Karnataka State Police

ನೇಮಕಾತಿ

ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಗಳ ನೇಮಕ, ಬಡ್ತಿ, ವೇತನ, ಪರಿವೀಕ್ಷಣೆ, ತರಬೇತಿ ಪರೀಕ್ಷೆ, ಜೇಷ್ಠತೆ, ಶಿಕ್ಷೆ, ಸ್ಥಳನಿಯುಕ್ತಿ ಮತ್ತು ವರ್ಗಾವಣೆ. ಸಂಯೋಜನೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಈ ಕೆಳಗಿನಂತೆ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿದೆ.
1. ಭಾರತೀಯ ಪೊಲೀಸ್ ಸೇವೆ. (ಐ.ಪಿ.ಎಸ್)ಯ ಸದಸ್ಯರು. 11. ಕರ್ನಾಟಕ ರಾಜ್ಯ ಪೊಲೀಸ್ ಸೇವೆ (ಕೆ.ಪಿ.ಎಸ್) ಯ ಸದಸ್ಯರು. ಈ ಎರಡೂ ವಿಧದ ಸೇವಾ ಸದಸ್ಯರು ಪತ್ರಾಂಕಿತ (ಗೆಜಿಟೆಡ್) ಅಧಿಕಾರಿಗಳು. ಭಾರತೀಯ ಪೊಲೀಸ್ ಸೇವೆ ಸಾಮಾನ್ಯ ಭಾರತೀಯ ಪೊಲೀಸ್ ಸೇವೆಯನ್ನು ಪಾರ್ಲಿಮೆಂಟ್ (ಸಂಸತ್) ಸಂವಿಧಾನದ 312 ಅನುಚ್ಚೇದದ ಮೂಲಕ ಸೃಷ್ಟಿಸಿದೆ ಎಂದು ಪರಿಗಣಿಸಲಾಗಿದೆ. ಅಖಿಲ ಭಾರತ ಸೇವೆಗಳ ಅಧಿನಿಯಮ 1951 (1951ರ ಕೇಂದ್ರೀಯ ಅಧಿನಿಯಮ 61)ರ ಕಲಮು (3) ಉಪಕಲಮು (4)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಾರಿಗೆ ತರಲಾದ ಭಾರತೀಯ ಪೊಲೀಸ್ ಸೇವೆ (ನೇಮಕಾತಿ) ನಿಯಮ 1954 ರ ಪ್ರಕಾರ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು ಒಳಗೊಂಡಿವೆ. ಭಾರತ ಸರಕಾರದ ಗೃಹ ಮಂತ್ರಾಲಯವು ಹೊರಡಿಸಿರುವ ಅಖಿಲ ಭಾರತ ಸೇವೆಗಳ ಕೈಪಿಡಿಯಲ್ಲಿ ಈ ಸೇವಾ ಷರತ್ತು ಮತ್ತು ನಿಯಮವು ಅಡಕವಾಗಿದೆ.

ಶ್ರೇಣಿ:

ರಾಜ್ಯಕ್ಕೆ ಭಾರತೀಯ ಪೊಲೀಸ್ ಸೇವೆಯ ಒಂದು ಪ್ರತ್ಯೇಕ ಶ್ರೇಣಿಯಿದ್ದು, ಅದರ ಸಂಖ್ಯಾಬಲ ಮತ್ತು ರಚನೆಯನ್ನು ಭಾರತೀಯ ಪೊಲೀಸ್ ಸೇವೆ (ಶ್ರೇಣಿ) 1954ರ ನಿಯಮಗಳನ್ವಯ ಕೇಂದ್ರ ಸರಕಾರವು, ರಾಜ್ಯ ಸರ್ಕಾರದೊಡನೆ ಕಾಲ ಕಾಲಕ್ಕೆ ಸಮಾಲೋಚಿಸಿ ನಿಗದಿಪಡಿಸುತ್ತದೆ
ಕೇಂದ್ರ ಸರ್ಕಾರವು ಪ್ರತಿ ವರ್ಷಗಳ ಅವಧಿಗೊಮ್ಮೆ ರಾಜ್ಯ ಸರ್ಕಾರದೊಡನೆ ಸಮಾಲೋಚನೆ ಮಾಡಿ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಗಳ ಸಂಖ್ಯಾಬಲ ಮತ್ತು ಸಂಯೋಜನೆಯನ್ನು ಪುನರ್ ಪರಿಶೀಲಿಸಿ ನಿಗದಿಪಡಿಸುವುದಲ್ಲದೆ ಅದರೊಳಗೆ ಅವಶ್ಯವಿರುವ ಬದಲಾವಣೆಯನ್ನು ಮಾಡುತ್ತದೆ.

ನೇಮಕಾತಿ:

ಭಾರತೀಯ ಪೊಲೀಸ್ ಸೇವೆಗೆ ಅಧಿಕಾರಿಗಳನ್ನು ನೇರ ನೇಮಕಾತಿ ಅಥವಾ ಕರ್ನಾಟಕ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ನೀಡುವ ಮೂಲಕ ನೇಮಕಾತಿ ಮಾಡಲಾಗುತ್ತದೆ. ಭಾರತೀಯ ಪೊಲೀಸ್ ಸೇವೆಗೆ ನೇಮಕಾತಿ ಮಾಡಿಕೊಳ್ಳುವ ನಿಯಮಗಳು ಮತ್ತು ನಿಯಂತ್ರಣಗಳು
i.ಭಾರತೀಯ ಪೊಲೀಸ್ ಸೇವೆ (ನೇಮಕಾತಿ) ನಿಯಮಗಳು 1954
ii.ಭಾರತೀಯ ಪೊಲೀಸ್ ಸೇವೆ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1955
iii.ಭಾರತೀಯ ಪೊಲೀಸ್ ಸೇವೆ (ಭಡ್ತಿಯ ಮೂಲಕ ನೇಮಕಾತಿ) ನಿಯಮಗಳು 1955, ಮತ್ತು
iv. ಭಾರತೀಯ ಪೊಲೀಸ್ ಸೇವೆ (ವಿಶೇಷ ನೇಮಕಾತಿ) ನಿಯಮಗಳು, 1957ರಲ್ಲಿ ಅಡಕವಾಗಿವೆ.
v.ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಭಾರತೀಯ ಪೊಲೀಸ್ ಸೇವೆಗೆ ನೇರ ನೇಮಕಾತಿಯಾದವರನ್ನು ಸಹಾಯಕ ಪೊಲೀಸ್ ಅಧೀಕ್ಷಕ ರೆಂದು ಪದನಾಮ ಮಾಡಲಾಗುತ್ತದೆ.
vi.ಕರ್ನಾಟಕ ರಾಜ್ಯದಲ್ಲಿ ಭಾರತೀಯ ಪೊಲೀಸ್ ಸೇವೆಯ ಶ್ರೇಣಿಯಲ್ಲಿರುವ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿ ಹುದ್ದೆಗಳ ಸಂಖ್ಯೆಯ ಶೇಕಡಾ 33.3ಕ್ಕೆ ಯಾವುದೇ ಸಮಯದಲ್ಲಿ ಮೀರದಂತೆ, ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ ಅಧಿಕಾರಿಗಳನ್ನು ಭಡ್ತಿ ಮೂಲಕ ಭಾರತೀಯ ಪೊಲೀಸ್ ಸೇವೆಯ (ಐ.ಪಿ.ಎಸ್.) ಅಧಿಕಾರಿಗಳನ್ನಾಗಿ ನೇಮಕ ಮಾಡಬಹುದು.
vii.ಭಾರತೀಯ ಪೊಲೀಸ್ ಸೇವೆ (ವಿಶೇಷ ನೀಮಕಾತಿ) ನಿಯಮಗಳು 1957, ರ ಮೂಲಕ ಮಾಡುವ ನೇಮಕಾತಿಯನ್ನು ಹೊರತು ಪಡಿಸಿ, ಭಾರತೀಯ ಪೊಲೀಸ್ ಸೇವೆಗೆ,ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಿಂದ ಸಾಮಾನ್ಯವಾಗಿ ಪೊಲೀಸ್ ಅಧೀಕ್ಷಕರ ಶ್ರೇಣಿಗೆ ಭಡ್ತಿ ನೀಡಲಾಗುತ್ತದೆ.
viii.ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ದರ್ಜೆಗೆ ನೇಮಕ ಮಾಡುವಾಗ, ಪೊಲೀಸ್ ಮಹಾನಿರ್ದೇಶಕರ ದರ್ಜೆಯಲ್ಲಿರುವ ಅಧಿಕಾರಿಗಳಿಂದ ಆಯ್ಕೆ ಮಾಡಿ, ನೇಮಕ ಮಾಡಲಾಗುತ್ತದೆ.
ix.ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ದರ್ಜೆಯಿಂದ, ಪೊಲೀಸ್ ಮಹಾನಿರ್ದೇಶಕರ ದರ್ಜೆಗೆ ಭಡ್ತಿ ನೀಡಲಾಗುತ್ತದೆ.
x.ಪೊಲೀಸ್ ಮಹಾನಿರೀಕ್ಷಕರ ದರ್ಜೆಯಿಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ದರ್ಜೆಗೆ ಭಡ್ತಿ ನೀಡಲಾಗುತ್ತದೆ.
xi.ಪೊಲೀಸ್ ಉಪ ಮಹಾನಿರೀಕ್ಷಕ ದರ್ಜೆಯಿಂದ, ಪೊಲೀಸ್ ಮಹಾನಿರೀಕ್ಷಕರ ದರ್ಜೆಗೆ ಭಡ್ತಿ ನೀಡಲಾಗುತ್ತದೆ.
xii.ಪೊಲೀಸ್ ಅಧೀಕ್ಷಕರ ದರ್ಜೆಯಿಂದ, ಪೊಲೀಸ್ ಉಪಮಹಾನಿರೀಕ್ಷಕರ ದರ್ಜೆಗೆ ಭಡ್ತಿ ನೀಡಲಾಗುತ್ತದೆ.
xiii.ಭಾರತೀಯ ಪೊಲೀಸ್ ಸೇವೆಯಲ್ಲಿನ ಆಯ್ಕೆ ದರ್ಜೆಗೆ, ನೇಮಕವನ್ನು ಹಿರಿಯ ವೇತನ ಶ್ರೇಣಿಯಲ್ಲಿರುವ ಪೊಲೀಸ್ ಅಧೀಕ್ಷಕರ ದರ್ಜೆಯಿಂದ ಆಯ್ಕೆ ಮೂಲಕ ನೇಮಕ ಮಾಡಲಾಗುತ್ತದೆ.
xiv.ಸಹಾಯಕ ಪೊಲೀಸ್ ಅಧೀಕ್ಷಕರ ಶ್ರೇಣಿಯ ಪೊಲೀಸ್ ಅಧಿಕಾರಿಯು, ಕಿರಿಯ ವೇತನ ಶ್ರೇಣಿಗೆ ಸರಕಾರವು ಕಾಲಕಾಲಕ್ಕೆ ನಿಗದಿಪಡಿಸುವ ಸೇವಾವಧಿಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಪೊಲೀಸ್ ಸೇವೆಯ ಹಿರಿಯ ಶ್ರೇಣಿಯ ಅಧೀಕಾರಿಯಾಗಿ ಭಡ್ತಿ ಪಡೆಯಲು ಅರ್ಹರಾಗುತ್ತಾರೆ ಮತ್ತು ಆ ಸೇವಾವಧಿ ಪೂರ್ಣಗೊಳಿಸಿದ ಕೂಡಲೆ, ಉನ್ನತ ಹುದ್ದೆಯನ್ನು ಹೊಂದುವ ಅರ್ಹತೆಗೆ ಒಳಪಟ್ಟು, ಸನಿಹದಲ್ಲೇ ಖಾಲಿಯಾಗುವ ಪೊಲೀಸ್ ಅಧೀಕ್ಷಕರ ಹುದ್ದೆಗೆ ಭಡ್ತಿ ಹೊಂದುತ್ತಾರೆ.
xv.ಭಾರತೀಯ ಪೊಲೀಸ್ ಸೇವೆ (ವೇತನ) ಏಳನೇ ತಿದ್ದುಪಡಿ ನಿಯಮ 1957, ರಲ್ಲಿ ವಿಧಿಸಿದಂತೆ ಗ್ರಾಹ್ಯ ವೇತನ ಶ್ರೇಣಿ ಮತ್ತು ಆ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿದ ವೇತನವು ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಗಳಿಗೆ ಲಭ್ಯವಿರುತ್ತದೆ. ಭಾರತೀಯ ಪೊಲೀಸ್ ಸೇವೆಯ ವೇತನ ಶ್ರೇಣಿಗಳು ಈ ಕೆಳಗಿನಂತಿವೆ.

(ಎ) ಕಿರಿಯ ವೇತನ ಶ್ರೇಣಿ: ----------- ರೂ.8,000-275-13,500

(ಬಿ) ಹಿರಿಯ ವೇತನ ಶ್ರೇಣಿ:
1. ಕಾಲಿಕ ವೇತನ ಶ್ರೇಣಿ (ಖಿಟಜ ಖಛಿಚಿಟಜ) ----------- ರೂ. 10,000-325-15,200
2. ಕಿರಿಯ ಆಡಳಿತಾಧಿಕಾರಿ ವೇತನ ಶ್ರೇಣಿ ----------- ರೂ. 12,000-375-16,500

(ಸಿ) ಆಯ್ಕೆ ವೇತನ ಶ್ರೇಣಿ: ----------- ರೂ. 14,300-400-18,300

(ಡಿ) ಉನ್ನತ ಕಾಲಿಕ ವೇತನ ಶ್ರೇಣಿ:
1. ಪೊಲೀಸ್ ಉಪ ಮಹಾನಿರೀಕ್ಷಕ _______ರೂ. 16,400-450- 20,000
2. ಪೊಲೀಸ್ ಮಹಾ ನಿರೀಕ್ಷಕ ----------- ರೂ. 18,400-500-22,400

(ಇ) ಉನ್ನತ ಕಾಲಿಕ ವೇತನ ಶ್ರೇಣಿಗಿಂತ ಮೇಲ್ಮಟ್ಟದ ವೇತನ ಶ್ರೇಣಿ:
1. ಹೆಚ್ಚುವರಿ ಪೊಲೀಸ್ ಮಹಾನಿದರ್ೇಶಕ ________ರೂ. 22,400-525-24,500
2. ಪೊಲೀಸ್ ಮಹಾನಿದರ್ೇಶಕ --------ರೂ. 24,050-650-26,000

1.ಭಾರತೀಯ ಪೊಲೀಸ್ ಸೇವೆಗೆ ನೇರ ನೇಮಕಾತಿಯಾದವರು, ಕಿರಿಯ ಶ್ರೇಣಿಯ ಮೂಲಕ ಸೇವೆಗೆ ಸೇರಿ ಪೊಲೀಸ್ ಉಪಾಧೀಕ್ಷಕರ ಅಥವಾ ತತ್ಸಮಾನ ಹುದ್ದೆಗೆ ನಿಯುಕ್ತರಾಗುತ್ತಾರೆ. ಹಿರಿಯ ಶ್ರೇಣಿ ಯವರು ಪೊಲೀಸ್ ಅಧೀಕ್ಷಕರಾಗಿ ನೇಮಕಾತಿ ಪಡೆದು, ಜಿಲ್ಲೆಯ ಪ್ರಭಾರ ಅಥವಾ ಇತರ ತತ್ಸಮಾನ ಹುದ್ದೆಯನ್ನು ಹೊಂದುತ್ತಾರೆ.
2.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು, ತನಗೆ ವಿತರಣೆ ಮಾಡಿ ಗೊತ್ತು ಪಡಿಸಿದ ವರ್ಷದಿಂದ ಲೆಕ್ಕಮಾಡಿ, 9ನೇ ವರ್ಷ ಸೇವೆ ಪೂರ್ಣಗೊಳಿಸಿದ ನಂತರ, ಕಿರಿಯ ಆಡಳಿತಾಧಿಕಾರಿಯಾಗಿ ನೇಮಕಗೊಳ್ಳಲು ಅರ್ಹನಾಗುತ್ತಾನೆ. ಈ ದರ್ಜೆಯ ವೇತನ ಪಡೆಯಲು ಆತನು ಆಡಳಿತಾಧಿಕಾರಿಯಾಗಿ ನೇಮಕವಾದ ನಂತರ ಮಾತ್ರ ಅರ್ಹನಾಗುತ್ತಾನೆ. ಈ ದರ್ಜೆಯು ಪ್ರಕಾರ್ಯವಿಲ್ಲದ ದರ್ಜೆಯಾಗಿದ್ದು, ಹಿರಿಯ ಕಾಲವೇತನ ಪಡೆದು 9 ವರ್ಷ ಸೇವೆ ಪೂರ್ಣಗೊಳಿಸಿದ ಎಲ್ಲಾ ಅಧಿಕಾರಿಗಳಿಗೆ ಯಾವುದೇ ಪರಿಶೋಧನೆ ಇಲ್ಲದೆ ಲಭ್ಯವಿರುತ್ತದೆ.
3.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು, ತನಗೆ ವಿತರಣೆ ಮಾಡಿ ಗೊತ್ತು ಪಡಿಸಿದ ವರ್ಷದಿಂದ ಲೆಕ್ಕಮಾಡಿ, 13 ವರ್ಷ ಸೇವೆ ಪೂರ್ಣಗೊಳಿಸಿದ ನಂತರ, ಆಯ್ಕೆ ದರ್ಜೆಗೆ ನೇಮಗೊಳ್ಳಲು ಅರ್ಹನಾಗುತ್ತಾನೆ. ಆ ದರ್ಜೆಯ ವೇತನ ಪಡೆಯಲು ಆತನು ಆಯ್ಕೆ ದರ್ಜೆಗೆ ನೇಮಕವಾದ ನಂತರ ಮಾತ್ರ ಅರ್ಹನಾಗುತ್ತಾನೆ.
4.ಭಾರತೀಯ ಪೊಲೀಸ್ ಸೇವೆಯಲ್ಲಿ ಆಯ್ಕೆ ದರ್ಜೆಗೆ ಮತ್ತು ಆಯ್ಕೆ ದರ್ಜೆಯ ಮೇಲ್ಮಟ್ಟದ ವೇತನ ಶ್ರೇಣಿಯ ಹುದ್ದೆಗಳಿಗೆ, ಶ್ರೇಷ್ಠತೆಯ ಆಧಾರದಲ್ಲಿ, ನಿರೀಕ್ಷಿತ ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊಂಡು, ಆಯ್ಕೆ ಮೂಲಕ ನೇಮಕ ಮಾಡಲಾಗುತ್ತದೆ.

