Karnataka State Police

ಅಪರಾಧ

1. ಸಂಜ್ಞೇಯ ಅಪರಾಧ ಎಂದರೇನು?
2. ಅಸಂಜ್ಞೇಯ ಅಪರಾಧ ಎಂದರೇನು?
3. ಪ್ರಥಮ ವರ್ತಮಾನ ವರದಿ ಎಂದರೇನು?
4. ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಲು ನಿರಾಕರಿಸಿದರೆ ಏನು ಮಾಡಬೇಕು?
5. ಅಸಂಜ್ಞೇಯ ಅಪರಾಧಗಳು ಠಾಣೆಗೆ ಬಂದಾಗ ಏನು ಮಾಡಬೇಕು?
6. ಪ್ರಥಮ ವರ್ತಮಾನ ವರದಿ ದಾಖಲಿಸಲು ಪೊಲೀಸರಿಗೆ ಶುಲ್ಕ ಅಥವಾ ಇನ್ನಾವುದೇ ಹಣವನ್ನು ನೀಡಬೇಕೆ? ಅಥವಾ ಪಿಯರ್ಾದಿಗೆ ಉಚಿತವಾಗಿ ಪ್ರಥಮ ವರ್ತಮಾನ ವರದಿಯ ನಕಲನ್ನು ನೀಡತಕ್ಕದ್ದೇ?
7. ಗಾಯಾಳುಗಳಿಗೆ ವೈದ್ಯಕೀಯ ಪರೀಕ್ಷೆಯ ವೇಳೆ ಅಥವಾ ನ್ಯಾಯಾಲಯದಲ್ಲಿ ಚಲನ್ ಪಡೆಯಲು ಹಣ ಪಾವತಿಸಬೇಕೆ? 8. ಜಾಮಿನೀಯ ಅಪರಾಧ ಎಂದರೇನು?
9. ಜಾಮಿನೀಯವಲ್ಲದ ಅಪರಾಧ ಎಂದರೇನು?
10. ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದವರನ್ನು ಪೊಲೀಸರು ತನಿಖೆಗಾಗಿ ಕರೆಯಿಸಬಹುದೇ?
11. ಸುಳ್ಳು ಪ್ರಥಮ ವರ್ತಮಾನ ವರದಿಯನ್ನು ನೀಡುವುದು/ದಾಖಲಿಸುವುದು ಅಪರಾಧವೆ?
12. ಸಾರ್ವಜನಿಕ ಸ್ಥಳದಲ್ಲಿ ಒತ್ತುವರಿಯಾದಾಗ ಪೊಲೀಸರಿಗೆ ದೂರು ನೀಡಿದರೂ ಸಹ ತೆರವುಗೊಳಿಸುವುದಿಲ್ಲ ಏಕೆ?
13. ಸಾರ್ವಜನಿಕರು ದೂರು ನೀಡಿದಾಗ ಮದ್ಯದ ಅಂಗಡಿಗಳನ್ನು ಪೊಲೀಸರು ತೆರವುಗೊಳಿಸುವುದಿಲ್ಲ ಏಕೆ?
14. ಮುಂಜಾಗ್ರತಾ ದಸ್ತಗಿರಿ ಎಂದರೇನು?

1. ಸಂಜ್ಞೇಯ ಅಪರಾಧ ಎಂದರೇನು?

ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಅಪರಾಧಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದ್ದು, ಸಂಜ್ಞೇಯ ಮತ್ತು ಅಸಂಜ್ಞೇಯ ಅಪರಾಧಗಳಾಗಿವೆ. ಕೇವಲ ಸಂಜ್ಞೇಯ ಅಪರಾಧಗಳಲ್ಲಿ ಮಾತ್ರ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಅಧಿಕಾರ ಹೊಂದಿರುತ್ತಾರೆ. ಈ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ವಾರೆಂಟಿಲ್ಲದೇ ಬಂಧಿಸಬಹುದು.
[ಖಿಠಠಿ ಠಜಿ ಠಿಚಿರಜ]

2. ಅಸಂಜ್ಞೇಯ ಅಪರಾಧ ಎಂದರೇನು?

ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ದಾಖಲು ಮಾಡುವುದಕ್ಕಾಗಲಿ, ತನಿಖೆ ಮಾಡುವುದಕ್ಕಾಗಲಿ ಅಥವಾ ಆರೋಪಿಯನ್ನು ದಸ್ತಗಿರಿ ಮಾಡುವುದಕ್ಕಾಗಲೀ ಸಾಧ್ಯವಿಲ್ಲದ ದಂಡ ಪ್ರಕ್ರಿಯಾ ಸಂಹಿತೆ ವರ್ಗದ ಅಪರಾಧಗಳನ್ನು ಅಸಂಜ್ಞೇಯ ಅಪರಾಧಗಳೆನ್ನುವರು. ಸಾಮಾನ್ಯವಾಗಿ ಈ ಅಪರಾಧಗಳು ಕ್ಷುಲ್ಲಕ/ಚಿಕ್ಕ ಅಪರಾಧಗಳಾಗಿರುತ್ತವೆ. ಉದಾ: ಒಬ್ಬರು ಮತ್ತೊಬ್ಬರನ್ನು ಬೆಯ್ಯುವುದು, ಗಾಯಗಳಾಗದಂತೆ ಹೊಡೆದಾಟ, ಭಯ ಹುಟ್ಟಿಸುವುದು ಇತ್ಯಾದಿ.
[ಖಿಠಠಿ ಠಜಿ ಠಿಚಿರಜ]

3. ಪ್ರಥಮ ವರ್ತಮಾನ ವರದಿ ಎಂದರೇನು?

ಒಂದು ಸಂಜ್ಞೇಯ ಅಪರಾಧವು ನಡೆದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸುವ ಪ್ರಥಮ ವರದಿಯನ್ನು ಪ್ರಥಮ ವರ್ತಮಾನ ವರದಿ ಎನ್ನುತ್ತಾರೆ. ಇದನ್ನು ಎಫ್.ಐ.ಆರ್. ಎಂದು ಹೇಳಲಾಗುತ್ತದೆ. ಇದು ಸಂಜ್ಞೇಯ ಅಪರಾಧದ ಮೊದಲ ಮಾಹಿತಿಯಾಗಿರುವುದರಿಂದ ಇದನ್ನು ಪ್ರಥಮ ವರ್ತಮಾನ ವರದಿ ಎಂದು ಕರೆಯುವರು. ಈ ಮಾಹಿತಿಯನ್ನು ಸ್ವೀಕರಿಸಿದ ನಂತರ ಪೊಲೀಸರು ಎಫ್.ಐ.ಆರ್. ದಾಖಲಿಸಿ ಅಪರಾಧದ ತನಿಖೆಯನ್ನು ಪ್ರಾರಂಭಿಸುತ್ತಾರೆ.
[ಖಿಠಠಿ ಠಜಿ ಠಿಚಿರಜ]

4. ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಲು ನಿರಾಕರಿಸಿದರೆ ಏನು ಮಾಡಬೇಕು?

ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಲು ನಿರಾಕರಿಸಿದರೆ ಘಟನೆಯ ಮಾಹಿತಿಯನ್ನು ಬರಹದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಳುಹಿಸಬಹುದು. ಅವರಿಗೆ ಸಂಜ್ಞೇಯ ಅಪರಾಧ ನಡೆದಿದೆ ಎಂದು ತಿಳಿದು ಬಂದರೆ ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ಮಾಡುವಂತೆ ಆದೇಶಿಸತಕ್ಕದ್ದು.
[ಖಿಠಠಿ ಠಜಿ ಠಿಚಿರಜ]

5. ಅಸಂಜ್ಞೆಯ ಅಪರಾಧಗಳು ಠಾಣೆಗೆ ಬಂದಾಗ ಏನು ಮಾಡಬೇಕು?

ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಅಸಂಜ್ಞೇಯ ಅಪರಾಧಗಳನ್ನು ನ್ಯಾಯಾಲಯದ ನಿದರ್ೇಶನವಿಲ್ಲದೆ ಪ್ರಥಮ ವರ್ತಮಾನ ವರದಿ ದಾಖಲಿಸಿ, ತನಿಖೆ ಕೈಗೊಳ್ಳಲು ಸಾಧ್ಯವಿಲ್ಲದಿರುವುದರಿಂದ ಠಾಣೆಯ ಸಾಮಾನ್ಯ ದಿನಚರಿಯಲ್ಲಿ ಈ ದೂರನ್ನು ನಮೂದಿಸಿ ಪಿಯರ್ಾದುದಾರನಿಗೆ ಸಂಬಂಧಿತ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಬೇಕು. ಠಾಣೆಯ ಸಾಮಾನ್ಯ ದಿನಚರಿಯಲ್ಲಿ ನಮೂದಿಸಿದ ಮಾಹಿತಿಯನ್ನು ಉಚಿತವಾಗಿ ಪಿಯರ್ಾದುದಾರನಿಗೆ ನೀಡಬಹುದು.
[ಖಿಠಠಿ ಠಜಿ ಠಿಚಿರಜ]

6. ಪ್ರಥಮ ವರ್ತಮಾನ ವರದಿ ದಾಖಲಿಸಲು ಪೊಲೀಸರಿಗೆ ಶುಲ್ಕ ಅಥವಾ ಇನ್ನಾವುದೇ ಹಣವನ್ನು ನೀಡಬೇಕೆ? ಅಥವಾ ಪಿಯರ್ಾದಿಗೆ ಉಚಿತವಾಗಿ ಪ್ರಥಮ ವರ್ತಮಾನ ವರದಿಯ ನಕಲನ್ನು ನೀಡತಕ್ಕದ್ದೇ?

ಖಂಡಿತವಾಗಿ ಇಲ್ಲ. ಪೊಲೀಸರಿಗೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮತ್ತು ನಂತರ ತನಿಖೆ ಕೈಗೊಳ್ಳಲು ಯಾವುದೇ ಶುಲ್ಕ ಅಥವಾ ಹಣವನ್ನು ನೀಡಬೇಕಾಗಿರುವುದಿಲ್ಲ. ಪೊಲೀಸ್ ಠಾಣೆಯಲ್ಲಿ ಯಾರಾದರೂ ಹಣ ನೀಡುವಂತೆ ಒತ್ತಾಯಿಸಿದರೆ ಮೇಲೆ ತಿಳಿಸಿದಂತೆ ತಡಮಾಡದೆ ದೂರನ್ನು ಮೇಲಾಧಿಕಾರಿಗಳಿಗೆ ನೀಡಬೇಕು. ಖಂಡಿತವಾಗಿ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಪ್ರಥಮ ವರ್ತಮಾನ ವರದಿಯ ಪ್ರತಿಯನ್ನು ಪಿಯರ್ಾದಿಗೆ ಉಚಿತವಾಗಿ ನೀಡತಕ್ಕದ್ದು.
[ಖಿಠಠಿ ಠಜಿ ಠಿಚಿರಜ]

7. ಗಾಯಾಳುಗಳಿಗೆ ವೈದ್ಯಕೀಯ ಪರೀಕ್ಷೆಯ ವೇಳೆ ಅಥವಾ ನ್ಯಾಯಾಲಯದಲ್ಲಿ ಚಲನ್ ಪಡೆಯಲು ಹಣ ಪಾವತಿಸಬೇಕೆ?

