Karnataka State Police

ಪ್ರಥಮ ವರ್ತಮಾನ ವರದಿ ಪ್ರಕರಣಗಳು

ಪ್ರಥಮ ವರ್ತಮಾನ ವರದಿ ಎಂದರೆ ಏನು?

ಸಂಜ್ಞೇಯ ಅಪರಾಧ ಮಾಡುವುದಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಾಚಾರವನ್ನು ಪೊಲೀಸ್ ಠಾಣೆಯ ಆಡಳಿತವನ್ನು ಹೊಂದಿರುವ ಒಬ್ಬ ಅಧಿಕಾರಿಗೆ ಬಾಯಿಮಾತಿನಲ್ಲಿ ಕೊಟ್ಟಿದ್ದರೆ ಅವನು ಅಥವಾ ಅವನ ನಿರ್ದೇಶನದ ಮೇರೆಗೆ ಅದನ್ನು ಬರವಣಿಗೆಗೆ ಇಳಿಸತಕ್ಕದ್ದು ಮತ್ತು ಸಮಾಚಾರ ಕೊಟ್ಟವನಿಗೆ ಓದಿ ಹೇಳತಕ್ಕದ್ದು, ಮತ್ತು ಬರಹದಲ್ಲಿ ಕೊಡಲಾದ ಅಥವಾ ಮೇಲೆ ಹೇಳಿದಂತೆ ಬರವಣಿಗೆಗೆ ಇಳಿಸಲಾದ ಪ್ರತಿಯೊಂದು ಸಮಾಚಾರಕ್ಕೂ ಅದನ್ನು ಕೊಡುವ ವ್ಯಕ್ತಿಯು ಸಹಿ ಮಾಡತಕ್ಕದ್ದು.

ಸಂಜ್ಞೇಯ ಅಪರಾಧ ಎಂದರೆ ಏನು?

ಪೊಲೀಸ್ ಅಧಿಕಾರಿಯು ಮೊದಲನೇ ಅನುಸೂಚನೆಗನುಗುಣವಾಗಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ವಿಧಿಯ ಮೇರೆಗೆ ವಾರಂಟು ಇಲ್ಲದೆ ದಸ್ತಗಿರಿಮಾಡಬಹುದಾದ ಅಪರಾಧ ಅಥವಾ ಮೊಕದ್ದಮೆ.

ಅಸಂಜ್ಞೇಯ ಅಪರಾಧ ಎಂದರೆ ಏನು?

ಪೊಲೀಸ್ ಅಧಿಕಾರಿಯು ವಾರಂಟಿಲ್ಲದೆ, ದಸ್ತಗಿರಿ ಮಾಡುವ ಅಧಿಕಾರವನ್ನೂ ಹೊಂದಿರದ ಅಪರಾಧ ಅಥವಾ ಮೊಕದ್ದಮೆ ಆಗಿರುತ್ತದೆ.

ಯಾರು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಬಹುದು?


1. ತೊಂದರೆಗೆ/ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಅಥವಾ ಆತನ/ಆಕೆಯ ಪರವಾಗಿ ಯಾರಾದರೂ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಬಹುದು.
2. ಒಂದು ಸಂಜ್ಞೇಯ ಅಪರಾಧವಾದ ಬಗ್ಗೆ ಮಾಹಿತಿ ಇರುತ್ತದೆಯೋ ಅವರು 1) ಪ್ರತ್ಯಕ್ಷ ಸಾಕ್ಷಿಯಾಗಿರ ಬಹುದು 2) ಯಾರಿಂದಲಾದರೂ ಕೇಳಿದ ಮಾಹಿತಿಯಾಗಿರ ಬಹುದು
3.ಪೊಲೀಸರು ಯಾವ ಯಾವ ಕಾರಣಗಳಿಗಾಗಿ ತನಿಖೆಯನ್ನು ಕೈಗೊಳ್ಳಲು ನಿರಾಕರಿಸಬಹುದು?
4.ಪ್ರಥಮ ವರ್ತಮಾನ ವರದಿ ದಾಖಲಿಸಿದ ನಂತರವು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಳ್ಳಲು ನಿರಾಕರಿಸಬಹುದು; ಆದರೆ ನಿರಾಕರಣೆಗೆ ಸಮಂಜಸವಾದ ಕಾರಣವನ್ನು ನೀಡಬೇಕು
5. ಅಸಂಜ್ಞೇಯ ಅಪರಾಧವಾಗಿದ್ದಲ್ಲಿ
6.ತನಿಖೆಮಾಡಲು ಯಾವುದೇ ನಿಖರವಾದ ಕಾರಣಗಳು ಸಿಗದಿದ್ದಲ್ಲಿ
7.ನಷ್ಟದ ಮೌಲ್ಯ ತುಂಬಾ ಕಡಿಮೆ ಇದ್ದಲ್ಲಿ
8.ತನಿಖೆಗೆ ಯೋಗ್ಯವಿಲ್ಲದೆ ಇದ್ದಲ್ಲಿ

ಪ್ರಥಮ ವರ್ತಮಾನ ವರದಿಯ ಪ್ರಾಮುಖ್ಯತೆ ಏನು?