ಪರಿವೀಕ್ಷಣೆ ಮತ್ತು ತರಬೇತಿ:

1.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು ನೇಮಕಾತಿ ಹೊಂದಿದ ಎರಡು ವರ್ಷಗಳವರೆಗೆ ಪರಿವೀಕ್ಷಣಾ ಸೇವೆಯಲ್ಲಿರುತ್ತಾನೆ ಮತ್ತು ಆ ಪರಿವೀಕ್ಷಣಾ ಸೇವೆಯು ಭಾರತೀಯ ಪೊಲೀಸ್ ಸೇವೆ (ಪರಿವೀಕ್ಷಣಾ) ನಿಯಮಗಳು 1954ರ ನಿಬಂಧನೆಗೆ ಒಳಪಟ್ಟಿರುತ್ತದೆ.
2.ಸರ್ದಾರ್ ವಲ್ಲಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ಹೈದರಾಬಾದ್ನಲ್ಲಿ ತರಬೇತಿ:
3.ಪ್ರತಿಯೊಬ್ಬ ಸಹಾಯಕ ಪೊಲೀಸ್ ಅಧೀಕ್ಷಕನು ಸರ್ದಾರ್ ವಲ್ಲಭಾಯಿ ಪಟೀಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹೈದರಾಬಾದ್ನಲ್ಲಿ ಅಥವಾ ಇತರ ಯಾವುದೇ ಸ್ಥಳದಲ್ಲಿ ಕೇಂದ್ರ ಸರಕಾರವು ಅಪೇಕ್ಷಿಸುವ ತರಬೇತಿಯನ್ನು ಹಾಗೂ ಆ ಸರಕಾರವು ಇಚ್ಚಿಸುವ ಅವಧಿಯವರೆಗೆ ಪಡೆಯಬೇಕು. ಭಾರತೀಯ ಪೊಲೀಸ್ ಸೇವೆ (ಪರಿವೀಕ್ಷಣಾರ್ಥಿಗಳು ಅಂತಿಮ ಪರೀಕ್ಷೆ) ನಿಯಮಗಳು, 1969ರಲ್ಲಿ ವಿಧಿಸಿದಂತೆ ಅಕಾಡೆಮಿಯಲ್ಲಿ ತರಬೇತಿ ಅವಧಿಯು ಪೂರ್ಣಗೊಂಡ ಕೂಡಲೆ ಅಕಾಡೆಮಿಯು ನಡೆಸುವ ಅಂತಿಮ ಪರೀಕ್ಷೆಗೆ ಹಾಜರಾಗಬೇಕು.

ರಾಜ್ಯದಲ್ಲಿ ತರಬೇತಿ:

1.ಪರಿವೀಕ್ಷಣಾ ಸಹಾಯಕ ಪೊಲೀಸ್ ಅಧೀಕ್ಷಕನು ಸದರ್ಾರ ವಲ್ಲಭಾಯಿ ಪಟೀಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹೈದರಾಬಾದಿನಲ್ಲಿ ಪ್ರಥಮ ಹಂತದ ತರಬೇತಿಯನ್ನು ಪೂರ್ಣಗೊಳಿಸಿ, ರಾಜ್ಯ ಸರ್ಕಾರದ ಸೇವೆಗೆ ಹಾಜರಾಗಿ 34 ವಾರಗಳ ಪ್ರಾಯೋಗಿಕ ತರಬೇತಿ ಪಡೆದ ನಂತರ, ದ್ವಿತೀಯ ಹಂತದ ತರಬೇತಿಗೆ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹೈದರಾಬಾದ್ಗೆ ಮರಳಿ ವರದಿ ಮಾಡಬೇಕು. ಅತನು ಆ ಪ್ರಾಯೋಗಿಕ ತರಬೇತಿಯಲ್ಲಿ ತೃಪ್ತಿಕರ ಪ್ರಗತಿ ಹೊಂದಿಲ್ಲವೆಂದು ಕಂಡು ಬಂದರೆ ಪ್ರಾಯೋಗಿಕ ತರಬೇತಿಯ ಕಾಲಾವಧಿಯನ್ನು ರಾಜ್ಯ ಸರಕಾರವು 34 ವಾರಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು.
2.ಪರಿವೀಕ್ಷಣಾ ಸಹಾಯಕ ಪೊಲೀಸ್ ಅಧೀಕ್ಷಕನನ್ನು ಪ್ರಾಯೋಗಿಕ ತರಬೇತಿಯ ಪ್ರಥಮ ಆರು ವಾರಗಳ ಕಾಲಾವಧಿಗೆ ಗ್ರಾಮೀಣ ಪೊಲೀಸ್ ಠಾಣೆಯ ಸಹಿತ, ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ನಿಯುಕ್ತಗೊಳಿಸಲಾಗುತ್ತದೆ, ಮತ್ತು ಉಳಿದ 28 ವಾರಗಳ ಕಾಲಾವಧಿಗೆ ಜಿಲ್ಲೆಯ ಪೊಲೀಸ್ ಅಧೀಕ್ಷಕನ ನೇರ ಸುಪರ್ದಿಯಲ್ಲಿ ಪ್ರಯೋಗಿಕ ತರಬೇತಿಗೆ ಒಳಪಡಿಸಲಾಗುತ್ತದೆ.
3.ಅನುಸೂಚಿ-1 ರಲ್ಲಿ 34 ವಾರಗಳ ಅವಧಿಯ ಪ್ರಾಯೋಗಿಕ ತರಬೇತಿಯ ವಿವರಗಳನ್ನು ಕೊಡಲಾಗಿದೆ.
4.ಜಿಲ್ಲೆಯಲ್ಲಿ ಪರಿವೀಕ್ಷಣಾ ಸಹಾಯಕ ಪೊಲೀಸ್ ಅಧೀಕ್ಷಕನ ಪ್ರಾಯೋಗಿಕ ತರಬೇತಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕನು, ವಲಯ ಪೊಲೀಸ್ ಮಹಾನಿರೀಕ್ಷಕ ಹಾಗೂ ಪೊಲೀಸ್ ಮಹಾ ನಿರ್ದೇಶಕನು, ವಿಶೇಷ ನಿಗಾವಹಿಸಿ ಅತೀ ಎಚ್ಚರಿಕೆಯಿಂದ ಉಸ್ತುವಾರಿ ಮಾಡಬೇಕು.
5.ಪ್ರತಿಯೊಬ್ಬ ಪರಿವೀಕ್ಷಣಾ ಸಹಾಯಕ ಪೊಲೀಸ್ ಅಧೀಕ್ಷಕನ ಪ್ರಾಯೋಗಿಕ ತರಬೇತಿಯು ಮುಕ್ತಾಯವಾದ ಕೂಡಲೆ ಆತನು ಪಡೆದ ಪ್ರಾಯೋಗಿಕ ತರಬೇತಿಯ ಅಂತಿಮ ಮೌಲ್ಯಮಾಪನವನ್ನು ಪೊಲೀಸ್ ಮಹಾನಿದರ್ೇಶಕರು ಸರಕಾರಕ್ಕೆ ನಮೂನೆ 1ರಲ್ಲಿ ವರದಿ ಮಾಡಬೇಕು.
6.ಪರಿವೀಕ್ಷಣಾ ಸಹಾಯಕ ಪೊಲೀಸ್ ಅಧೀಕ್ಷಕನು ಜಿಲ್ಲಾ ಮಟ್ಟದ ಪ್ರಾಯೋಗಿಕ ತರಬೇತಿಯನ್ನು ತೃಪ್ತಿಕರವಾಗಿ ಮುಗಿಸಿಕೊಂಡ ನಂತರ, ಆತನನ್ನು ಒಂದು ಉಪವಿಭಾಗದ ಪ್ರಭಾರ ಪೊಲೀಸ್ ಅಧೀಕ್ಷಕನಾಗಿ ನಿಯುಕ್ತಿ ಮಾಡಲಾಗುವುದು.
7.ಭಾರತೀಯ ಪೊಲೀಸ್ ಸೇವೆಯಲ್ಲಿ ನೇಮಕಗೊಂಡ ಪರಿವೀಕ್ಷಣಾಧಿಕಾರಿಯು, ತನ್ನ ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಮುಗಿಸಿಕೊಂಡ ನಂತರ, ಸೇವೆಯಲ್ಲಿ ಖಾಯಂಗೊಳ್ಳಲು ಅರ್ಹನಾಗುತ್ತಾನೆ.

ಇಲಾಖಾ ಪರೀಕ್ಷೆಗಳು ಮತ್ತು ವೇತನ ಬಡ್ತಿ ನಿಯಮಗಳು:

ರಾಜ್ಯದಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಪೊಲೀಸ್ ಸೇವೆಯಲ್ಲಿರುವ ಅಧಿಕಾರಿಯು, ತಾನು ನೇಮಕಗೊಂಡ ಎರಡು ವರ್ಷಗಳ ಒಳಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಈ ಕೆಳಗಿನ ಇಲಾಖಾ ಪರೀಕ್ಷೆಗಳಲ್ಲಿ ಪಾಸಾಗಿ ಅರ್ಹತೆ ಪಡೆದುಕೊಳ್ಳಬೇಕು.

