೇಕು.