Karnataka State Police

ಪದಕಗಳು

ಭಾರತ ಸರ್ಕಾರದವರು ಕೆಳಗೆ ನಮೂದಿಸಿದ ಪದಕಗಳನ್ನು ಸ್ಥಾಪಿಸಿದ್ದಾರೆ:-

a.ಶೌರ್ಯ ಅಥವಾ ಗಣನೀಯ ಸೇವೆಗಾಗಿ, ರಾಷ್ಟ್ರಾಧ್ಯಕ್ಷರ, ಪೊಲೀಸ್ ಮತ್ತು ಅಗ್ನಿಶಾಮಕ ಸೇವಾ ಪದಕಗಳು:
b.ಶೌರ್ಯ ಅಥವಾ ಶ್ಲಾಘನೀಯ ಸೇವೆಗಾಗಿ ಪೊಲೀಸ್ ಪದಕಗಳು;
c.ಜೀವ ಉಳಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗಳ ಪದಕ.
d.ಪೊಲೀಸ್ (ವಿಶಿಷ್ಟ ಸೇವಾ) ಪದಕ.
e.ರಾಷ್ಟ್ರಪತಿಯವರ ಹೆಸರಿನ ಪೊಲೀಸ್ ಮತ್ತು ಅಗ್ನಿಶಾಮಕ ಪದಕವನ್ನು ಮತ್ತು ಪೊಲೀಸ್ ಪದಕವನ್ನು, ಪೊಲೀಸ್ ದಳದವರಿಗೆ ಮತ್ತು ಸಂಘಟಿತ ಅಗ್ನಿಶಾಮಕ ದಳದವರಿಗೆ, ಶೌರ್ಯಕ್ಕೆ ಅಥವಾ ಶ್ಲಾಘನೀಯ ಸೇವೆಗಳಿಗೆ ಮತ್ತು ಕರ್ತವ್ಯ ಪಾಲನೆಯಲ್ಲಿ ವಿಶೇಷ ನಿಷ್ಠೆ ತೋರಿದವರಿಗೆ ಕೂಡಲಾಗುತ್ತದೆ. ರಾಷ್ಟ್ರಾಧ್ಯಕ್ಷರ ಹೆಸರಿನ ಅಥವಾ ಪೊಲೀಸ್ ಅಗ್ನಿಶಾಮಕ ಸೇವಾ ಪದಕ, ಅಥವಾ ಪೊಲೀಸ್ ಪದಕವನ್ನು ಶೌರ್ಯಕ್ಕಾಗಿ, ಒಂದೊಂದು ಶೌರ್ಯದ ಕಾರ್ಯಗಳಿಗೆ ಕೊಟ್ಟರೆ, ಅಧ್ಯಕ್ಷರ ಪೊಲೀಸ್ ಮತ್ತು ಅಗ್ನಿಶಾಮಕ ಸೇವಾ ಪದಕಗಳನ್ನು, ಗಣನೀಯ ಸೇವೆಗೆ, ಅಸಾಧಾರಣ ಕೌಶಲ್ಯ ಪ್ರದರ್ಶನ, ಅಥವಾ ಗಣನೀಯ ಅರ್ಹತೆಗೆ (ಉತ್ಕೃಷ್ಟ ಜಾಣ್ಮಗೆ) ಕೊಡಲಾಗುತ್ತದೆ.
f.ಸಾಮಾನ್ಯವಾಗಿ ಒಬ್ಬ ಅಧಿಕಾರಿಯ 20 ವರ್ಷ ಸೇವೆ ಪೂರ್ಣಗೊಳಿಸುವವರೆಗೆ ಮತ್ತು ಪೊಲೀಸ್ ಪದಕವನ್ನು ಪಡೆದ ನಂತರ 6 ವರ್ಷಗಳ ಅವಧಿ ಮೀರುವವರೆಗೆ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಒಬ್ಬ ಅಧಿಕಾರಿಗೆ ಕೊಡುವಂತೆ ಯಾವುದೇ ಶಿಫಾರಸ್ಸನ್ನು ಮಾಡತಕ್ಕದ್ದಲ್ಲ. ಅದೇ ರೀತಿಯಾಗಿ ಒಬ್ಬ ಅಧಿಕಾರಿಯು 15 ವರ್ಷ ಸೇವೆ ಪೂರ್ಣಗೊಳಿಸುವವರೆಗೆ ಪೊಲೀಸ್ ಪದಕವನ್ನು ಕೊಡುವಂತೆ ಯಾವುದೇ ಶಿಫಾರಸ್ಸನ್ನು ಮಾಡತಕ್ಕದ್ದಲ್ಲ. ಆದರೆ ಕೆಲವು ವಿಶಿಷ್ಟ ಪ್ರಸಂಗಗಳಲ್ಲಿ, ಗಣ್ಯ ಸೇವೆಗೆ ಅಥವಾ ಶ್ಲಾಘನೀಯ ಸೇವೆಗೆ ಕೊಡಲಾಗುವ ಪದಕಗಳ ಅವಧಿಯ ಮಿತಿ, ಮತ್ತು ಒಂದು ಬಹುಮಾನವನ್ನು ಕೊಟ್ಟ ಅವಧಿಯ ನಂತರ ಮತ್ತೊಂದು ಬಹುಮಾನ ಕೊಡಲು ನಿಗದಿಪಡಿಸಿದ ಅವಧಿಯು ಮುಗಿಯಲು, ವಿನಾಯತಿ ಕೊಡುವ ಅನಿವಾರ್ಯ ಪ್ರಕರಣಗಳಿರಬಹುದು. ಅಂತಹ ಪ್ರಸಂಗಗಳಲ್ಲಿ ಭಾರತ ಸರಕಾರವು, ತನ್ನ ವಿವೇಚನೆಯನ್ವಯ, ಆ ನಿಯಮಗಳನ್ನು ಸಡಿಲಿಸಬಹುದು. ಅಂತಹ ಶಿಫಾರಸ್ಸುಗಳನ್ನು ಕಳುಹಿಸುವಾಗ, ಸಾಮಾನ್ಯ ನಿಯಮಗಳನ್ನು ಅನುಸರಿಸದೆ, ಪ್ರತ್ಯೇಕವಾಗಿ ಕಳುಹಿಸತಕ್ಕದ್ದು ಮತ್ತು ಅವುಗಳೊಡನೆ ಸಾಮಾನ್ಯ ನಿಯಮಗಳ ವಿನಾಯತಿಯನ್ನು ದೃಢೀಕರಿಸುವ ವಿಶೇಷ ಕಾರಣಗಳ ಒಂದು ನಿರೂಪಣೆಯ ನ್ನು ಕಳುಹಿಸತಕ್ಕದ್ದು. ಆದರೆ ಈ ವಿಶಿಷ್ಟ ನಿಯಮಗಳನ್ವಯ ಮಾಡಲಾಗುವ ಶಿಫಾರಸ್ಸುಗಳು ಕೇವಲ ವಿಶೇಷ ಪ್ರಸಂಗಗಳಲ್ಲಿ ಮಾತ್ರ ಮಾಡತಕ್ಕದ್ದೆನ್ನುವುದನ್ನು ಗಮನದಲ್ಲಿಟ್ಟುಕೊಳ್ಳತಕ್ಕದ್ದು.
g.ಆದೇಶ 361ರಲ್ಲಿ ಕಾಣಿಸಿದ ನಿಯಮಗಳು, ಶೌರ್ಯಕ್ಕೆ ಕೊಡಲಾಗುವ ಒಂದು ಬಹುಮಾನಕ್ಕೆ ಅನ್ವಯಿಸುವುದಿಲ್ಲ.
h.ಒಬ್ಬ ಅಧಿಕಾರಿಗೆ, ಈ ಮುಂಚೆ ಆತನ ಗಣ್ಯ ಸೇವೆಗಾಗಿ ರಾಷ್ಟ್ರಪತಿಯವರ ಪೊಲೀಸ್ ಪದಕದಂಥ ಪದಕವನ್ನು ಕೊಟ್ಟಿದ್ದರೆ, ಆತನಿಗೆ ಕೆಳದರ್ಜೆಯ ಪೊಲೀಸ್ ಪದಕವನ್ನು ಬಹುಮಾನವಾಗಿ ಕೊಡುವುದು ಸಮಂಜಸವಲ್ಲ. ಆದರೆ ಒಂದು ಕೆಳಗಿನ ಶ್ರೇಣಿಯ ಪೊಲೀಸ್ ಶೌರ್ಯದ ಪದಕವನ್ನು ಆತನಿಗೆ ಬಹುಮಾನವಾಗಿ ಕೊಡಲು ಆಕ್ಷೇಪಣೆಯಿಲ್ಲ ಉದಾಹರಣೆಗಾಗಿ ಅಧಿಕಾರಿಯು ಒಂದು ಹೆಚ್ಚಿನ ಶೌರ್ಯದ ಪದಕವನ್ನು ಪಡೆದಿದ್ದರೂ ಸಹಿತ ಪೊಲೀಸ್ ಶೌರ್ಯ ಪದಕವನ್ನು ಆತನಿಗೆ ಕೊಡಬಹುದು.
i.ಶೌರ್ಯಕ್ಕಾಗಿ ಪದಕವನ್ನು ಬಹುಮಾನವಾಗಿ ಕೊಡಲು ಮಾಡುವ ಶಿಫಾರಸ್ಸುಗಳು ಗುಪ್ತವೆಂದು, ನಮೂದಿಸಬೇಕು. ಪೊಲೀಸ್ ಮಹಾನಿರ್ದೇಶಕ ಮತ್ತು ಉಪಮಹಾನಿರೀಕ್ಷಣಾಧಿಕಾರಿ ಅಥವಾ ಆಯುಕ್ತರ (ಕಮೀಷನರ್) ಮೂಲಕ, ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶೌರ್ಯಕ್ಕೆ ಅರ್ಹವಾದ ಕಾರ್ಯವನ್ನು ಮಾಡಿದ ಕೊಡಲೇ ಶಿಫಾರಸ್ಸು ಕಳುಹಿಸತಕ್ಕದ್ದು. ಭಾರತ ಸರ್ಕಾರದವರು ಅವುಗಳು ತಮಗೆ ಬಂದ ಕ್ರಮದಲ್ಲಿಯೇ ಅವುಗಳನ್ನು ಪರಿಗಣಿಸುತ್ತಾರೆ.
j.ಇತರೆ ಪ್ರಕರಣಗಳಲ್ಲಿ ಬಹುಮಾನಗಳನ್ನು ವರ್ಷದಲ್ಲಿ ಎರಡು ಸಲ ಎಂದರೆ ಗಣರಾಜ್ಯ ದಿನಾಚರಣೆ ದಿವಸ (ಜನವರಿ 26) ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ (ಆಗಸ್ಟ್ 1 ರಂದು) ಕೊಡುತ್ತಾರೆ. ಭಾರತ ಸರ್ಕಾರರದ ಬಹುಮಾನಗಳಿಗಾಗಿ ಮಾಡಲಾದ ಶಿಫಾರಸ್ಸುಗಳು ಅಕ್ಟೋಬರ್ 26 ಮತ್ತು ಮೇ 15 ರಂದು ಬಾಕಿ ಇರುವಂಥವುಗಳಿಗೆ ಸಂದರ್ಭಾನುಸಾರ ನಿರೀಕ್ಷಣಾಧಿಕಾರಿ ಅಥವಾ ಆಯುಕ್ತಕನ (ಕಮೀಷನರ್) ಮೂಲಕ ಕಳುಹಿಸಲಾದವುಗಳನ್ನು ಗುಪ್ತದಾಖಲೆಯೆಂದು ನಮೂದಿಸತಕ್ಕದ್ದು ಮತ್ತು ಅವುಗಳು ಪೊಲೀಸ್ ಮಹಾನಿಧರ್ೇಶಕ ಮತ್ತು ಪೊಲೀಸ್ ಮಹಾನಿರೀಕ್ಷಣಾಧಿಕಾರಿಗೆ ಪ್ರತಿ ವರ್ಷ ಸೆಪ್ಟಂಬರ್ 10 ಮತ್ತು ಏಪ್ರೀಲ್ 1 ರಂದು ಕ್ರಮವಾಗಿ ತಲುಪುವಂತೆ ಕಳುಹಿಸತಕ್ಕದ್ದು. ಶಿಫಾರಸ್ಸು ಮಾಡಲಾದ ವ್ಯಕ್ತಿಗಳ ಪೂರ್ಣ ಹೆಸರು ಅವರ ಶ್ರೇಣಿ ಪೊಲೀಸ್ ಸೇವೆಯನ್ನು ಎಷ್ಟು ವರ್ಷ ಮಾಡಿರುವರು ಮತ್ತು ಅವರು ಈ ಮುಂಚೆ ಮಾಡಿದ ಉತ್ತಮ ಕೆಲಸಗಳ ವಿವರ ಮತ್ತು ಅವರಿಗೆ ಪದಕ ಕೊಡುವಂತೆ ಶಿಫಾರಸ್ಸು ಮಾಡಲಾದ ನಿರ್ದಿಷ್ಟ ಕಾರ್ಯ ಅಥವಾ ಕಾರ್ಯಗಳು ಅವುಗಳು ಜರುಗಿದ ದಿನಾಂಕಗಳೊಡನೆ ಕೊಡತಕ್ಕದ್ದು. ಶಿಫಾರಸ್ಸುಗಳ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯ ಉತ್ತಮ ಕಾರ್ಯ ನಿರ್ವಹಣೆಯ ನಮೂದುಗಳ ಒಂದು ಯಾದಿಯನ್ನು ಮತ್ತು ಆತನಿಗೆ ಶ್ಲಾಘನೀಯ ಸೇವೆಗಳಿಗೆ ಈ ಮುಂಚೆ ಪೊಲೀಸ್ ಪದಕವನ್ನು ಕೊಟ್ಟ ಬಗ್ಗೆ ತಿಳಿಸತಕ್ಕದ್ದು.
k.ಪ್ರತಿಯೊಂದು ಶಿಫಾರಸ್ಸಿನ ಜೊತೆಗೆ ಈ ಕೆಳಗೆ ನಮೂದಿಸಿದ ನಮೂನೆಯಲ್ಲಿ ಒಂದು ಪ್ರಮಾಣ ಪತ್ರವನ್ನು ಕಳುಹಿಸತಕ್ಕದ್ದು.

ಪ್ರಮಾಣ ಪತ್ರ

i.ಶ್ರೀ ___________ ಇವರಿಗೆ ಶೌರ್ಯ /ವಿಶಿಷ್ಟ ಅರ್ಹತಾ ಸೇವೆಗಾಗಿ ರಾಷ್ಟ್ರಪತಿಯವರ ಆರಕ್ಷಕ ಪದಕ ಮತ್ತು ಅಗ್ನಿಶಾಮಕ ದಳದ ಸೇವೆಗಳ ಪದಕ ಪೊಲೀಸ್ ಪದಕ ಕೊಡುವಂತೆ ಶಿಫಾರಸ್ಸು ಮಾಡಿದ್ದನ್ನು ದೃಢೀಕರಿಸಲಾಗಿದೆ. ಇವರ ಪ್ರಾಮಾಣಿಕತೆ ಸಂಶಯಾತೀತ ಎನಿಸಿದೆಯೆಂದು ಮತ್ತು ಅವರು ವಾಗ್ದಂಡನೆಗೆ ಗುರಿಯಾಗಿಲ್ಲ ಹಾಗು ಯಾವುದೇ ನ್ಯಾಯಾಲಯದಲ್ಲಿ ನಿಂದನೆಯ ಪ್ರಕರಣಕ್ಕೊಳಪಟ್ಟಿಲ್ಲವೆಂದು ದೃಢೀಕರಿಸಲಾಗಿದೆ ಶಿಫಾರಸ್ಸು ಮಾಡಲಾಗಿರುವ ಮಹಾನಿಧರ್ೇಶಕರ ವರ್ತನೆಗೆ ಸಂಬಂದಿಸಿದಂತೆ ಯಾವುದೆ ನ್ಯಾಯಾಂಗದಲ್ಲಿ ಇತ್ಯರ್ಥವಾಗದ ಯಾವುದೇ ಪ್ರಕರಣ ಇರುವುದಿಲ್ಲ ಎಂದು ದೃಢೀಕರಿಸಲಾಗಿದೆ.
ii.ಒಬ್ಬ ಅಧಿಕಾರಿಯು ದಂಡನೆಗೊಳಗಾಗಿದ್ದರೆ ಆತನಿಗೆ ಗಣ್ಯ ಅಥವಾ ಶ್ಲಾಘನೀಯ ಸೇವೆಗೆ ಒಂದು ಪದಕವನ್ನು ಬಹುಮಾನವಾಗಿ ಕೊಡುವಂತೆ ಶಿಫಾರಸ್ಸು ಮಾಡತಕ್ಕದ್ದಲ್ಲ. ಆದರೆ ನ್ಯಾಯಾಲಯದ ಹೊರಗೆ ಒಬ್ಬ ಅಧಿಕಾರಿಯು ಸಣ್ಣ ತಪ್ಪಿಗಾಗಿ ನಿಂದನೆಗೆ ಅಥವಾ ಚಿಕ್ಕ ದಂಡನೆಗೊಳಗಾದ ಪ್ರಕರಣಗಳಲ್ಲಿ ಆತನಿಗೆ ಯಾವ ಸಂದರ್ಭದಲ್ಲಿ ಮತ್ತು ಯಾವ ಸ್ವರೂಪದ ದಂಡನೆಯಾಯಿತೆನ್ನುವ ಒಂದು ವಿವರಣೆಯನ್ನು ಕೊಡುತ್ತಾ ಆ ಅಧಿಕಾರಿಗೆ ಬಹುಮಾನ ಕೊಡಲು ವಿಶೇಷವಾಗಿ ಪರಿಗಣಿಸಬಹುದಾದ ಸಮರ್ಥನೆಯ ಕಾರಣಗಳನ್ನು ಕೊಡತಕ್ಕದ್ದು.
iii.ಆದೇಶ 360 ರಲ್ಲಿ ಎರಡು ಪದಕಗಳನ್ನು ಕೊಡಲು ಇರುವ ನಿಯಮ ಮತ್ತು ಆದೇಶಗಳನ್ನು ಮತ್ತು ರಾಷ್ಟ್ರಪತಿಯ ಕಾರ್ಯದರ್ಶಿ ಶೌರ್ಯಕ್ಕಾಗಿ ಕೊಡುವ ಪದಕಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಆದೇಶಗಳನ್ನು ಅನುಬಂಧ ಘಿಗಿ ರಲ್ಲಿ ಕೊಡಲಾಗಿದೆ.
iv.ಶ್ಲಾಘನೀಯ ಸೇವೆಗಾಗಿ, ರಾಷ್ಟ್ರಪತಿಯವರ ಪೊಲೀಸ್ ಪದಕ ಮತ್ತು ಅಗ್ನಿ ಶಾಮಕ ಪದಕ, ಮತ್ತು ಪೊಲೀಸ್ ಪದಕ (ಪೊಲೀಸ್ ಮೆಡಲ್) ಕೊಡುವಂತೆ ಹೆಸರುಗಳ ಯಾದಿಯನ್ನು ಕಳುಹಿಸುವಾಗ ಅಂಥ ಪದಕಕ್ಕಾಗಿ ಪರಿಗಣಿಸಲಾಗುವ ಅಧಿಕಾರಿಯ ಛಾಯಚಿತ್ರಗಳನ್ನು (ಫೋಟೋಗಳನ್ನು) ಕಳುಹಿಸತಕ್ಕದ್ದು. ನಾಮಾಂಕಿತವಾದವರ ಛಾಯಾಚಿತ್ರಗಳನ್ನು (ಫೋಟೋಗಳನ್ನು) ಅವರ ಹೆಸರಗಳನ್ನು ಪದಕಗಳಿಗೆ ಶಿಫಾರಸ್ಸು ಮಾಡಲಾಗಿದೆ ಎನ್ನುವುದನ್ನು ತಿಳಿಸದೆ, ಪಡೆಯತಕ್ಕದ್ದು.

ಶೌರ್ಯ ಪ್ರದರ್ಶನಕ್ಕಾಗಿ ಶಿಫಾರಸ್ಸುಗಳನ್ನು ಕಳಿಸುವಾಗ ಆ ಶೌರ್ಯಕಾರ್ಯದ ಬಗ್ಗೆ ನಮೂದು ಮಾಡುವುದರ ಜೊತೆಗೆ ಈ ಕೆಳಕಂಡ ಮಾಹಿತಿಯನ್ನು ದಸ್ತಾವೇಜುಗಳನ್ನು ಒದಗಿಸತಕ್ಕದ್ದು
a.ಘಟನೆಯ ಬಗ್ಗೆ ಪ್ರಥಮ ಮಾಹಿತಿ ವರದಿಯ ಅಥವಾ ಮಹಾನಿದರ್ೆಶಕರಿಗೆ ಅಥವಾ ರಾಜ್ಯ ಸರ್ಕಾರಕ್ಕೆ ಮಾಡಿದ ವರದಿಯ ಪ್ರತಿಯನ್ನು.
b.ಪೊಲೀಸ್ ಪಡೆಯ ಸಂಯೋಜನೆಯ ಬಗ್ಗೆ ವಿವರಗಳು ಮತ್ತು ಪಡೆಯನ್ನು ಗುಂಪುಗಳಾಗಿ ವಿಭಾಗಿಸಿರುವ ಸಂದರ್ಭದಲ್ಲಿ ಪ್ರತಿಯೊಂದು ಗುಂಪಿನಲ್ಲಿ ಸೇರಿರುವ ಪೊಲೀಸ್ ಸಂಖ್ಯೆಯನ್ನು ನಮೂದಿಸತಕ್ಕದ್ದು. ಪೊಲೀಸ್ ಪಡೆಯು ಕೊಂಡ್ಯೊಯ್ಯುವ ಆಯುಧಗಳ ವಿವರಗಳನ್ನು ನಮೂದಿಸತಕ್ಕದ್ದು.
c.ಪೊಲೀಸ್ ಸಿಬ್ಬಂದಿಗೆ ಗಾಯಗಳುಂಟಾಗಿದ್ದರೆ, ಆ ಗಾಯಗಳ ವಿವರಗಳನ್ನು ಸಲ್ಲಿಸತಕ್ಕದ್ದು.
d.ಅಪರಾಧಿಗಳಿಗೆ ಗಾಯಗಳಾಗಿದ್ದರೆ, ಆ ಗಾಯಗಳ ವಿವರಗಳನ್ನು ಮತ್ತು ಘಟನೆಯನ್ನು, ಅಪರಾಧಿಯ ಕೊಲೆಯಾಗಿದ್ದರೆ ಮರಣೋತ್ತರ ಪರೀಕ್ಷೆಯ ವರದಿಯ ನಕಲನ್ನು ಸಲ್ಲಿಸತಕ್ಕದ್ದು.
e.ವಿಷಯ ಕುರಿತು ಯಾವುದೇ ದಂಡಾಧಿಕಾರಿಯು ವಿಚಾರಣೆ ಜರುಗಿಸಿದ್ದರೆ ಅಥವಾ ಇಲಾಖಾ ವಿಚಾರಣೆ ಜರುಗಿಸಿದರೆ ವಿಚಾರಣಾ ವರದಿಯ ನಕಲನ್ನು ಸಹ ಸಲ್ಲಿಸತಕ್ಕದ್ದು.
f.ರಾಷ್ಟ್ರಪತಿಯವರ ಪೊಲೀಸ್ ಪದಕ, ಪೊಲೀಸ್ ಮತ್ತು ಅಗ್ನಿ ಶಾಮಕ ಸೇವೆಗಳ ಪದಕ ಮತ್ತು ಪೊಲೀಸ್ ಪದಕಗಳ ಬಹುಮಾನವನ್ನು ಜಾಹೀರಾತು ಪಡಿಸುವಿಕೆ
g.ಸಾಮಾನ್ಯವಾಗಿ ರಾಷ್ಟ್ರಪತಿಯವರ ಪೊಲೀಸ್ ಪದಕವನ್ನು ಅಗ್ನಿಶಾಮಕ ಸೇವೆಗಳ ಪದಕವನ್ನು ಮತ್ತು ಪದಕವನ್ನು ಶೌರ್ಯಕ್ಕಾಗಿ ಕೊಟ್ಟಾಗ, ಛಾಯಾಚಿತ್ರ (ಫೋಟೋ) ಸಮೇತ ಜಾಹೀರುತುಪಡಿಸಲಾಗುವುದು.
h.ಪದಕಗಳನ್ನು ಕೊಟ್ಟವರಿಗೆ ಪದಕಗಳನ್ನು ಕೊಡುವ ಸಂದರ್ಭದಲ್ಲಿ ಶೌರ್ಯಕ್ಕಾಗಿ ಮತ್ತು ವಿಶಿಷ್ಟ ಸೇವೆಗಾಗಿ ಕೊಡುವ ಬಹುಮಾನಗಳ ಸಂಬಂಧ ಉದಾಹರಿಸಿ ಓದಿ ಹೇಳಲಾಗುವುದು.
i.ಭಾರತ ಸರ್ಕಾರದ ಟಂಕಸಾಲೆ ಮುಖ್ಯಾಧಿಕಾರಿಯ ಸಂಬಂಧಿಸಿದ ಪದಕಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುವನು, ಹಾಗೂ ಅವನು ಪ್ರತಿಯಾಗಿ ಪೊಲೀಸ್ ಮಹಾನಿದರ್ೆಶಕ ಮತ್ತು ಪೊಲೀಸ್ ಮಹಾನಿರೀಕ್ಷಣಾಧಿಕಾರಿಗೆ ಸುರಕ್ಷಿತ ಭದ್ರತೆಯಲ್ಲಿಡಲು, ಮತ್ತು ಗಣರಾಜ್ಯೋತ್ಸವದ ದಿನದ ರಂಗು ರಂಗಿನ ಕವಾಯತಿನಲ್ಲಿ ಅಥವಾ ಆ ಪದಕಗಳ ಕೊಡುಗೆಗಾಗಿ ಏರ್ಪಡಿಸಿದ ವಿಶೇಷ ಕವಾಯತಿನಲ್ಲಿ ಬಹುಮಾನ ಪಡೆದವರಿಗೆ ವಿತರಿಸಲು, ಆ ಪದಕಗಳನ್ನು ಕಳುಹಿಸುವುದು.
j.ಇಲಾಖೆಯ, ಅಥವಾ ದಂಡನೆಯ ವ್ಯವಹರಣೆಗಳು, ಬಹುಮಾನಿತರ ಸಂಬಂಧವಾಗಿ ವಿಚಾರಣೆಯಲ್ಲಿದ್ದರೆ; ಆ ವ್ಯವಹರಣೆಗಳು ಮುಗಿಯುವವರೆಗೆ ಬಹುಮಾನಗಳ ವಿತರಣೆಯನ್ನು ತಡೆಹಿಡಿಯುವ ಸಲುವಾಗಿ, ಅವರ ಹೆಸರುಗಳನ್ನು ಪೊಲೀಸ್ ಮಹಾನಿದರ್ೆಶಕ ಮತ್ತು ಪೊಲೀಸ್ ಮಹಾನಿರೀಕ್ಷಣಾಧಿಕಾರಿಗೆ, ಯುಕ್ತವಾಗಿ ವರದಿ ಮಾಡತಕ್ಕದ್ದು.
k.ರಾಷ್ಟ್ರಪತಿಯವರ ಪೊಲೀಸ್ ಪದಕ ಮತ್ತು ಪದಕಗಳನ್ನು ಹೊಂದಿರುವವರು ರಾಜದ್ರೋಹದ ತಪ್ಪಿತಸ್ಥರಾದಾಗ ಕಾರ್ಯ ನಿರ್ವಹಣೆಯಲ್ಲಿ ಹೇಡಿಗಳಾದಾಗ, ಅಥವಾ ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ಪೊಲೀಸ್ ಪಡೆಗೆ ಕೆಟ್ಟ ಹೆಸರು ತರುವಂಥ ವರ್ತನೆಯಲ್ಲಿ ತೊಡಗಿದಾಗ, ಆ ಪದಕ / ಪದಕಗಳನ್ನು ಮಟ್ಟುಗೋಲು ಹಾಕಿಕೊಳ್ಳಲಾಗುವುದು.

ಜೀವರಕ್ಷಣೆಗಾಗಿ ನೀಡುವ ಪ್ರಧಾನಮಂತ್ರಿಗಳ ಪದಕ

ಮಾನವ ಜೀವ ಉಳಿಸಲು, ಆದರ್ಶಪ್ರಾಯವಾಗಿ ಕರ್ತವ್ಯ ಮಾಡಿದ ಪೊಲೀಸ್ ಅಧಿಕಾರಿಗೆ, ಪ್ರಧಾನ ಮಂತ್ರಿಗಳ ಜೀವರಕ್ಷಾ ಪದಕವನ್ನು ಬಹುಮಾನವಾಗಿ ಕೊಡಲಾಗುವುದು.
ಪದಕವನ್ನು ಬಹುಮಾನವಾಗಿ ಪಡೆಯಲು ಅನುಬಂಧ(ಅಪೆಂಡಿಕ್ಸ್) 17 (ಠಿಠಿಜಟಿಜಥ ಘಿಘಿ) ಭಾಗ 2 ರಲ್ಲಿ ಒಂದು ಮಾದರಿಯಲ್ಲಿ ಮತ್ತು ಅದರೊಡನೆ ಕಳುಹಿಸಬೇಕಾಗಿರುವ ವಿವರಣೆಯ ಒಂದು ಮಾದರಿಯನ್ನು ಕೊಡಲಾಗಿದೆ.
ಘಟನೆ ಜರುಗಿದ ಕೂಡಲೆ, ಆ ಪ್ರಕರಣದ ಸಂಪೂರ್ಣ ಅಂಶಗಳನ್ನು, ಪದಕದ ಬಹುಮಾನದ ಶಿಫಾರಸ್ಸನ್ನು ಗುಪ್ತವೆಂದು, ನಮೂದಿಸಿ, ಅಯಾ ಸಂದರ್ಭಕ್ಕನುಸಾರವಾಗಿ, ವಲಯ ಮಹಾನಿರೀಕ್ಷಣಾಧಿಕಾರಿ ಅಥವಾ ಸಂದರ್ಭಾನುಸಾರ ಆಯುಕ್ತರ ( ಕಮೀಷನರ್) ಮೂಲಕ ಪೊಲೀಸ್ ಮಹಾನಿದರ್ೆಶನಾಧಿಕಾರಿಗೆ ಮತ್ತು ಪೊಲೀಸ್ ನಿರೀಕ್ಷಣಾಧಿಕಾರಿಗೆ ಕಳುಹಿಸತಕ್ಕದ್ದು. ಅಖಿಲ ಭಾರತ ಕರ್ತವ್ಯನಿರತ ಪೊಲೀಸ್ ಸಮಾರಂಭದಲ್ಲಿ ಬಹುಮಾನಗಳ ಪ್ರಕಟಣೆ ಮತ್ತು ವಿವರಣೆಗಳನ್ನು ಭಾರತ ಸರ್ಕಾರದಿಂದ ಮಾಡಲಾಗುವುದು.