(ಅ) ಉನ್ನತ ಲೆಕ್ಕ ಪತ್ರ ಪರೀಕ್ಷೆ
(ಆ) ಕನ್ನಡ ಪರೀಕ್ಷೆ
(ಇ) ಸಾಮಾನ್ಯ ಕಾನೂನು ಪರೀಕ್ಷೆ

1.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು, ಎಸ್, ಎಸ್, ಎಲ್, ಸಿ. ಯಲ್ಲಿ ಅಥವಾ ಕರ್ನಾಟಕ ಸರಕಾರವು ಮಾನ್ಯತೆ ಮಾಡಿದ ತತ್ಸಮಾನ ಪರೀಕ್ಷೆಯನ್ನು ಕನ್ನಡ ಮಾದ್ಯಮದಲ್ಲಿ ಅಥವಾ ಕನ್ನಡ ಭಾಷೆಯನ್ನು ಪ್ರಧಾನ ಭಾಷೆಯನ್ನಾಗಿ, ದ್ವಿತೀಯ ಭಾಷೆಯನ್ನಾಗಿ, ಅಥವಾ ಐಚ್ಚಿಕ ಭಾಷೆಯನ್ನಾಗಿ, ತೆಗೆದುಕೊಂಡು ಪಾಸಾಗಿದ್ದಲ್ಲಿ, ಸರಕಾರಿ ಆದೇಶ ಸಂಖ್ಯೆ ಡಿ.ಪಿ.ಎ.ಆರ್. 461, ಎಸ್.ಎ.ಎಸ್. 94 ಬೆಂಗಳೂರು ದಿನಾಂಕ 19-11-94 ಅನುಸೂಚಿ- ರೊಂದಿಗೆ ಓದಿಕೊಂಡು ಕರ್ನಾಟಕ ನಾಗರೀಕ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆ) ನಿಯಮಗಳು, 1974, ರ ಕನ್ನಡ ಭಾಷಾ ಇಲಾಖಾ ಪರೀಕ್ಷೆಗೆ ವಿನಾಯತಿ ಪಡೆಯಲು ಅರ್ಹನಾಗುತ್ತಾನೆ.ಕರ್ನಾಟಕ ಶ್ರೇಣಿಯ ಪೊಲೀಸ್ ಶ್ರೇಣೀಯ ಪೊಲೀಸ್ ಸೇವೆಗೆ ವಿತರಣೆ ಮಾಡಲಾದ ಭಾರತೀಯ ಪೊಲೀಸ್ ಸೇವೆಯ ಪರಿವೀಕ್ಷಣಾಧಿಕಾರಿಯು, ತನಗೆ ನಿಗದಿಪಡಿಸಲಾದ ಕನ್ನಡ ಭಾಷಾ ಇಲಾಖಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಸಲುವಾಗಿ, ರಾಜ್ಯದಲ್ಲಿ ಜಿಲ್ಲಾ ತರಬೇತಿಗೆ ವರದಿ ಮಾಡಿದ ಕೂಡಲೇ, ಒಬ್ಬ ಕನ್ನಡ ಶಿಕ್ಷಕನನ್ನು ನೇಮಿಸಿಕೊಳ್ಳಬಹುದು. ಹಾಗೇ ನೇಮಿಸಿಕೊಂಡ ಕನ್ನಡ ಶಿಕ್ಷಕನಿಗೆ ಮಾಸಿಕ ರೂ. 500 ರಂತೆ ಪರಿವೀಕ್ಷಣಾಧಿಕಾರಿಯು ಕನ್ನಡ ಭಾಷಾ ಪರೀಕ್ಷೆಯನ್ನು ಪಾಸುಮಾಡುವ ವರೆಗೆ, ಅಥವಾ 18 ತಿಂಗಳವರೆಗೆ, ಅಂದರೆ ಈ ಪೈಕಿ ಯಾವುದು ಮೊದಲಿನದೋ ಅಲ್ಲಿಯವರೆಗೆ, ಪಾವತಿಮಾಡಲಾದ ಸಂಭಾವನೆಯನ್ನು ಭರಿಸಿಕೊಡಲು ಮಂಜೂರಾತಿ ಇರುತ್ತದೆ.
2.ರಾಜ್ಯ ಸರಕಾರದ ಸೇವೆಗೆ ಸೇರಿದ ನಂತರ ಸಲ್ಲತಕ್ಕ ವೇತನ ಬಡ್ತಿಯನ್ನು, ಮೇಲಿನಂತೆ ಎರಡು ವರ್ಷ ಕಾಲಾವದಿ ಮುಕ್ತಾಯವಾಗುವ ಮೊದಲು ಸಾಮಾನ್ಯವಾಗಿ ಮಂಜೂರು ಮಾಡಲಾಗುತ್ತದೆ. ಒಂದು ವೇಳೆ, ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು, ಈ ಪರೀಕ್ಷೆಗಳನ್ನು ಸದರಿ ಕಾಲಾವಧಿಯೊಳಗೆ ಯಶಸ್ವಿಯಾಗಿ ಪೂರ್ತಿಗೊಳಿಸದಿದ್ದರೆ, ಆತನಿಗೆ ಸಲ್ಲತಕ್ಕ ಅನಂತರದ ವೇತನ ಬಡ್ತಿಯನ್ನು ತಡೆಹಿಡಿಯಲಾಗುತ್ತದೆ. ಹಾಗೆ ತಡೆಹಿಡಿಯಲಾದ ವೇತನ ಬಡ್ತಿಯನ್ನು ಭಾರತೀಯ ಪೊಲೀಸ್ ಸೇವೆ (ವೇತನ) ನಿಯಮ, 1954 ರಲ್ಲಿರುವ ನಿಯಮ 7ರ ಉಪಬಂಧಗಳಿಗೆ ಒಳಪಟ್ಟು ಯಾವಾಗ ಆ ಪರೀಕ್ಷೆಗಳನ್ನು ಆತನು ಯಶಸ್ವಿಯಾಗಿ ಪೂರ್ತಿಗೊಳಿಸುತ್ತಾನೋ, ಆ ದಿನದಂದು ಬಿಡುಗಡೆ ಮಾಡಲಾಗುವುದು ಮತ್ತು ಆ ವೇತನ ಬಡ್ತಿಯನ್ನು ತಡೆಹಿಡಿಯದೆ ಇರುತ್ತಿದ್ದರೆ ಹೇಗೋ ಹಾಗೆ, ನಂತರದ ವೇತನ ಬಡ್ತಿಯು ಪ್ರಾಪ್ತವಾಗುತ್ತದೆ; ಆದರೆ ತಡೆಹಿಡಿಯಲಾದ ಅವಧಿಯ ವೇತನ ಬಡ್ತಿಯ ಬಾಕಿಯನ್ನು ಪಾವತಿ ಮಾಡಲಾಗುವುದಿಲ್ಲ.
3.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯು ಉನ್ನತ್ತ ಲೆಕ್ಕಪತ್ರ ಪರೀಕ್ಷೆ, ಸಾಮಾನ್ಯ ಕಾನೂನು ಪರೀಕ್ಷೆ ಭಾಗ 1,2 ಮತ್ತು ಕನ್ನಡ ಭಾಷಾ ಪರೀಕ್ಷೆಗಳನ್ನು ಪೂರ್ತಿಗೊಳಿಸಿದಾಗ, ಭಾರತೀಯ ಪೊಲೀಸ್ ಸೇವೆ (ವೇತನ ನಿಯಮ 1954, ರಲ್ಲಿರುವ ನಿಯಮ 7)ರ ಪ್ರಕಾರ ಪ್ರಥಮದ ಎರಡು ವೇತನ ಬಡ್ತಿಯನ್ನು ಮಂಜೂರು ಮಾಡಬಹುದು.
4.ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯ ಸೇವಾವಧಿಯನ್ನು ಗಣನೆಗೆ ತೆಗೆದುಕೊಳ್ಳದೆ, ಆತನು ಪಾಸು ಮಾಡಿದ ಪರೀಕ್ಷೆಗಳ ಕೊನೆಯ ದಿನಾಂಕದ ಮರುದಿನದಿಂದ ವೇತನ ಬಡ್ತಿಗಳನ್ನು ಮಂಜೂರು ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಸೇವಾ ಶ್ರೇಣಿ:

1.ಕರ್ನಾಟಕ ರಾಜ್ಯ ಪೊಲೀಸ್ ಸೇವಾ ಶ್ರೇಣಿಯಲ್ಲಿ, ರಾಜ್ಯದೊಳಗೆ ಭಾರತೀಯ ಪೊಲೀಸ್ ಸೇವಾ ಶ್ರೇಣಿಯಲ್ಲಿ ಒಳಗೊಂಡಿರದ ಉನ್ನತ ದರ್ಜೆಯ ಪೊಲೀಸ್ ಸೇವೆಯ ಎಲ್ಲಾ ಹುದ್ದೆಗಳು ಒಳಗೊಂಡಿವೆ. ಭಾರತೀಯ ಪೊಲೀಸ್ ಸೇವಾ ಶ್ರೇಣಿಯ ಸಂಖ್ಯಾ ಬಲವನ್ನು ಅನುಸೂಚಿ ರಲ್ಲಿ ತೋರಿಸಲಾಗಿದೆ.
2.ಕರ್ನಾಟಕ ರಾಜ್ಯ ಪೊಲೀಸ್ ಸೇವಾ ಶ್ರೇಣಿಯ ಸಂಖ್ಯಾ ಬಲವನ್ನು ಅನುಸೂಚಿ-(ಗಿ) ರಲ್ಲಿ ತೋರಿಸಲಾಗಿದೆ ಮತ್ತು ಆ ಸಂಖ್ಯಾ ಬಲವು ಕಾಲಕಾಲಕ್ಕೆ ಕರ್ನಾಟಕ ರಾಜ್ಯವು ಹೊರಡಿಸುವ ತಿದ್ದುಪಡಿಗೆ ಒಳಪಟ್ಟಿರುತ್ತದೆ.