ಇಲ್ಲ. ಅಪರಾಧ ತನಿಖಾ ಕಾಲದಲ್ಲಿ ಗಾಯಾಳುಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಮತ್ತು ನ್ಯಾಯಾಲಯಕ್ಕೆ ಚಲನ್ ನಿವೇದಿಸಿಕೊಳ್ಳುವುದು ಸಕರ್ಾರದ ಕರ್ತವ್ಯವಾಗಿದ್ದು, ಯಾವುದೇ ಶುಲ್ಕವನ್ನು ಸಕರ್ಾರವು ವಿಧಿಸಿರುವುದಿಲ್ಲ. ತನಿಖೆಯ ಯಾವುದೇ ಹಂತದಲ್ಲಿ ಹಣಕ್ಕಾಗಿ ಒತ್ತಾಯ ಮಾಡಿದರೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುವುದು.
[ಖಿಠಠಿ ಠಜಿ ಠಿಚಿರಜ]

8. ಜಾಮಿನೀಯ ಅಪರಾಧ ಎಂದರೇನು?

ಜಾಮಿನೀಯ ಅಪರಾಧಗಳಲ್ಲಿ ಆರೋಪಿಯು ಜಾಮೀನು ಪಡೆಯುವುದು ತನ್ನ ಹಕ್ಕು ಎಂದು ಕೇಳಬಹುದು. ಪೊಲೀಸರು ಸದರಿ ವಿಚಾರದಲ್ಲಿ ತಮ್ಮ ವಶದಿಂದ ಆರೋಪಿಗೆ ಜಾಮೀನು ನೀಡಬಹುದಾಗಿದ್ದು, ಅದಕ್ಕೆ ಆರೋಪಿಯು ಪೂರಕವಾಗಿ ಸಿದ್ದವಿದ್ದಲ್ಲಿ ಪಡೆಯುವುದು.
[ಖಿಠಠಿ ಠಜಿ ಠಿಚಿರಜ]

9. ಜಾಮೀನು ರಹಿತ ಅಪರಾಧ ಎಂದರೇನು?

ಜಾಮೀನು ರಹಿತ ಅಪರಾಧ ಎಂದರೆ ಆರೋಪಿಗೆ ಜಾಮೀನು ಪಡೆಯಲು ಹಕ್ಕು ಬಾದ್ಯತೆ ಇರುವುದಿಲ್ಲ. ಸದರಿ ವಿಚಾರದಲ್ಲಿ ಪೊಲೀಸರಿಗೆ ಜಾಮೀನು ನೀಡಲು ಬರುವುದಿಲ್ಲ. ಆದರೆ ನ್ಯಾಯಾಲಯವು ಜಾಮೀನು ನೀಡಬಹುದಾಗಿರುತ್ತದೆ. ಜಾಮೀನು ಮತ್ತು ಜಾಮೀನು ರಹಿತ ಅಪರಾಧ ಪಟ್ಟಿಯ ವಿವರವನ್ನು ದಂಡ ಪ್ರಕ್ರಿಯಾ ಸಂಹಿತೆಯ 1ನೇ ಅನುಸೂಚಿಯಲ್ಲಿ ನೀಡಲಾಗಿದೆ.
[ಖಿಠಠಿ ಠಜಿ ಠಿಚಿರಜ]

10. ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದವರನ್ನು ಪೊಲೀಸರು ತನಿಖೆಗಾಗಿ ಕರೆಯಿಸಬಹುದೇ? /