ಪೊಲೀಸ್ (ವಿಶಿಷ್ಟ ಸೇವಾ) ಪದಕ

ವಿಶಿಷ್ಟ ಕಠಿಣ ಪ್ರಸಂಗಗಳಲ್ಲಿ ಮತ್ತು ಕಠೋರ ನೈಸರ್ಗಿಕ ಪರಿಸರದಲ್ಲಿ ಸೇವೆ ಮಾಡಿದ ಪೊಲೀಸ್ ದಳದ ಸೇವೆ ಪರಿಗಣಿಸಿ, ಆ ದಳದ ಸದಸ್ಯರಿಗೆ ಒಂದು ಪೊಲೀಸ್ (ವಿಶೇಷ ಸೇವಾ) ಪದಕ ಕೊಡಲಾಗುವುದು.
ಈ ಪದಕವನ್ನು ಬಹುಮಾನವಾಗಿ ಕೊಡುವ ಸಂಬಂಧದ ನಿಯಮಗಳ ಒಂದು ನಕಲನ್ನು ಭಾರತ ಸರ್ಕಾರದವರ ಅಧಿಸೂಚನೆಯ ಪ್ರತಿ ಜೊತೆಗೆ ಅನುಬಂಧ 16 ( ಅಪೆಂಡಿಕ್ಸ್ ಘಿಗಿ)ರಲ್ಲಿ ಕೊಡಲಾಗಿದೆ.
ಈ ಪದಕ ಪಡೆಯಲು ಅಧಿಕಾರಿಗಳು ಅರ್ಹರಾದ ಕೊಡಲೆ, ಈ ಪದಕದ ಶಿಫಾರಸ್ಸುನ್ನು ಇಲಾಖೆ ಮುಖ್ಯಸ್ಥರ ಮೂಲಕ ಕಳುಹಿಸತಕ್ಕದ್ದು.
ಯಾವುದೇ ಪದಕಕ್ಕೆ ಶಿಫಾರಸ್ಸು ಮಾಡಲಾದ ಅಧಿಕಾರಿಯ ಬಹುಮಾನ ವಾಸ್ತವವಾಗಿ ಪ್ರಕಟವಾಗುವ ಮುಂಚೆ ಮರಣ ಹೊಂದಿದರೆ, ಅವಶ್ಯ ಮಾಹಿತಿಯನ್ನು ಪೊಲೀಸ್ ಮಹಾನಿದರ್ೆಶಕರಿಗೆ ಮತ್ತು ಪೊಲೀಸ್ ನಿರೀಕ್ಷಣಾಧಿಕಾರಿಗೆ ನೀಡತಕ್ಕದ್ದು.
ನಿಯೋಜನೆಯ ಮೇಲಿರುವ ಅಧಿಕಾರಿಗಳ ಸಂಬಂಧವಾಗಿ, ಒಂದು ಪದಕಕ್ಕೆ ಶಿಫಾರಸ್ಸು ಮಾಡುವ ಮುಂಚೆ, ನಿಯೋಗ ಪಡೆದವರು ನಿಯೋಗ ಮಾಡಿದವರ ಸಲಹೆ ಪಡೆಯುತ್ತಾರೆ ಮತ್ತು ನಿಯೋಗ ಮಾಡಿದವರು ನಿಯೋಗ ಪಡೆದವರ ಸಲಹೆ ಪಡೆಯುತ್ತಾರೆ.

ಬಿರುದುಗಳನ್ನು ಮತ್ತು ಪದಕಗಳನ್ನು ತೊಡುವ ರೀತಿ

i.ವಿವಿಧ ಪದಕಗಳನ್ನು ಮತ್ತು ಬಿರುದುಗಳನ್ನು ಯಾವ ಅಗ್ರತೆಯ ಮೇರೆಗೆ ಧರಿಸಬೇಕೆನ್ನುವುದನ್ನು ಅನುಬಂಧ 17 ( ಅಪೆಂಡಿಕ್ಸ್ ಘಿಗಿ) ರಲ್ಲಿ ಸೂಚಿಸಲಾಗಿದೆ.
ii.ಎದೆಯ ಮೇಲ್ಭಾಗದಲ್ಲಿ ಪದಕಗಳನ್ನು ಮತ್ತು ಬಿರುದುಗಳನ್ನು ಧರಿಸಿದಾಗ ಕೊಂಡಿಯ ಸ್ಥಾನವು, ಹೆಚ್ಚಿನ ಉದ್ದವನ್ನು ಅವಶ್ಯಗೊಳಿಸದೆ ಅವುಗಳ ಉದ್ದ ಒಂದು ಅಂಗುಲ ಇರುತ್ತದೆ. ಅತಿ ಮೇಲಿರುವ ಕೊಂಡಿಯು, ರಿಬ್ಬನ್ನಿನಿಂದ ಅಂಗುಲ ಮೇಲಿರುತ್ತದೆ. ಎರಡು ಅಥವಾ ಹೆಚ್ಚಿನ ಪದಕಗಳನ್ನು ಮತ್ತು ಬಿರುದುಗಳನ್ನು ಧರಿಸಿದಾಗ, ಅವುಗಳ ಕೆಳ ತುದಿಯು, ಒಂದೇ ರೇಖೆಯಲ್ಲಿರುಂತೆ ಹೊಂದಿಸಬೇಕು. ರಿಬ್ಬನ್ನಿನ ಉದ್ದವು, ಬಿರುದು ಅಥವಾ ಕೊಂಡಿಗಳ ಸಮೇತ, ಪದಕದ ಅತಿ ಹೆಚ್ಚಿನ ಉದ್ದದ ನಿಯಮಕ್ಕೊಳಪಟ್ಟಿರುತ್ತದೆ. ಹಾಗೂ ಬಿರುದು ಅಥವಾ ಪದಕ ಸೇರಿದಾಗ ಅವುಗಳ ಅತಿ ಹೆಚ್ಚಿನ ಉದ್ದವು 3 ಅಂಗುಲ ಇರತಕ್ಕದ್ದು. ಈ ಸಲಹೆಗಳು ಕಿರಿಯ ಪದಕಗಳಿಗೆ ಮತ್ತು ಬಿರುದುಗಳಗೆ ಅನ್ವಯಿಸುತ್ತದೆ. ಅದರೆ ಅವುಗಳ ಉದ್ದವು ರಿಬ್ಬನ್ನಿನ ಸಮೇತ 2 ಇಂಚು ಇರುತಕ್ಕದ್ದು.
iii.ತೆರೆದ ಕಾಲರಿನ ಜಾಕೆಟ್ಗಳ, ಎಡ ಎದೆಯ ಮೇಲಿನ ನಿಕಟ ಭಾಗಕ್ಕೆ, ಬ್ಯಾಡ್ಜಗಳನ್ನು ಬಿರುದುಗಳನ್ನು ಅಥವಾ ಪದಕಗಳನ್ನು, ತೂಗು ಬಿಡಲಾಗಿರುವ ಸಲಾಕೆಯನ್ನಿಡಲಾಗಿರುತ್ತದೆ, ಮತ್ತು ಒಂದು ಸೆಟೆದು ನಿಂತ ಕಾಲರನ್ನು ಜಾಕೆಟ್ಗಳಿಗೆ ಜೋಡಿಸಲಾಗಿದ್ದು, ಸದ್ರಿ ಸಲಾಕೆಯ ಮಧ್ಯ ಭಾಗವು, ಒಂದು ಮತ್ತು ಎರಡನೆಯ ಗುಂಡಿಯ ಮಧ್ಯ ಇರುತ್ತದೆ.
iv.ಅವುಗಳ ಸಂಖ್ಯೆಯಿಂದ ಸಲಾಕೆಯಿಂದ ಸಂಪೂರ್ಣವಾಗಿ ಕಾಣುವಂತೆ ತೂಗು ಹಾಕಲು ಸಾಧ್ಯವಿಲ್ಲದಿದ್ದರೆ, ಅವುಗಳು ಒಂದರ ಮೇಲೊಂದ ಇರಬಹುದು.ಪದಕಗಳನ್ನು ರಾಜ್ಯದ ಲಾಂಛನ ಕಾಣುವಂತೆ ಧರಿಸತಕ್ಕದ್ದು.
v.ಪದಕಗಳು ಹಾಳಾದರೆ ಅವುಗಳನ್ನು ಪಡೆದವರು ಇಲಾಖೆ ಮುಖ್ಯಸ್ಥರ ಸೂಕ್ತ ಮಾರ್ಗದ ಮೂಲಕ, ಮಹಾನಿದರ್ೆಶಕರಿಗೆ ವರದಿ ಮಾಡತಕ್ಕದ್ದು. ಸರಿಯಾದ ವಿಚಾರಣೆಯನಂತರ ಸರ್ಕಾರದ, ಆದೇಶಗಳಿಗನುಗುಣವಾಗಿ ಬಹುಮಾನಿತರ ವೆಚ್ಚದ ಮೇಲೆ ಅವುಗಳನ್ನು ಪುನಃ ಕೊಡಲಾಗುವುದು.
vi.ಪೊಲೀಸ್ ಪದಕಗಳಿಂದ ಬಹುಮಾನಿತರಾದವರು ಸೇವೆಯನ್ನು ಮರೆಯಬಾರದು ಮತ್ತು ಅದು ಯುವ ಅಧಿಕಾರಿಗಳಿಗೆ ಪ್ರೋತ್ಸಾಹದಾಯಕವಾಗಿರಬೇಕೆನ್ನುವ ಸದುದ್ದೇಶದಿಂದ, ಒಂದು ಫಲವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಾರ್ಯಲಯಗಳ ಫಟಕಗಳು (ಗಟಿಣ ಔಜಿಜಿಛಿಜಡಿ) ಮತ್ತು ಜಿಲ್ಲೆಯ ಮೀಸಲು ಪಡೆಗಳ ಕಾಯರ್ಾಲಯಗಳಲ್ಲಿಟ್ಟು. ಭಾರತ ಸರ್ಕಾರದವರು ನೀಡಲಾದ ಅಧಿಕಾರಿಗಳ, ಮತ್ತು ಸಿಬ್ಬಂದಿಯವರ ಹೆಸರುಗಳನ್ನು ಅವುಗಳ ಮೇಲೆ ಬರೆಯತಕ್ಕದ್ದು.