ನೇಮಕಾತಿ:

ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ ಅಧಿನಿಯಮ 1978, (1990ರ ಕರ್ನಾಟಕ ಅಧಿನಿಯಮ (14) ರ ಕಲಂನ (3) ಉಪಕಲಂ (1)ನ್ನು, ಕಲಂ(8)ರೊಂದಿಗೆ ಓದಿಕೊಂಡು ಪ್ರದತ್ತವಾದ ಅಧಿಕಾರದ ಅನ್ವಯ ರಚಿಸಲಾದ, ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮ, 1994 ಮತ್ತು ಕರ್ನಾಟಕ ಪತ್ರಾಂಕಿತ ಪರಿವೀಕ್ಷಣಾಧಿಕಾರಿಗಳ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು, 1997ರ ಉಪಬಂಧಗಳಿಗೆ ಅನುಸಾರವಾಗಿ ಬಡ್ತಿ ನೀಡುವ ಮೂಲಕ ಅಥವಾ ಕರ್ನಾಟಕ ಲೋಕ ಸೇವಾ ಆಯೋಗದಿಂದ ನೇರ ನೇಮಕಾತಿ ಮಾಡುವ ಮೂಲಕ ಕರ್ನಾಟಕ ಪೊಲೀಸ್ ಸೇವಾ ಶ್ರೇಣಿಗೆ ನೇಮಕಾತಿ ಮಾಡಲಾಗುತ್ತದೆ.

ಪೊಲೀಸ್ ಅಧೀಕ್ಷಕರು ಮತ್ತು ತತ್ಸಮಾನ ಹುದ್ದೆಗಳು:

1.ಪೊಲೀಸ್ ಅಧೀಕ್ಷಕರ, ಸಹಾಯಕ ಪೊಲೀಸ್ ಅಧೀಕ್ಷಕರ, ಮತ್ತು ತತ್ಸಮಾನ ಹುದ್ದೆಗಳಿಗೆ, ಜೇಷ್ಠತೆ ಮತ್ತು ಅರ್ಹತೆಯ ಆಧಾರದಲ್ಲಿ ಅಂದರೆ, ಜೇಷ್ಠತೆಯ ಮೇಲೆ ಕರ್ತವ್ಯ ನಿರ್ವಹಿಸುವ ದೇಹದಾಢ್ರ್ಯತೆಗೆ ಒಳಪಟ್ಟು ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮ 1994ರ ಅನ್ವಯ ಬಡ್ತಿ ಪಡೆಯಲು ಅರ್ಹತೆ ಇರುವ ಆಭ್ಯರ್ಥಿಗಳ ಪೈಕಿ, ಉಪ ಪೊಲೀಸ್ ಅಧೀಕ್ಷಕರ / ಪೊಲೀಸ್ ಸಮಾದೇಷ್ಠರು, ಶ್ರೇಣಿಯಿಂದ ಸಂದರ್ಭನುಸಾರ ಬಡ್ತಿ ಮೂಲಕ ನೇಮಕಾತಿ ಮಾಡಲಾಗುತ್ತದೆ.
2.ಪೊಲೀಸ್ ಅಧೀಕ್ಷಕ (ನಿಸ್ತಂತು) ಹುದ್ದೆಗಳಿಗೆ, ಉಪ ಪೊಲೀಸ್ ಅಧೀಕ್ಷಕ (ನಿಸ್ತಂತು) / ಉಪಪೊಲೀಸ್ ಅಧೀಕ್ಷಕ (ಗುಪ್ತದಳ) ಶ್ರೇಣಿಯಿಂದ, ಸಂಯೋಜಿತ ಜೇಷ್ಠತೆ, ಅಂದರೆ ಜೇಷ್ಠತೆಯು ಸೇವಾವಧಿಯ ಆಧಾರದಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮಗಳು, 1994ರ ಉಪಬಂಧಗಳಿಗೆ ಅನುಸಾರವಾಗಿ, ನಿರ್ಧರಿಸಲಾದಂತೆ ಬಡ್ತಿ ನೀಡುವ ಮೂಲಕ ನೇಮಕಾತಿ ಮಾಡಲಾಗುವುದು.
3.ಅಶ್ವಾರೋಹಿದಳದ ಸಮಾವೇಶ ರ ಹುದ್ದೆಗಳಿಗೆ ಸಶಸ್ತ್ರ ಪೊಲೀಸ್ ದಳದಿಂದ ಅಧಿಕಾರಿಯನ್ನು ಅಥವಾ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮ, 1994 ರಲ್ಲಿ ನಿಗದಿಪಡಿಸಿದ ಅರ್ಹತೆ ಹೊಂದಿರುವ ಅಧಿಕಾರಿಯನ್ನು ಕರಾರಿನ ಮೇರೆಗೆ ನೇಮಕ ಮಾಡುವ ಮೂಲಕ, ನೌಕರಿ ಬಡ್ತಿ ಮಾಡಲಾಗುವುದು.
4.ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳಿಗೆ, ಪೊಲೀಸ್ ಉಪಾಧೀಕ್ಷಕ (ಸಿವಿಲ್) ಶ್ರೇಣಿಯಿಂದ ಜೇಷ್ಠತೆ ಮತ್ತು ಅರ್ಹತೆ ಆಧಾರದಲ್ಲಿ ಬಡ್ತಿ ನೀಡುವ ಮೂಲಕ ನೇಮಕ ಮಾಡಲಾಗುತ್ತದೆ.

ಪೊಲೀಸ್ ಅಧೀಕ್ಷಕ(ವಾಹನ ಸಾರಿಗೆ):

ಪೊಲೀಸ್ ಅಧೀಕ್ಷಕ (ವಾಹನ ಸಾರಿಗೆ) ಹುದ್ದೆಗೆ, ಉಪ ಪೊಲೀಸ್ ಅಧೀಕ್ಷಕರು ಸಶಸ್ತ್ರ ಮೀಸಲು ದಳದಿಂದ ಬಡ್ತಿ ಮೂಲಕ ಅಥವಾ ತತ್ಸಮಾನ ಶ್ರೇಣಿಯಿಂದ ಪ್ರತಿನಿಯೋಜನೆ ಮೂಲಕ ಅಥವಾ ಕರಾರಿನ ಮೂಲಕ, ನೇಮಕಾತಿ ಮಾಡಲಾಗುತ್ತದೆ.

ಪೊಲೀಸ್ ಉಪಾಧೀಕ್ಷಕ(ಸಿವಿಲ್):

ರಾಜ್ಯದಲ್ಲಿರುವ ಪೊಲೀಸ್ ಉಪಾಧೀಕ್ಷಕರ ಮತ್ತು ಸಹಾಯಕ ಪೊಲೀಸ್ ಅಧೀಕ್ಷಕರ ಹುದ್ದೆಗಳ ಒಟ್ಟು ಸಂಖ್ಯೆಯ ಪೈಕಿ ನಿಗದಿತ ಪ್ರಮಾಣದ ಹುದ್ದೆಗಳನ್ನು ಭಾರತೀಯ ಪೊಲೀಸ್ ಸೇವಾ ಶ್ರೇಣಿಯ ಸಹಾಯಕ ಪೊಲೀಸ್ ಅಧೀಕ್ಷಕರ ಹುದ್ದೆಗಳಿಗೆ ಭಾರತ ಸರಕಾರವು ಪ್ರತಿ ಮೂರು ವರ್ಷಕ್ಕೊಮ್ಮೆ ಮೀಸಲು ಇರುತ್ತದೆ. ಬಾಕಿ ಉಳಿದ ಹುದ್ದೆಗಳನ್ನು ಕರ್ನಾಟಕ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮ 1994ರ ಅನ್ವಯ ಈ ಕೆಳಗಿನಂತೆ ಭರ್ತಿ ಮಾಡಲಾಗುವುದು.

(ಎ) ನೇರ ನೇಮಕಾತಿ ಮೂಲಕ ಶೇಕಡಾ 33.3
(ಬಿ) ಪೊಲೀಸ್ ನಿರೀಕ್ಷಕ (ಸಿವಿಲ್) ಶ್ರೇಣಿಯಿಂದ ಆಯ್ಕೆ ಮಾಡಿ ಬಡ್ತಿ ನೀಡುವ ಮೂಲಕ ಶೇಕಡಾ 66.67

ಪೊಲೀಸ್ ಉಪಾಧೀಕ್ಷಕರು (ಸಶಸ್ತ್ರ ದಳ):

ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ, ಜೇಷ್ಠತೆ ಮತ್ತು ಅರ್ಹತೆಯ ಆಧಾರದಲ್ಲಿ ಪೊಲೀಸ್ ನಿರೀಕ್ಷಕರು (ಸಶಸ್ತ್ರ ಮೀಸಲು ದಳ) ಶ್ರೇಣಿಯಿಂದ ಬಡ್ತಿ ನೀಡುವ ಮೂಲಕ ನೇಮಕಾತಿ ಮಾಡಲಾಗುವುದು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ ಸಹಾಯಕ ಸಮಾದೇಷ್ಠಕರು:

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ ಸಹಾಯಕ ಸಮಾದೇಷ್ಠಕರ ಹುದ್ದೆಗಳ ಪೈಕಿ ಶೇಕಡಾ 50 ಹುದ್ದೆಗಳನ್ನು ಜೇಷ್ಠತೆ ಮತ್ತು ಅರ್ಹತೆಯ ಆಧಾರದಲ್ಲಿ ಪೊಲೀಸ್ ಪ್ರಧಾನ ಸುಬೇದಾರ್ಗಳ ಮತ್ತು ಸುಬೇದಾರುಗಳ ಶ್ರೇಣಿಯಿಂದ ಬಡ್ತಿ ನೀಡುವ ಮೂಲಕ ಭರ್ತಿ ಮಾಡಲಾಗುವುದು, ಮತ್ತು ಬಾಕಿ ಉಳಿದ ಶೇಕಡ 50 ಹುದ್ದೆಗಳನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳ (ನೇಮಕಾತಿ ಮತ್ತು ಸೇವಾ ಶರತ್ತುಗಳು) ನಿಯಮ, 1974ರ ಅನ್ವಯ ನೇರ ನೇಮಕಾತಿ ಮಾಡಲಾಗುವುದು.