ಖಂಡಿತವಾಗಿ ಹೌದು. ಏಕೆಂದರೆ ನ್ಯಾಯಾಲಯವು ದಸ್ತಗಿರಿ ಮಾಡದಂತೆ ಆದೇಶಿಸಿದ್ದು, ಪೊಲೀಸರಿಗೆ ತನಿಖೆಗೆ ಕರೆಸಲು ತಡೆ ಮಾಡಿರುವುದಿಲ್ಲ ಹಾಗೂ ಸದರಿ ಜಾಮೀನಿನ ನಿರ್ಬಂಧಗಳಲ್ಲಿ ಆರೋಪಿಯು ತನಿಖಾಧಿಕಾರಿಯ ಇಚ್ಚೆಯಂತೆ ತನಿಖೆಯಲ್ಲಿ ಸಹಕರಿಸಲು ಸೂಚಿಸಿರುತ್ತದೆ. ಸಹಕರಿಸಲು ನಿರಾಕರಿಸಿದ್ದಲ್ಲಿ ತನಿಖಾಧಿಕಾರಿಯು ನಿರೀಕ್ಷಣಾ ಜಾಮೀನನ್ನು ರದ್ದುಮಾಡಲು ನ್ಯಾಯಾಲಯದ ಮೊರೆ ಹೋಗಬಹುದಾಗಿರುತ್ತದೆ. ತನಿಖಾಧಿಕಾರಿಯು ಆರೋಪಿಯ ವಿರುದ್ಧ ಸಂಜ್ಞೇಯ ಮೊಕದ್ದಮೆ ದಾಖಲಾಗಿದ್ದರೂ ಸಹ ನ್ಯಾಯಾಲಯದ ನಿರೀಕ್ಷಣಾ ಜಾಮೀನು ಪಡೆದ ಸಂದರ್ಭದಲ್ಲಿ ದಸ್ತಗಿರಿ ಮಾಡದೇ ಜಾಮೀನು ಪಡೆದು ಬಿಡುಗಡೆ ಮಾಡತಕ್ಕದ್ದು.
[ಖಿಠಠಿ ಠಜಿ ಠಿಚಿರಜ]

11. ಸುಳ್ಳು ಪ್ರಥಮ ವರ್ತಮಾನ ವರದಿಯನ್ನು ನೀಡುವುದು/ದಾಖಲಿಸುವುದು ಅಪರಾಧವೆ?

ಹೌದು. ಸುಳ್ಳು ಪ್ರಥಮ ವರ್ತಮಾನ ವರದಿಯನ್ನು/ ಪಿಯರ್ಾದು ನೀಡುವುದು ಭಾರತ ದಂಡ ಸಂಹಿತೆಯ ಪ್ರಕಾರ ಶಿಕ್ಷಾರ್ಹವಾಗಿರುತ್ತವೆ. ಸದರಿ ಮಾಹಿತಿದಾರರ ವಿರುದ್ಧ ಭಾರತ ದಂಡ ಸಂಹಿತೆ ಕಲಂ 182 ಅಥವಾ ಕಲಂ 211ರ ರೀತ್ಯಾ ಕ್ರಮಕೈಗೊಳ್ಳಬಹುದು. ಖಾಸಗಿ ವ್ಯಕ್ತಿಗಳು ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಾದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದಾಗಿರುತ್ತದೆ.
[ಖಿಠಠಿ ಠಜಿ ಠಿಚಿರಜ]

12. ಸಾರ್ವಜನಿಕ ಸ್ಥಳ ಒತ್ತುವರಿಯಾದಾಗ ಪೊಲೀಸರಿಗೆ ದೂರು ನೀಡಿದರೂ ಸಹ ತೆರವುಗೊಳಿಸುವುದಿಲ್ಲ ಏಕೆ?

ಪೊಲೀಸರಿಗೆ ಒತ್ತುವರಿಯನ್ನು ತೆರವುಗೊಳಿಸಲು ಕಾನೂನು ರೂಪಿಸದ ಕಾರಣ ಮತ್ತು ಸದರಿ ಸ್ಥಳದ ಆಡಳಿತವನ್ನು ಸ್ಥಳೀಯ ಸಂಸ್ಥೆಗಳಾದ ನಗರ ಪಾಲಿಕೆ, ಮಹಾನಗರ ಪಾಲಿಕೆ, ಪುರಸಭೆ ತರಹದ ಸಂಸ್ಥೆಗಳಿಗೆ ತೆರವುಗೊಳಿಸುವ ಕರ್ತವ್ಯವನ್ನು ಸಕರ್ಾರ ವಹಿಸಿರುತ್ತದೆ. ಸದರಿ ಸಂಸ್ಥೆಗಳು ತೆರವುಗೊಳಿಸುವ ಕಾರ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕಾರ ಕೋರಿದ್ದಲ್ಲಿ, ಪೊಲೀಸರು ಸಹಕರಿಸುತ್ತಾರೆ.
[ಖಿಠಠಿ ಠಜಿ ಠಿಚಿರಜ]