ಮುಖ್ಯಮಂತ್ರಿ ಪದಕ

ಕರ್ನಾಟಕ ಸರ್ಕಾರವು ಪೊಲೀಸ್ ಸಿಬ್ಬಂದಿಗಾಗಿ ಮುಖ್ಯವಂತ್ರಿಗಳ ಪದಕವನ್ನು ಸ್ಥಾಪಿಸಿದೆ. (ಮುಖ್ಯಮಂತ್ರಿಗಳ ಪದಕ ನಿಯಮಗಳು, 1982) ಸಾಮಾನ್ಯವಾಗಿ ಪೊಲೀಸ್ ಸೂಪರಿಂಟೆಂಡೆಂಟ್ ರ್ಯಾಕಿಂನ ಮತ್ತು ಅದಕ್ಕೂ ಕೆಳದರ್ಜೆಯ ಅಧಿಕಾರಿಗಳು ಈ ಪದಕಗಳನ್ನು ಪಡೆಯುವುದಕ್ಕೆ ಅರ್ಹರಾಗಿರುವರು. [ಂಠಿಠಿಜಟಿಜಥ- ಘಿಘಿ]

a. ಪದಕ ಮೂರು ವಿಧದಲ್ಲಿ ಇರತಕ್ಕದ್ದು (1) ಚಿನ್ನದ ಪದಕ (2) ಬೆಳ್ಳಿ ಪದಕ ಮತ್ತು (3) ಕಂಚಿನ ಪದಕ. ವಿಶಿಷ್ಟ ಕಾರ್ಯ ನಿರ್ವಹಣೆಗಾಗಿ ಚಿನ್ನದ ಪದಕವನ್ನು, ಮಾದರಿ ಸೇವಾ ನಿರ್ವಹಣೆಗಾಗಿ ಬೆಳ್ಳಿ ಪದಕವನ್ನು ಮತ್ತು ಉತ್ತಮ ಕಾರ್ಯ ನಿರ್ವಹಣೆಗಾಗಿ ಕಂಚಿನ ಪದಕವನ್ನು ನೀಡಲಾಗುವುದು.
b. ಚಿನ್ನದ ಪದಕವು 5,000.00 ರೂ.ಗಳ ನಗದು ಬಹುಮಾನವನ್ನೂ, ಬೆಳ್ಳಿಯ ಪದಕವು 3000.00 ರೂ.ಗಳ ಬಹುಮಾನವನ್ನೂ ಮತ್ತು ಕಂಚಿನ ಪದಕ 2,000.00 ರೂ.ಗಳ ನಗದು ಬಹುಮಾನವನ್ನೂ ಒಳಗೊಂಡಿರುವುದು. ಸರ್ಕಾರಿ ಆದೇಶ ಸಂಖ್ಯೆ ಹೆಚ್ಡಿ 188 ಪಿಎಸ್ಇ 95 ದಿನಾಂಕ: 26.10.1995 ರಲ್ಲಿ ಆದೇಶಿಸಲಾಗಿದೆ.[ಂಠಿಠಿಜಟಿಜಥ - ಘಿಘಿ].
c.ಮುಖ್ಯ ಮಂತ್ರಿಗಳ ಪದಕಗಳನ್ನು ನೀಡಲಾಗಿರುವ ವ್ಯಕ್ತಿಗಳ ಹೆಸರುಗಳನ್ನು, ಅವುಗಳನ್ನು ನೀಡಿದ ತರುವಾಯ ಕರ್ನಾಟಕ ಸರ್ಕಾರದ ಗೆಜೆಟ್ನ ಮತ್ತು ಪೊಲೀಸ್ ಗೆಜೆಟ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸತಕ್ಕದ್ದು. ಅಂಥ ಹೆಸರುಗಳ ಒಂದು ರಿಜಿಸ್ಟರನ್ನು ಒಳಾಡಳಿತ ಇಲಾಖೆಯಲ್ಲಿ ಮತ್ತು ಪೊಲೀಸ್ ಮಹಾ ನಿರ್ದೇಶಕರ ಕಛೇರಿಯಲ್ಲಿ ಇಡತಕ್ಕದ್ದು.
d.ಪ್ರತಿ ವರ್ಷ ನೀಡಲಾಗುವ ಪದಕಗಳ ಸಂಖ್ಯೆಯನ್ನು ಪೊಲೀಸ್ ಮಹಾ ನಿದರ್ೆಶಕ (ಪೊಲೀಸ್ ಡೈರೆಕ್ಟರ್ ಜನರಲ್) ಮತ್ತು ಇನ್ಸ್ಪೆಕ್ಟರ್ ಜನರಲ್ ಅವರು ಸ್ವೀಕರಿಸಲಾದ ಪ್ರಸ್ತಾವನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧರಿಸತಕ್ಕದ್ದು. ಆದರೆ ಆ ಸಂಖ್ಯೆಯು 8 ಚಿನ್ನದ ಪದಕಗಳು, 14 ಬೆಳ್ಳಿ ಪದಕಗಳು ಮತ್ತು 20 ಕಂಚಿನ ಪದಕಗಳನ್ನು ಮೀರಕೊಡದು.
e.ಪದಕಗಳನ್ನು ವಿಶೇಷ ಕೌಶಲ್ಯ ಅಥವಾ ಗಮನ ಸೆಳೆಯುವ ಕರ್ತವ್ಯ ನಿಷ್ಠೆ ಅಥವಾ ತೀರ್ವ ಅಥವಾ ವ್ಯಾಪಕವಾಗಿ ಹರಡಿರುವ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಅಥವಾ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ ಅಥವಾ ಜಟಿಲ ಪ್ರಕರಣಗಳ ಬಗ್ಗೆ ವಿಶೇಷ ತನಿಖೆ ಅಥವಾ ಉನ್ನತ ಮಟ್ಟದ ಬಂದೋದಸ್ತ್ ವ್ಯವಸ್ಥೆಯ ಸಂಘಟನೆ ಅಥವಾ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ವಿಶಿಷ್ಟ ಪ್ರಾವಿಣ್ಯ ಅಥವಾ ಗಮನ ಸೆಳೆಯುವಂತಹ ದೈರ್ಯ ಮತ್ತು ಕಲಿತನದ ಯಾವುದೇ ಕಾರ್ಯಕ್ಕೆ ಅಥವಾ ಇಲ್ಲಿ ನಿದರ್ಿಷ್ಟಪಡಿಸಿರದ ಯಾವುದೇ ಇತರ ವಿಶಿಷ್ಟ ರೀತಿಯ ಪೊಲೀಸ್ ಕಾರ್ಯಕ್ಕೆ ನೀಡತಕ್ಕದ್ದು.