ಪೊಲೀಸ್ ಅಧೀಕ್ಷಕರು (ಬೆರೆಳೊತ್ತು ವಿಭಾಗ):

ಪೊಲೀಸ್ ಅಧೀಕ್ಷಕರು (ಬೆರಳೊತ್ತು ವಿಭಾಗ) ಹುದ್ದೆಗೆ, ಜೇಷ್ಠತೆ ಮತ್ತು ಅರ್ಹತೆ ಆಧಾರದಲ್ಲಿ ಪೊಲೀಸ್ ಉಪಾಧೀಕ್ಷಕರು (ಬೆರಳೊತ್ತು ವಿಭಾಗ) ಶ್ರೇಣಿಯಿಂದ ಬಡ್ತಿ ನೀಡುವ ಮೂಲಕ ನೇಮಕಾತಿ ಮಾಡಲಾಗುವುದು.

ಆರಕ್ಷಕ ಉಪಾಧೀಕ್ಷಕರು, ಬೆರಳೊತ್ತು ವಿಭಾಗ:

ಪೊಲೀಸ್ ಉಪಾಧೀಕ್ಷಕರು (ಬೆರಳೊತ್ತು ವಿಭಾಗ) ಹುದ್ದೆಗೆ, ಜೇಷ್ಠತೆ ಮತ್ತು ಅರ್ಹತೆ ಆಧಾರದಲ್ಲಿ ಪೊಲೀಸ್ ನಿರೀಕ್ಷಕರು (ಬೆರಳೋತ್ತು ವಿಭಾಗ) ಶ್ರೇಣಿಯಿಂದ ಬಡ್ತಿ ನೀಡುವ ಮೂಲಕ ನೇಮಕಾತಿ ಮಾಡಲಾಗುವುದು.

ವೇತನ:

ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಲ್ಲಿರುವವರಿಗೆ 1994ರ ಕರ್ನಾಟಕ ನಾಗರೀಕಾ (ಸಿವಿಲ್) ಪರಿಷ್ಕೃತ ವೇತನ ನಿಯಮಗಳಲ್ಲಿ ನಿಗದಿ ಪಡಿಸಿರುವ ವೇತನ ಶ್ರೇಣಿಗಳು ಅನ್ವಯವಾಗುತ್ತವೆ.

ಪರಿವೀಕ್ಷಣರ ಮತ್ತು ತರಬೇತಿ:

1. ಪೊಲೀಸ್ ಅಧಿಕಾರಿಗಳು
ಅಶ್ವಾರೋಹಿ ದಳದ ಸಮಾದೇಷ್ಠಕ ರಾಗಿ ನೇರ ನೇಮಕಾತಿಕೊಂಡ ಅಧಿಕಾರಿಗಳು, ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳ ಲಿಪಿಕ ಸೇವೆಗಳ ಸಹಿತ (ನೇಮಕಾತಿ) ನಿಯಮ 1994ರಲ್ಲಿ ನಿಗದಿಪಡಿಸಿದಂತೆ 2ವರ್ಷಗಳವರೆಗೆ ಪರಿವೀಕ್ಷಣೆ ತರಬೇತಿಯಲ್ಲಿರುತ್ತಾರೆ.
2. ಪೊಲೀಸ್ ಉಪಾಧೀಕ್ಷಕರು (ಸಿವಿಲ್)
ಪೊಲೀಸ್ ಉಪಾಧೀಕ್ಷಕರಾಗಿ ನೇಮಕಾತಿಗೊಂಡ ಅಧಿಕಾರಿಗಳು, ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳ (ನೇಮಕಾತಿ) ನಿಯಮ 1967ರಲ್ಲಿ ನಿಗದಿಪಡಿಸಿದಂತೆ 2 ವರ್ಷಗಳೊಳಗೆ ಪರಿವೀಕ್ಷಣೆಯಲ್ಲಿರುವುದಲ್ಲದೆ ಕರ್ನಾಟಕ ಪತ್ರಾಂಕಿತ ಪರಿವೀಕ್ಷಣಾಧಿಕಾರಿಗಳ ನೇಮಕಾತಿ ಶ್ರೇಣಿ 1 ಮತ್ತು 2 ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಿಯಮ 1966ರ ಸದರಿ ಎರಡು ವರ್ಷಗಳ ಅವಧಿಯಲ್ಲಿ ತರಬೇತಿಯಲ್ಲಿರುತ್ತಾರೆ.

ಕರ್ನಾಟಕ ಪೊಲೀಸ್ ಅಕಾಡಮಿ ಮೈಸೂರಿನಲ್ಲಿ ತರಬೇತಿ:

(ಎ) ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಪರಿವೀಕ್ಷಣಾಧಿಕಾರಿಗಳಾಗಿ ಮೊದಲನೆ ವರ್ಷ ಅನುಸೂಚಿ-ತ ರಲ್ಲಿ ನಮೂದಿಸಿದಂತೆ ನಿಯಮಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಶಿಕ್ಷಣ ನೀಡಲಾಗುವುದು.
(ಬಿ) ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಭೂಮಾಪನ, ನಕ್ಷೆ ತಯಾರಿಕೆ, ಪ್ರಥಮ ಚಿಕಿತ್ಸೆ,ತುರ್ತುಚಿಕಿತ್ಸೆ, ರೋಗಿಗಳ ರವಾನೆ ವಾಹನ ಹಾಗೂ ಹಿಂದಿ ಭಾಷೆಯಲ್ಲಿ ಅರೆ ಕಾಲಿಕ ಉಪನ್ಯಾಸಕರಾಗಿ ಸೇವೆ ಮಾಡಲು ಅರ್ಹತೆ ಇರುವ ಉಪನ್ಯಾಸಕರ ಕೊರತೆ ಇದ್ದಲ್ಲಿ, ಸರ್ಕಾರದ ಮಂಜೂರಾತಿ ಪಡೆದು ಸಂಬಂಧಿಸಿದ ಇಲಾಖೆಯ ಅರ್ಹ ಉಪನ್ಯಾಸಕರನ್ನು ಪಡೆದುಕೊಂಡು ಪರಿವೀಕ್ಷಣಾಧಿಕಾರಿಗಳಿಗೆ ತರಬೇತಿ ಕೊಡಸಲಾಗುತ್ತದೆ.
(ಸಿ) ಪರಿವೀಕ್ಷಣ ಪೊಲೀಸ್ ಉಪಾಧೀಕ್ಷಕರಿಗೆ ತರಬೇತಿಯ ಅವಧಿಯಲ್ಲಿ ಕಾನೂನು ಮತ್ತು ಇತರೆ ವಿಷಯಗಳಲ್ಲಿ ಶಿಕ್ಷಣ ಕೊಡಲು ಪ್ರತ್ಯೇಕ ತರಗತಿಗಳನ್ನು ಏರ್ಪಡಿಸತಕ್ಕದ್ದು. ಆದರೆ ಡ್ರಿಲ್ ಮತ್ತು ಪರೇಡ್ಗಳ ತರಬೇತಿಯನ್ನು ಅವರಿಗೆ ತರಬೇತಿಯಲ್ಲಿರುವ ಪೊಲೀಸ್ ಉಪನಿರೀಕ್ಷಕರ ಜೊತೆಯಲ್ಲಿ ನೀಡಲಾಗುವುದು. ಅವರ ಊಟ ಮತ್ತು ವಸತಿಗೆ ಪ್ರತ್ಯೇಕ ವ್ಯವಸ್ಥೆ ಮಾಡತಕ್ಕದ್ದು.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪರೀಕ್ಷೆ.

ತರಬೇತಿ ಪೂರ್ಣಗೊಂಡ ನಂತರ ಒಳಾಂಗಣ ಮತ್ತು ಹೊರಾಂಗಣ ಎರಡು ವಿಷಯಗಳಲ್ಲಿ ಅಂತಿಮ ಪರೀಕ್ಷೆಯನ್ನು ಕರ್ನಾಟಕ ಪೊಲೀಸ್ ಅಕಾಡಮಿ ಮೈಸೂರಿನಲ್ಲಿ ನಡೆಸಲಾಗುತ್ತದೆ.

ಜಿಲ್ಲೆಗಳಲ್ಲಿ ತರಬೇತಿ:

(ಎ) ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಪರಿವೀಕ್ಷಣ ಪೊಲೀಸ್ ಉಪಾಧೀಕ್ಷಕರು 34 ವಾರಗಳ ಪ್ರಾಯೋಗಿಕ ತರಬೇತಿಯನ್ನು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ಮಹಾನಗರದಲ್ಲಿ ಪಡೆಯತಕ್ಕದ್ದು. ಆತನು ಪ್ರಾಯೋಗಿಕ ತರಬೇತಿಯಲ್ಲಿ ತೃಪ್ತಿಕರ ಪ್ರಗತಿ ಸಾಧಿಸಿಲ್ಲವೆಂದು ಮನವರಿಕೆಯಾದರೆ, ರಾಜ್ಯ ಸರಕಾರವು ಆತನ ಪ್ರಾಯೋಗಿಕ ತರಬೇತಿಯನ್ನು 34 ವಾರಗಳ ಅವಧಿಗೂ ಮೀರಿ ವಿಸ್ತರಿಸಬಹುದು.
(ಬಿ) ಪರಿವೀಕ್ಷಣಾ ಪೊಲೀಸ್ ಉಪಾಧೀಕ್ಷಕರು ತಾವು ಜಿಲ್ಲಾ ತರಬೇತಿಯ ಅವಧಿಯಲ್ಲಿ ಮಾಡಿದ ಕೆಲಸಗಳ ಸಾಪ್ತಾಹಿಕ ವರದಿಗಳ ವರದಿಯನ್ನು ಆ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಮೂಲಕ ವಲಯ ಪೊಲೀಸ್ ಮಹಾನಿರೀಕ್ಷಕನಿಗೆ ಸಲ್ಲಿಸಬೇಕು.
(ಸಿ) ಪರಿವೀಕ್ಷಣೆ ಮುಗಿದ ಪೊಲೀಸ್ ಉಪಾಧೀಕ್ಷಕರು ತರಬೇತಿ ಪಡೆಯುತ್ತಿರುವ ಜಿಲ್ಲೆಯ ಪೊಲೀಸ್ ನಿರೀಕ್ಷಕನು ತರಬೇತಿಯಲ್ಲಿ ಅವರ ಪ್ರಗತಿಯನ್ನು ವಿವರಿಸಿ ತನ್ನ ಷರಾದೊಂದಿಗೆ ತ್ರೈಮಾಸಿಕ ವರದಿಯನ್ನು ಪೊಲೀಸ್ ಮಹಾನಿದರ್ೇಶಕನಿಗೆ ಸಲ್ಲಿಸಬೇಕು. ಅವರ ತರಬೇತಿಯು ಮುಗಿದ ನಂತರ ಅಂತಿಮ ಮೌಲ್ಯಮಾಪನ ವರದಿಯನ್ನು ನಮೂನೆ 1ರಲ್ಲಿ ಸರಕಾರಕ್ಕೆ ಸಲ್ಲಿಸಬೇಕು.
(ಡಿ) ಜಿಲ್ಲೆಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಸಿ.ಐ.ಡಿ ಮತ್ತು ಇತರ ವಿಶೇಷ ಘಟಕಗಳಲ್ಲಿ 10 ವಾರಗಳ ತರಬೇತಿಯನ್ನು ಪಡೆಯುತ್ತಾರೆ.
(ಇ) ತರಬೇತಿಯ ಅವಧಿ ಮುಗಿದ ನಂತರ ಪೊಲೀಸ್ ಮಹಾನಿದರ್ೇಶಕನು ಅವರನ್ನು ಒಂದು ಪೊಲೀಸ್ ಉಪ ವಿಭಾಗದ ಪೊಲೀಸ್ ಅಧಿಕಾರಿಯಾಗಿ ನಿಯುಕ್ತಗೊಳಿಸುತ್ತಾರೆ.

ಸಹಾಯಕ ಸಮಾದೇಷ್ಠಕ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳ)

(ಎ)ಕರ್ನಾಟಕ ರಾಜ್ಯ ಮೀಸಲು ದಳದ ಪ್ರಧಾನ ಸುಬೇದಾರುಗಲ ಮತ್ತು ಸುಭೇದಾರುಗಳ ಶ್ರೇಣಿಯಿಂದ ಬಡ್ತಿ ಹೊರತುಪಡಿಸಿ ನೇಮಕ ಪಡೆದ ಸಹಾಯಕ ಸಮಾದೇಷ್ಠಕರು. ಎರಡುವರ್ಷಗಳ ಅವಧಿಗೆ ಪರಿವೀಕ್ಷಣೆಯಲ್ಲಿರುತ್ತಾರೆ. ಅವರು ತಮ್ಮ ಪ್ರಥಮ ವರ್ಷದ ಪರಿವೀಕ್ಷಣಾ ಅವಧಿಯಲ್ಲಿ ನೇರ ನೇಮಕಾತಿ ಹೊಂದಿದ ಪರಿವೀಕ್ಷಣಾ ಪೊಲೀಸ್ ಉಪಾಧೀಕ್ಷಕರಿಗೆ ನಿಗದಿ ಪಡಿಸಿ ತರಬೇತಿಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಪಡೆಯುತ್ತಾರೆ. ಮತ್ತು ತಮ್ಮ ದ್ವಿತೀಯ ವರ್ಷದ ಪರಿವೀಕ್ಷಣಾವಧಿಯಲ್ಲಿ ಅನುಸೂಚಿ (ತ)ರಲ್ಲಿ ವಿವರಿಸಿದ ಪ್ರಾಯೋಗಿಕ ತರಬೇತಿಯನ್ನು ಕರ್ನಾಟಕ ಮೀಸಲು ಪೊಲೀಸ್ ದಳದಲ್ಲಿ ಪಡೆಯುತ್ತಾರೆ. ಪರಿವೀಕ್ಷಣಾ ಸಹಾಯಕ ಸಮಾದೇಷ್ಠರು ಪ್ರಾಯೋಗಿಕ ತರಬೇತಿಯಲ್ಲಿ ತೃಪ್ತಿಕರವಾಗಿ ಸಾದಿಸದಿದ್ದರೆ ರಾಜ್ಯ ಸರ್ಕಾರವು ಆತನ ತರಬೇತಿಯ ಅವಧಿಯನ್ನು ವಿಸ್ತರಿಸಬಹುದು.
(ಬಿ) ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದಲ್ಲಿ ತಾವು ಪಡೆದ ತರಬೇತಿಯ ಸಾಪ್ತಾಹಿಕ ವರದಿಯನ್ನು ಪರಿವೀಕ್ಷಣಾ ಸಹಾಯಕ ಸಮಾದೇಷ್ಠಕರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ ಸಮಾದೇಷ್ಠಕರಿಗೆ ಸಲ್ಲಿಸಿರುವುದನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ ಹೆಚ್ಚುವರಿ ಮಹಾನಿದರ್ೇಶಕ/ ಪೊಲೀಸ್ ಮಹಾನಿದರ್ೇಶಕರಿಗೆ ಕಳುಹಿಸುತ್ತಾರೆ.
(ಸಿ) ಪೊಲೀಸ್ ಮಹಾನಿದರ್ೇಶಕರಿಗೆ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ ನಿದರ್ೇಶಕರು ಮತ್ತು ಕರ್ನಾಟಕ ಮೀಸಲು ಪೊಲೀಸ್ ದಳದ ಸಮಾದೇಷ್ಠಕರು ಸಲ್ಲಿಸಿದ ತ್ರೈಮಾಸಿಕ ವರದಿಯನ್ನು ತಮ್ಮ ಷರಾದೊಂದಿಗೆ ಸರಕಾರಕ್ಕೆ ಕಳುಹಿಸುತ್ತಾರೆ. ತರಬೇತಿಯು ಪೂರ್ಣಗೊಂಡ ನಂತರ ಅಂತಿಮ ಮೌಲ್ಯಮಾಪನವನ್ನು ನಮೂನೆ -1ರಲ್ಲಿ ಸರಕಾರಕ್ಕೆ ಕಳುಹಿಸಿಕೊಡತಕ್ಕದ್ದು.
(ಡಿ) ತರಬೇತಿ ಮುಗಿದ ನಂತರ ಪೊಲೀಸ್ ಮಹಾನಿದರ್ೇಶಕರು ಅವರನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ನಿಯೋಜಿಸುವರು.

ಪೊಲೀಸ್ ಉಪಾಧೀಕ್ಷಕರು-ನಿಸ್ತಂತು

1.ಪೊಲೀಸ್ ಉಪಾಧೀಕ್ಷಕರು (ನಿಸ್ತಂತು) ಹುದ್ದೆಗೆ ನೇರ ನೇಮಕಾತಿ ಹೊಂದಿದ್ದವರು ಕರ್ನಾಟಕ ಪೊಲೀಸ್ ಸೇವೆಗಳು ಲಿಪಿಕ ಸೇವೆಗಳು ಸಹಿತ (ನೇಮಕಾತಿ) ನಿಯಮ 1994ರ ಅನ್ವಯ ನಿಗದಿಪಡಿಸಿದ ಎರಡು ವರ್ಷಗಳ ಅವಧಿಯವರೆಗೆ ಪರಿವೀಕ್ಷಣೆಯಲ್ಲಿರುತ್ತಾರೆ.
2.ಕಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಗಳ-ನೇಮಕಾತಿ, ಪದೋನ್ನತಿ ವೇತನ, ಪರಿವೀಕ್ಷಣೆ ತರಬೇತಿ, ಪರೀಕ್ಷೆಗಳು, ಸ್ಥಳ ನಿಯುಕ್ತತೆ ಮತ್ತು ವರ್ಗಾವಣೆ

ನೇಮಕ ಪ್ರಮಾಣ ಪತ್ರ:

ಪೊಲೀಸ್ ನಿರೀಕ್ಷಕನ ಶ್ರೇಣಿಯ ಮತ್ತು ಕೆಳಗಿನ ಶ್ರೇಣಿಯ ಪ್ರತಿಯೊಬ್ಬ ಅಧಿಕಾರಿಯು ನೇಮಕಾತಿ ಹೊಂದಿದಾಗ, ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಅನುಸೂಚಿ 1ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಇಂದು ನೇಮಕಾತಿ ದೃಢೀಕರಣ ಪತ್ರ ಪಡೆಯತಕ್ಕದ್ದು.

