Karnataka State Police

ಅತ್ಯಾಚಾರ / ಹಠ ಸಂಭೋಗ

ಬಲಾತ್ ಸಂಬೋಗ ಎಂದರೇನು?

ಬಲಾತ್ ಸಂಬೋಗವು ಬಲವಂತವಾಗಿ ನಡೆಸುವ ಲೈಂಗಿಕ ಕ್ರಿಯೆಯಾಗಿರುತ್ತದೆ. ಇದನ್ನು ಕೆಲವೊಮ್ಮೆ ಲೈಂಗಿಕ ಹಲ್ಲೆ ಎಂತಲೂ ಕರೆಯುವರು. ಕಾನೂನು ಪ್ರಕಾರ 16 ವರ್ಷದೊಳಗಿನ ಬಾಲಕಿಯೊಂದಿಗೆ ಸಮ್ಮತಿ ಪಡೆದು ನಡೆಸಿದ ಸಂಭೋಗವು ಕೂಡ ಬಲಾತ್ ಸಂಭೋಗವೆನಿಸಿಕೊಳ್ಳುತ್ತದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಒಬ್ಬ ಪುರುಷನು ಸ್ತ್ರಿಯೊಂದಿಗೆ ಈ ಮುಂದೆ ಹೋರತು ಪಡಿಸಿದ ಸಂದರ್ಭವನುಳಿದು, ಕೆಳಕಂಡ ಆರು ವರ್ತನೆಗಳಲ್ಲಿ ಯಾವುದೊಂದರ ಮೇರೆಗಿನ ಸನ್ನಿವೇಶಗಳಲ್ಲಿ ಲೈಂಗಿಕ ಸಂಭೋಗ ನಡೆಸಿದರೆ ಅವನು ಬಲಾತ್ ಸಂಭೋಗ ಮಾಡಿದವನೆಂದು ಹೇಳಲಾಗಿತ್ತದೆ.

a.ಮೊದಲನೆಯದಾಗಿ - ಅವಳ ಇಚ್ಛೆಯ ವಿರುದ್ಧವಾಗಿ
b.ಎರಡನೆಯದಾಗಿ ಅವಳ ಸಮ್ಮತಿಯಿಲ್ಲದೆ;
c.ಮೂರನೆಯದಾಗಿ ಅವಳನ್ನು ಅಥವಾ ಅವಳು ಹಿತಾಸಕ್ತಿ ಹೊಂದಿರುವ ಯಾವನೇ ವ್ಯಕ್ತಿಗೆ, ಮರಣ ಅಥವಾ ಗಾಯ ಉಂಟು ಮಾಡುವ ಬೆದರಿಕೆ ಹಾಕುವ ಮೂಲಕ ಸಮ್ಮತಿಯನ್ನು ಪಡೆದಿದ್ದರೆ
d.ನಾಲ್ಕನೆಯದಾಗಿ ಪುರುಷನು ತಾನು ಅವಳ ಪತಿಯಲ್ಲವೆಂದು ಮತ್ತು ಅವಳು ತಾನು ಮದುವೆಯಾಗಿರುವ ಅಥವಾ ವಿಧಿಬದ್ಧವಾಗಿ ಮದುವೆಯಾಗಿರುವುದಾಗಿ ಅವಳು ನಂಬಿರುವ, ಬೇರೆ ಪುರುಷನು ತಾನೆಂದು ನಂಬಿರುವ ಕಾರಣದಿಂದ ಸಮ್ಮತಿಯನ್ನು ಕೊಟ್ಟಿರುವಳೆಂದು ತಿಳಿಸಿರುವಾಗ;
e.ಐದನೆಯದಾಗಿ ಅಂಥ ಸಮ್ಮತಿಯನ್ನು ಕೊಡುವ ಕಾಲದಲ್ಲಿ ಅಸ್ವಸ್ಥಚಿತ್ತತೆ ಅಥವಾ ಮತ್ತತೆಯಿಂದಾಗಿ ಅಥವಾ ವೈಯಕ್ತಿಕವಾಗಿ ಅವನಿಂದ ಅಥವಾ ಬೇರೆಯವನ ಮೂಲಕ ಯಾವುದೇ ಅಥವಾ ಮಂಕುಗೊಳಿಸುವ ಅನಾರೂಗ್ಯಕರ ವಸ್ತುವಿನ ಪ್ರಯೋಗದ ಕಾರಣದಿಂದಾಗಿ ಯಾವುದಕ್ಕೆ ಅವಳು ಸಮ್ಮತಿಯನ್ನು ಕೊಟ್ಟಿರುವಳೋ ಅದರ ಸ್ವರೂಪ ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳಲು ಅಸಮರ್ಥಳಾದಾಗ ಆರನೆಯದಾಗಿ ಅವಳು ಹದಿನಾರು ವರ್ಷಕಿಂತ ಕಡಿಮೆ ವಯಸ್ಸಿನಮಳಾಗಿರುವಾಗ ಅವಳ ಸಮ್ಮತಿ ಪಡೆದು ಅಥಾವ ಪಡೆಯದೆಯೇ,

ವಿವರಣೆ : ಲೈಂಗಿಕ ಸಂಭೋಗಕ್ಕೆ ಕೇವಲ ಒಳಹೊಕ್ಕಿದರೆ ಬಲಾತ್ ಸಂಭೋಗ ಆಪಾದನೆಗೆ ಒಳಪಡುತ್ತಾರೆ. ಅಪವಾದ: ಹದಿನೈದು ವರ್ಷಕ್ಕೆ ಮೇಲ್ಪಟ್ಟಂತೆ ತನ್ನ ಪತ್ನಿಯೊಂದಿಗೆ ಒಬ್ಬ ಪುರುಷನು ನಡೆಸುವ ಲೈಂಗಿಕ ಸಂಭೋಗವು ಬಲಾತ್ ಸಂಭೋಗವಲ್ಲ.

ನಾನು ಬಲಾತ್ ಸಂಭೋಗದ ಬಲಿಪಶುವಾದಲ್ಲಿ ಏನು ಮಾಡಬೇಕು?

ನೀವು ಕೂಡಲೆ ಕೃತ್ಯದ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡುವುದು ಅಥವಾ ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಾದಲ್ಲಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೈದ್ಯಾಧಿಕಾರಿಗೆ ಮಾಹಿತಿ ನೀಡುವುದು, ಮಾಹಿತಿಯನ್ನು ಪೊಲೀಸರಿಗೆ ವೈದ್ಯಾಧಿಕಾರಿಗಳು ರವಾನಿಸಿದ ಕೂಡಲೇ ಪೊಲೀಸರು ಆಸ್ಪತ್ರೆಗೆ ಬಂದು ನಿಮ್ಮ ಹೇಳಿಕೆಯನ್ನು ಪಡೆದುಕೊಳ್ಳುವರು