f. ಪ್ರತಿ ವರ್ಷ ಪೊಲೀಸ್ ಅಧೀಕ್ಷಕರು ಮತ್ತು ಕೆ.ಎಸ್.ಆರ್.ಪಿ ಕಮಾಂಡೆಂಟ್ರು ಇತರ ಘಟಕಗಳ ಅಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ರು 30 ನೇಯ ಜೂನ್ ವೇಳೆಗೆ ಪೊಲೀಸ್ ಮಹಾ ನಿದರ್ೆಶಕ ಮತ್ತು ಮಹಾ ನಿರೀಕ್ಷಕ ಜನರಲ್ ಅವರ ಕಛೇರಿಗೆ ಶಿಫಾರಸ್ಸುಗಳನ್ನು ಕಳುಹಿಸತಕ್ಕದ್ದು. ಪೊಲೀಸ್ ಮಹಾ ನಿದರ್ೆಶಕ ಕಛೇರಿಯಲ್ಲಿ ಶಿಫಾರಸ್ಸುಗಳನ್ನು ಸ್ವೀಕರಿಸಿದ ತರುವಾಯ, ಪೊಲೀಸ್ ಜನರಲ್, ಕೇಂದ್ರ ಕಾರ್ಯಸ್ಥಾನ ಇವರು ಶಿಫಾರಸ್ಸುಗಳನ್ನು ಘಟಕವಾರು ವ್ಯವಸ್ಥೆ ಮಾಡುವವರು ಮತ್ತು ಪೊಲೀಸ್ ಉಪಮಹಾನಿದರ್ೆಶಕರು ಅಧ್ಯಕ್ಷರಾಗಿರುವ ಸಮಿತಿಯ ಮುಂದೆ ಮಂಡಿಸುವರು. ಆ ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ತನ್ನ ಶಿಫಾರಸ್ಸುಗಳನ್ನು ಜುಲೈ 31 ರ ವೇಳೆಗೆ ಆಡಳಿತ ಕಾರ್ಯದಶರ್ಿಗೆ ಕಳುಹಿಸಿ ಕೊಡತಕ್ಕದ್ದು.
g. ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರವು ಪ್ರತಿ ವರ್ಷ 15 ನೇ ಅಕ್ಟೋಬರ್ ರಂದು ಪ್ರಕಟಿಸ ತಕ್ಕದ್ದು.
h.ಪ್ರಶಸ್ತಿಯ ಪ್ರಧಾನವನ್ನು (ಪದಕಗಳನ್ನು) ಪ್ರತಿ ವರ್ಷ ಕರ್ನಾಟಕ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ದಿನದಂದು ಅಂದರೆ, 2ನೇ ಎಪ್ರಿಲ್ ದಿನದಂದು ಬೆಂಗಳೂರಿನಲ್ಲಿ ಪ್ರದಾನ ಮಾಡತಕ್ಕದ್ದು.
i.ಪೊಲೀಸ್ ಪಡೆಯ ಸಿಬ್ಬಂದಿಗೆ ಒಂದೇ ಬಗೆಯ ಕಾರ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಒಂದಕ್ಕಿಂತ ಹೆಚ್ಚು ಸಲ ಪ್ರಶಸ್ತಿ ನೀಡತಕ್ಕದಲ್ಲ. ಆದಾಗ್ಯೂ, ಆತನ ಧೀರ್ಘ ಸೇವಾವಧಿಯಲ್ಲಿ ಪೊಲೀಸ್ ಅಧಿಕಾರಿಯು ಮಾನ್ಯತೆಗೆ ಯುಕ್ತವೆನಿಸಬಹುದಾದ ಒಂದಕ್ಕಿಂತ ಹೆಚ್ಚು ಕೌತುಕಮಯವಾದ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ತನ್ನ ವಿಶೇಷ ಸಾಮಥ್ರ್ಯವನ್ನು ಪ್ರದಶರ್ಿಸಬಹುದಾಗಿದೆ. ಆಂಥ ಪ್ರಕರಣಗಳಲ್ಲಿ ಪದಕ ನೀಡುವುದು ಅವಶ್ಯಕವಾಗುತ್ತದೆ. ಆದರೆ ಮತ್ತೋಂದು ಪದಕ ನೀಡುವುದಕ್ಕೆ 5 ವರ್ಷಗಳ ಅಂತವಿರಬೇಕು. ಆಗಲೇ ಪದಕ ಪಡೆದಿರುವ ಅಧಿಕಾರಿಗೆ ಅದಕ್ಕಿಂತ ಕಡಿಮೆ ದಜರ್ೆಯ ಪದಕವನ್ನು ನೀಡತಕ್ಕದಲ್ಲ, ಅಂದರೆ, ಒಮ್ಮೆ ಚಿನ್ನದ ಪದಕ ಪಡೆದ ಅಧಿಕಾರಿಗೆ ಬೆಳ್ಳಿಯ ಪದಕವನ್ನಾಗಲಿ ಅಥವಾ ಕಂಚಿನ ಪದಕವನ್ನಾಗಲಿ ನೀಡತಕ್ಕದಲ್ಲ. ಅದೇರೀತಿಯಾಗಿ ಬೆಳ್ಳಿಯ ಪದಕ ಪಡೆದ ವ್ಯಕ್ತಿಗೆ ಕಂಚಿನ ಪದಕ ನೀಡತಕ್ಕದಲ್ಲ. ಒಂದಕ್ಕಿಂತ ಹೆಚ್ಚು ಸಂದಂರ್ಭದಲ್ಲಿ ಒಂದೇ ತೆರನಾದ ಅಥವಾ ಅದಕ್ಕಿಂತ ಹೆಚ್ಚಿನ ದಜರ್ೆಯ ಪದಕ ನೀಡುವುದಕ್ಕೆ ಯಾವುದೇ ಆಕ್ಷೇಪಣೆ ಇರತಕ್ಕದಲ್ಲ.
j.ಒಬ್ಬ ಅಧಿಕಾರಿಗೆ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿಗಳು) ನಿಯಮಗಳು, 1965 ಮತ್ತು ಕರ್ನಾಟಕ ಪೊಲೀಸ್ ಅಧಿನಿಯಮ ಇವುಗಳಡಿ ಪ್ರಧಾನ ದಂಡನೆ ವಿಧಿಸಿರುವಲ್ಲಿ ಅಥವಾ ಅವರು ಯಾವುದೇ ಸಮಯದಲ್ಲಿ ನ್ಯಾಯಾಲಯದ ಯಾವುದೇ ವಾಗ್ದಂಡನೆಗೆ ಗುರಿಯಾಗಿರುವಲ್ಲಿ ಅಥವಾ ನ್ಯಾಯಾಲಯವು ವಾಗ್ದಂಡನೆ ನೀಡಿದ ನಡಾವಳಿಗಳಲ್ಲಿ ಭಾಗಿಯಾಗಿರುವಲ್ಲಿ ಅವರಿಗೆ ಪದಕ ನೀಡುವಂಥ ಯಾವುದೇ ಶಿಫಾರಸ್ಸು ಕಳಿಸತಕ್ಕದಲ್ಲ. ಪ್ರತಿಯೊಂದು ಶಿಫಾರಸ್ಸಿನ ಸಂಬಂಧದಲ್ಲೂ ಈ ಕೆಳಕಂಡ ನಮೂನೆಗಳಲ್ಲಿ ಒಂದು ಪ್ರಮಾಣ ಪತ್ರವನ್ನು ಘಟಕ ಅಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರ ಸಂಬಂಧದಲ್ಲಿ ಪೊಲೀಸ್ ಮಹಾ ನಿರೀಕ್ಷಕರು ಸಲ್ಲಿಸತಕ್ಕದ್ದು.