ಸಂಜ್ಞೇಯ ಅಪರಾಧಗಳಲ್ಲಿ ಪ್ರಥಮ ವರ್ತಮಾನ ವರದಿಗೆ ಅಗ್ರಸ್ಥಾನ ನೀಡಲಾಗಿದೆ, ಏಕೆಂದರೆ ಪ್ರಥಮ ವರ್ತಮಾನ ವರದಿಯು ದಾಖಲಾದ ನಂತರವೇ ತನಿಖೆಯು ಪ್ರಾರಂಭವಾಗುತ್ತದೆ.

ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಬೇಕಾದರೆ ಅನುಸರಿಸಬೇಕಾದ ಕ್ರಮಗಳೇನು?

ಕಲಂ 154 ಸಿಆರ್ಪಿಸಿ ಪ್ರಕಾರ ಪ್ರಥಮ ವರ್ತಮಾನ ವರದಿಯನ್ನು ದಾಖಲು ಮಾಡಬೇಕಾದರೆ ಈಕೆಳಕಂಡ ಮಾಹಿತಿಯು ಇರಲೇಬೇಕಾಗುತ್ತದೆ.
a.ಮಾಹಿತಿಯು ಸಂಜ್ಞೇಯ ಅಪರಾಧಕ್ಕೆ ಸಂಬಂಧಪಟ್ಟಿರಬೇಕು. b.ಮೊಟ್ಟಮೊದಲ ಬಾರಿಗೆ ಠಾಣಾಧಿಕಾರಿಗೆಕೊಟ್ಟಿರಬೇಕು c.ಅದು ಲಿಖಿತ ರೂಪದಲ್ಲಾಗಲೀ ಅಥವಾ ಮೌಖಿಕವಾಗಿರಬೇಕು. ಮೌಖಿಕವಾಗಿದ್ದರೆ, ಠಾಣಾಧಿಕಾರಿಯು ಅದನ್ನು ಲಿಖಿತ ರೂಪದಲ್ಲಿ ಪಡೆದು ಅದನ್ನು ಪಿರ್ಯಾದಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ಓದಿ ಹೇಳಿ ಅವರ ಸಹಿಯನ್ನು ಪಡೆಯಬೇಕು.

ಪ್ರಥಮ ವರ್ತಮಾನ ವರದಿಯಲ್ಲಿ ಏನೇನು ಇರಬೇಕು?
i.ಫಿಯರ್ಾದಿದಾರರ ಹೆಸರು ಮತ್ತು ವಿಳಾಸ
ii. ಕೃತ್ಯ ನಡೆದ ದಿನಾಂಕ, ಸಮಯ ಮತ್ತು ಕೃತ್ಯ ನಡೆದ ಸ್ಥಳದ ವಿವರ
iii. ಕೃತ್ಯ ನಡೆದಿರುವ ಬಗ್ಗೆ ಸಾರಾಂಶ
iv.ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಯ ಪೂರ್ಣ ವಿವರ
v.ಸಾಕ್ಷದಾರರು ಇದ್ದಲ್ಲಿ ಅವರ ಪೂರ್ಣ ಮಾಹಿತಿ

ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ನಿರಾಕರಿಸಿದರೆ, ತೆಗೆದುಕೊಳ್ಳಬೇಕಾದ ಕ್ರಮ :

ಕಾನೂನು ರೀತ್ಯ ಇದು ತಪ್ಪು. ಅಪರಾಧವು ಎಲ್ಲೇ ಜರುಗಿರಲಿ, ಪೊಲೀಸ್ ಠಾಣೆಗೆ ಸಂಜ್ಞೆಯ ಅಪರಾಧದ ಸುದ್ದಿ ಬಂದಾಗ ಕೇಸು ದಾಖಲಿಸಬೇಕು. ಅನಂತರ ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ನೀಡಬಹುದು. ಕೇಸು ದಾಖಲಿಸಲು ನಿರಾಕರಿಸಿದಾಗ, ನಾವು ಆ ಠಾಣೆಯ ಮೇಲುಸ್ತುವಾರಿ ಹೊತ್ತಿರುವ ಪೊಲೀಸ್ ಅಧೀಕ್ಷಕರು/ನಗರದಲ್ಲಿ ಉಪ-ಪೊಲೀಸ್ ಆಯುಕ್ತರಿಗೆ ನಿಮ್ಮ ಲಿಖಿತ ದೂರನ್ನು ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಆ ಮೇಲಾಧಿಕಾರಿ ಖುದ್ದಾಗಿ ಇಲ್ಲವೆ ತಮ್ಮ ಕೆಳಗಿನ ಯಾವುದೇ ಅಧಿಕಾರಿಯ ಮೂಲಕ ತನಿಖೆ ಮಾಡಿಸಬಹುದು