13. ಸಾರ್ವಜನಿಕರು ದೂರು ನೀಡಿದಾಗ ಮದ್ಯದ ಅಂಗಡಿಗಳನ್ನು ಪೊಲೀಸರು ತೆರವುಗೊಳಿಸುವುದಿಲ್ಲ ಏಕೆ? /

ರಾಜ್ಯದಲ್ಲಿ 2 ರೀತಿಯ ಮದ್ಯದ ಅಂಗಡಿಗಳಿದ್ದು, ರಾಜ್ಯ ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆದವು ಮತ್ತು ಪರವಾನಿಗೆ ಪಡೆಯದ ಮದ್ಯದ ಅಂಗಡಿಗಳು. ರಾಜ್ಯ ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆಯದ ಮದ್ಯದ ಅಂಗಡಿಗಳ ಮೇಲೆ ಪೊಲೀಸರು ಕ್ರಮಕೈಗೊಳ್ಳಬಹುದು. ಪರವಾನಗಿ ಹೊಂದಿದ ಅಂಗಡಿಗಳ ಮೇಲೆ ಪರವಾನಗಿ ರದ್ದುಗೊಳಿಸುವ, ವಿಸ್ತರಿಸುವ ಅಧಿಕಾರವನ್ನು ರಾಜ್ಯ ಅಬಕಾರಿ ಇಲಾಖೆಗೆ ನೀಡಲಾಗಿದೆ.
[ಖಿಠಠಿ ಠಜಿ ಠಿಚಿರಜ]

14. ಮುಂಜಾಗ್ರತಾ ದಸ್ತಗಿರಿ ಎಂದರೇನು?

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸಂಜ್ಞೇಯ ಅಪರಾಧ ಸಂಭವಿಸುವುದನ್ನು ತಡೆಯಲು ಅವಶ್ಯಕವಾಗಿ ದಸ್ತಗಿರಿ ಮಾಡಲು ಸಶಕ್ತರಾಗಿರುತ್ತಾರೆ. ಪೊಲೀಸರು ಈ ಪರಿಸ್ಥಿತಿಯಲ್ಲಿ ದಸ್ತಗಿರಿ ಮಾಡುವುದು ಸವರ್ೆ ಸಾಮಾನ್ಯವಾಗಿರುತ್ತದೆ. ಆರೋಪಿಗಳ ದಸ್ತಗಿರಿಯನ್ನು ವಿಶೇಷ ಕಾನೂನುಗಳಾದ ರಾಷ್ಟ್ರೀಯ ಭದ್ರತಾ ಕಾಯ್ದೆ, ಪಿ.ಐ.ಟಿ.ಎನ್.ಡಿ.ಪಿ.ಎಸ್. ಕಾಯ್ದೆ 1988 (ಪ್ರಿವೆನ್ಷನ್ ಅಫ್ ಇಲ್ಲಿಸಿಟ್ ಟ್ರಾಫಿಕ್ ಇನ್ ನಾಕರ್ೋಟಿಕ್ ಡ್ರಗ್ಸ್ ಅಂಡ್ ಸ್ಯಕೋಟ್ರೊಫಿಕ್ ಸಬ್ಸ್ಟ್ಯಾನ್ಸಸ್ ಆಕ್ಟ್), ಕನರ್ಾಟಕ ಪೊಲೀಸ್ ಕಾಯಿದೆ 1963, ದಂಡ ಪ್ರಕಿಯಾ ಸಂಹಿತೆ ಕಾಯ್ದೆಗಳನ್ವಯ ಕಳ್ಳ ಸಾಗಾಣೆದಾರರು, ಶಾಂತಿಗೆ ಭಂಗ ತರುವವರನ್ನು, ಭಯೋತ್ಪಾದಕರನ್ನು ದಸ್ತಗಿರಿ ಮಾಡಬಹುದು