ಪ್ರಮಾಣ ಪತ್ರ

ಕರ್ನಾಟಕ ಮುಖ್ಯಮಂತ್ರಿಗಳ ಪದಕ ನೀಡಿಕೆಗೆ ಶಿಫಾರಸ್ಸು ಮಾಡಲಾದ ಶ್ರೀ.______________________ ಇವರ ಪ್ರಾಮಾಣಿಕತೆ ಸಂಶಯಾತೀತವಾದುದೆಂದು ಮತ್ತು ನ್ಯಾಯಾಲಯದಲ್ಲಿ ವಾಗ್ದಂಡನೆಗೆ ಒಳಗಾದ ಯಾವುದೇ ನಡಾವಳಿಗಳಲ್ಲಿ ಇವರು ಭಾಗಿಯಾಗಿಲ್ಲವೆಂದು ಪ್ರಮಾಣಿಕರಿಸಲಾಗಿದೆ. ಪ್ರಸಕ್ತ ಶಿಫಾರಸ್ಸಿನಲ್ಲಿ ಒತ್ತು ಕೊಡಲಾಗಿರುವ ನಾಮ ನಿದರ್ೆಶಿತನಲ್ಲಿ ವರ್ತನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಆತನ ವಿರುದ್ಧ ಯಾವುದೇ ನ್ಯಾಯಿಕ ನಡಾವಳಿಗಳು ಬಾಕಿಯಿಲ್ಲವೆಂದು ಸಹ ಪ್ರಮಾಣಿಕರಿಸಲಾಗಿದೆ.
(ಞ) ಮುಖ್ಯಮಂತ್ರಿಗಳ ಪದಕವನ್ನು ಯಾರೇ ಪೊಲೀಸ್ ಅಧಿಕಾರಿಯೂ ಧರಿಸತಕ್ಕದ್ದಲ್ಲ.
ಯಾರೇ ವ್ಯಕ್ತಿಗೆ ಮೇಲ್ಕಂಡ ಪದಕ ನೀಡಿರುವುದನ್ನು ರದ್ದುಗೊಳಿಸಲು ಮತ್ತು ಶೂನ್ಯಗೊಳಿಸಲು ಕರ್ನಾಟಕ ಸರ್ಕಾರವು ಸಕ್ಷಮವಾಗಿರತಕ್ಕದ್ದು ಮತ್ತು ಆ ತರುವಾಯ ಆತನ ಹೆಸರನ್ನು ರಿಜಿಸ್ಟರಿನಿಂದ ತೆಗೆದು ಹಾಕತಕ್ಕದ್ದು.
ಯಾವ ವ್ಯಕ್ತಿಗೆ ಸದರಿ ಪದಕವನ್ನು ನೀಡಲಾಗಿದೆಯೋ ಆ ಪ್ರತಿಯೋಬ್ಬ ವ್ಯಕ್ತಿಯೂ ಅದನ್ನು ಸ್ವೀಕರಿಸುವ ಮುಂಚೆ, ಆತನ ಹೆಸರನ್ನೂ ಒಂದು ವೇಳೆ ರಿಜಿಸ್ಟರಿನಿಂದ ತೆಗೆದು ಹಾಕಿದರೆ, ಪದಕವನ್ನೂ ಹಿಂದಿರುಗಿಸುವಾಗ ಒಪ್ಪಂದ ಪತ್ರ ಬರೆದು ಕೊಡಬೇಕು. ಒಪ್ಪಂದ ಈ ಕೆಳಕಂಡ ನಮೂನೆಯಲ್ಲಿ ಇರತಕ್ಕದ್ದು.

ಒಪ್ಪಂದ

ಕರ್ನಾಟಕ ಮುಖ್ಯಮಂತ್ರಿಗಳ ಪದಕ ಪಡೆದಿರುವ ಶ್ರೀ._______________________ ಎಂಬ ನಾನು, ಪದಕಕ್ಕೆ ಸಂಬಂಧಿಸಿದ ಶರತ್ತುಗಳನ್ನು ಓದಿ ತಿಳಿದುಕೊಂಡಿದ್ದೇನೆಂದು ಈ ಮೂಲಕ ಘೋಷಿಸುತ್ತೇನೆ. ನನ್ನ ಹೆಸರನ್ನೂ ಯಾವುದೇ ಸಮಯದಲ್ಲಿ, ಮುಖ್ಯಮಂತ್ರಿಗಳ ಪದಕ ನಿಯಮಗಳ ಉಪಬಂಧಗಳಿಗನುಸಾರ ಪದಕ ಪಡೆದವರ ಪಟ್ಟಿಯಿಂದ ತೆಗೆದು ಹಾಕುವುದು ಅಗತ್ಯವಾದಾಗ ಹಾಗೆ ಮಾಡಬಹುದೆಂದೂ, ಹಾಗೆ ನನ್ನ ಹೆಸರನ್ನೂ ತೆಗೆದು ಹಾಕಿದಲ್ಲಿ ಪದಕವನ್ನು ಹಿಂದಿರುಗಿಸುವುದಾಗಿಯೂ ನಾನು ಈ ಮೂಲಕ ವಾಗ್ದಾನ ಮಾಡುತ್ತೇನೆ.
(ಖರಟಿಜಜ)
ದಿನಾಂಕ:
(ಸಹಿ)
(ಟಿ) ಈ ಕೆಳಕಂಡ ಸಾಕ್ಷಿದಾರರ ಸಮ್ಮುಖದಲ್ಲಿ : (ಎನ್) ಆದಾಗ್ಯೂ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಯಾವುದೇ ಪದಕವನ್ನೂ ಹಿಂದಿರುಗಿಸಲು ಸರ್ಕಾರವು ಸಕ್ಷಮವಾಗಿರತ್ತದ್ದು.


ಮುಖ್ಯಮಂತ್ರಿ ಪದಕ ಸರ್ಕಾರಿ ಆದೇಶ