Karnataka State Police

ಲಘು ಪ್ರಕರಣಗಳು

ಸಣ್ಣ ಪ್ರಮಾಣದ ಅಪರಾಧ :

ಸಣ್ಣ ಪ್ರಮಾಣದ ಅಪರಾಧಗಳಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವುದಿಲ್ಲ ಆದರೆ ಸಾರ್ವಜನಿಕ ಮತ್ತು ಸರ್ಕಾರದ ಆಸ್ತಿ ಪಾಸ್ತಿಗಳಿಗೆ ನಿರ್ಲಕ್ಷತೆಯಿಂದ ಹಾನಿಯುಂಟು ಮಾಡಿದ್ದಲ್ಲಿ ಅಥವಾ ಸಾರ್ವಜನಿಕರಿಗೆ ಅಪಾಯ ಕ್ಷತಿ, ಭಯ, ಕಿರುಕುಳ ಉಂಟುಮಾಡುವ ಅಥವಾ ಯಾವುದೇ ಬೀದಿಯಲ್ಲಿ ಕೊಳೆ-ಹೊಲಸು ಕಸ, ಕಲ್ಲುಗಳನ್ನು,ಕಟ್ಟಡ ಸಾಮಗ್ರಿಗಳನ್ನು ಇಟ್ಟರೆ ಅಥವಾ ಮನೆ ಕಾಖರ್ಾನೆ ಅಥವಾ ಚರಂಡಿಯಿಂದ ಅಸಹ್ಯಕರವಾದ ಪದಾರ್ಥವು ಬೀದಿಯಲ್ಲಿ ಹರಿಯಲು ಬಿಟ್ಟರೆ, ಸಾರ್ವಜಿನಿಕ ಸ್ಥಳಗಳಲ್ಲಿ ಧೂಮಪಾನಮಾಡುವುದು, ಮದ್ಯಪಾನ ಮಾಡಿ ಅಸಭ್ಯ ರೀತಿಯಲ್ಲಿ ವತರ್ಿಸುವುದು, ಭಿಕ್ಷೆಗಾಗಿ ಕಾಡಿ ಬೇಡಿದರೆ, ನಾಯಿ, ಕುದುರೆ, ಹಸು ಇತ್ಯಾದಿ ಪ್ರಾಣಿಗಳನ್ನು ಬೀದಿಗೆ ಬಿಟ್ಟರೆ, ನೆರೆಹೊರೆಯವರಿಗೆ ಕಿರುಕುಳ, ತೊಂದರೆ, ಅಥವಾ ಸುಖ ಭಂಗ ಮಾಡುವ ಯಾವುದೇ ಧ್ವನಿ ವರ್ದಕಗಳನ್ನು, ಯಾವುದೇ ಸ್ಥಳದಲ್ಲಿ ರಾತ್ರಿ 10 ಗಂಟೆ ಮೇಲೆ ಅಥವಾ ಬೆಳಿಗೆ 6 ಗಂಟೆಯ ಒಳಗೆ ಯಾವುದೇ ಕಾಲದಲ್ಲಿ ಉಪಯೋಗಿಸಿದರೆ ಇತ್ಯಾದಿ ಕೃತ್ಯಗಳಲ್ಲಿ ತೊಡಗಿದಲ್ಲಿ, ಪೊಲೀಸರು ನೋಟೀಸನ್ನು ಜಾರಿಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ತಿಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತಾರೆ. ಅಥವಾ ಇಂತಹ ಅಪರಾಧಗಳಲ್ಲಿ ತೊಡಗಿದವರಿಗೆ ಎಚ್ಚರಿಕೆಯನ್ನು ನೀಡಿ ಮುಚ್ಚಳಿಕೆಯನ್ನು ಬರೆಸಿಕೊಳ್ಳುತ್ತಾರೆ.


COTPA ಆಕ್ಟ್, 2003