ಸಾಮಾನ್ಯ ಷರತ್ತುಗಳು:

1.ಪೊಲೀಸ್ ಕೈಪಿಡಿಯು ಪ್ರಮುಖ ಸಂಹಿತೆಯಾಗಿದ್ದು ಅದರಲ್ಲಿ ಸರಕಾರವು ಮಾಡಿದ ನಿಯಮಗಳನ್ನು ಮತ್ತು ಪೊಲೀಸ್ ಮಹಾನಿದರ್ೇಶಕರು ಹಾಗೂ ಮಹಾನಿರೀಕ್ಷಕರು ಮಾಡಿದ ಆದೇಶಗಳನ್ನು ಅಲವಡಿಸಿಕೊಳ್ಳಲಾಗಿದೆ. ಆದರೆ ಕೆಳಗೆ ನಮೂದಿಸಿದವುಗಳು ಸಾಮಾನ್ಯ ಷರತ್ತುಗಳು:
2.ಪೊಲೀಸ್ ಸೇವೆಯ ನಿಯಂತ್ರಣ, ಸುವ್ಯವಸ್ಥೆ, ಘನತೆ ಮತ್ತು ಗೌರವಗಳನ್ನು ರೂಢಿಸಿಕೊಳ್ಳಲು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಕಾಲಾನುಕಾಲಕ್ಕೆ ಮಾಡಲಾಗುವ ಎಲ್ಲಾ ನಿಯಮಗಳನ್ನು ಮತ್ತು ಆದೇಶಗಳನ್ನು ಪ್ರಶ್ನಾತೀತವಾಗಿ ಅನುಸರಿಸತಕ್ಕದ್ದು.
3.ನಿರ್ದೇಶಿಸಿದ ಯಾವುದೇ ಸ್ಥಳದಲ್ಲಿ ಆತನು ಸೇವೆ ಸಲ್ಲಿಸತಕ್ಕದ್ದು ಮತ್ತು ವಾಸಮಾಡತಕ್ಕದ್ದು. ಆತನು ಕಾಲಾಕಾಲಕ್ಕೆ ಆದೇಶ ಮಾಡಿದಂತೆ ಯಾವಾಗಲೂ ಪೊಲೀಸ್ ಉಡುಪು ಮತ್ತು ವಿಶೇಷ ಸಂದರ್ಭದ ಉಡುಗೆ ತೊಡುಗೆಗಳನ್ನು ಧರಿಸತಕ್ಕದ್ದು ಮತ್ತು ಆತನು ನೋಡಲು ಯಾವಾಲೂ ಒಪ್ಪವಾಗಿ, ಸ್ವಚ್ಛವಾಗಿರತಕ್ಕದ್ದು.
4.ಆತನು ದೇಶದ ಎಲ್ಲ ಅಧಿಕಾರಿಗಳಿಗೆ ವಿಧೇಯನಾಗಿ, ಗೌರವ ಮತ್ತು ಮಾನ್ಯತೆಗಳನ್ನು ತೋರಿಸತಕ್ಕದ್ದು ಮತ್ತು ಎಲ್ಲ ಶ್ರೇಣಿಯ ಜನರೊಡನೆ ತಾಳ್ಮೆಯಿಂದ, ದಯೆಯಿಂದ, ಸೌಜನ್ಯದಿಂದ ವತರ್ಿಸತಕ್ಕದ್ದು. ಆತನು ತನ್ನ ವ್ಯಕ್ತಿಗತ ನಡತೆಯಲ್ಲಿ ಗೌರವಾನ್ವಿತ ಮತ್ತು ಶಾಂತಿಯುತ ಪಥದಲ್ಲಿರುವುದಲ್ಲದೆ, ಪಕ್ಷಾತೀತನಾಗಿರತಕ್ಕದ್ದು.
5.ಯಾವುದೇ ದರ್ಜೆಯ ಪೊಲೀಸ್ ಅಧಿಕಾರಿಯನ್ನು ಅನುಪಯುಕ್ತತೆ, ನಿರ್ಲಕ್ಷ, ಅಥವಾ ದುರ್ನಡತೆಗಾಗಿ ಸೇವೆಯಿಂದ ವಜಾಮಾಡಬಹುದು ಮತ್ತು ಆತನನ್ನು ಸಣ್ಣ ಅಪರಾಧಗಳಿಗಾಗಿ ಸಕ್ಷಮ ಪ್ರಾಧಿಕಾರದಿಂದ ನಿಗದಿಪಡಿಸಲಾದ ಪ್ರಕ್ರಿಯೆಯನ್ನು ಅನುಸರಿಸಿ ಅಮಾನತ್ತಿನಲ್ಲಿ ಇಡಬಹುದು ಅಥವಾ ಶಿಕ್ಷಗೆ ಒಳಪಡಿಸಬಹುದಾಗಿದೆ.
6.ಪೊಲೀಸ್ ಅಧಿಕಾರಿಗೆ ಸಾರ್ವಜನಿಕ ವೆಚ್ಚದಿಂದ ಕೊಡಲಾದ ಪ್ರತಿಯೊಂದು ಉಡುಗೆ ಅಥವಾ ತೊಡುಗೆ, ಹಾಗೂ ವಾಸಸ್ಥಳ ಇತ್ಯಾದಿಗಳನ್ನು ಸರ್ಕಾರವು ಇತರೆ ವಿಧವಾಗಿ ವಿನಾಯತಿ ಕೊಡದಿದ್ದರೆ, ಆತನು ಪೊಲೀಸ್ ದಳವನ್ನು ತ್ಯಜಿಸಿದ ಕೋಡಲೆ ವಾಪಸು ಕೊಡತಕ್ಕದ್ದು ಅಥವಾ ಬಿಟ್ಟುಕೊಡತಕ್ಕದ್ದು.

ಕರ್ನಾಟಕ ರಾಜ್ಯದ ಅಧೀನ ಪೊಲೀಸು ಸೇವೆಯಲ್ಲಿ ಈ ಮುಂದಿನ ದರ್ಜೆಗಳ ಅಧಿಕಾರಿಗಳಿರುತ್ತಾರೆ:

a.ಪೊಲೀಸ್ ಇನ್ಸ್ಪೆಕ್ಟರ್ (ಪೊಲೀಸ್ ವೃತ್ತನಿರೀಕ್ಷಕ)
b.ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪೊಲೀಸ್ ಉಪನಿರೀಕ್ಷಕ)
c.ಪೊಲೀಸ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಪೊಲೀಸ್ ಸಹಾಯಕ ಉಪನಿರೀಕ್ಷಕ)
d.ಹೆಡ್ ಕಾನ್ಸ್ಟೇಬಲ್ (ಮುಖ್ಯಪೇದೆ)
e.ಪೊಲೀಸ್ ಕಾನ್ಸ್ಟೇಬಲ್ (ಪೇದೆ)

ಕರ್ನಾಟಕ ರಾಜ್ಯ ಅಧೀನ ಪೊಲೀಸ್ ಸೇವೆಯ ವಿವಿದ ದರ್ಜೆಗಳ ನೇಮಕಾತಿಯನ್ನು ಮತ್ತು ಪದೋನ್ನತಿಯನ್ನು ಕರ್ನಾಟಕ ಪೊಲೀಸ್ ಸೇವೆ ಲಿಪಿಕ ಸೇವೆಗಳ ಸಹಿತ (ನೇಮಕಾತಿ ನಿಯಮ 1994ರ ಉಪಬಂಧಗಳನುಸಾರ ಮಾಡಲಾಗುತ್ತದೆ. ಪೊಲೀಸ್ ಪೇದೆ ದರ್ಜೆಗೆ ನೇರ ನೇಮಕಾತಿ ಮಾಡಲಾಗುತ್ತದೆ. ಇಲ್ಲಿ ಇನ್ನು ಮುಂದೆ ಹೇಳಿರುವ ದರ್ಜೆಗಳ ಹೊರತು ಉಳಿದ ಇತರ ದರ್ಜೆಗಳ ಖಾಲಿ ಸ್ಥಾನಗಳನ್ನು ನಿಯಮಗಳಲ್ಲಿ ನಿದರ್ಿಷ್ಟಪಡಿಸಿದ ಷರತ್ತುಗಳಿಗೆ ಅನುಸಾರವಾಗಿ ಮುಂಬಡ್ತಿಯ ಮೂಲಕ ತುಂಬಲಾಗುತ್ತದೆ.

ಈ ಮುಂದಿನ ವರ್ಗಗಳ ಹುದ್ದೆಗಳಿಗೆ ನೇಮಕಾತಿ ವಿಧಾನ ಹೀಗೆದೆ:-

(1)ಪೊಲೀಸ್ ಉಪನಿರೀಕ್ಷಕ
(ಪೊಲೀಸ್ ಸಬ್ಇನ್ಸ್ಪೆಕ್ಟರ್)
(ಸಿವಿಲ್ ಮತ್ತು ಸಶಸ್ತ್ರ)
ಎ. ಶೇಕಡಾ ಅರವತ್ತರಷ್ಟು ನೇರ ನೇಮಕಾತಿ ಮೂಲಕ
ಬಿ. ಶೇಕಡಾ 30 ರಷ್ಟು ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್:
ಹೆಡ್ ಕಾನ್ಸ್ಟೇಬಲ್ಗಳ ಕೇಡರ್ಗಳಿಂದ ಸೇವಾ
ಹಿರಿತನ ಮತ್ತು ಅರ್ಹತೆಯ ಆಧಾರದ ಮೇಲೆ ಮುಂಬಡ್ತಿಯ ಮೂಲಕ.
ಸಿ. ಶೇಕಡಾ 10ರಷ್ಟು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್:
ಹೆಡ್ ಕಾನ್ಸ್ಟೇಬಲ್: ಪೊಲೀಸ್ ಕಾನ್ಸ್ಟೇಬಲ್ ಕೇಡರ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ:

(2)ಪೊಲೀಸ್ ಪೇದೆ(ಕಾನ್ಸ್ಟೇಬಲ್)
ಎ. ಶೇಕಡಾ 85ರಷ್ಟು ನೇರ ನೇಮಕಾತಿಯ ಮೂಲಕ
ಬಿ. ಶೇಕಡಾ 15ರಷ್ಟು ಸಿಎಆರ್:ಡಿಎಆರ್ನಲ್ಲಿ ಹತ್ತು ವರ್ಷಗಳ ಕ್ರಮಬದ್ಧ ಸೇವೆಯನ್ನು ಪೂರ್ಣಗೊಳಿಸಿದ ರ್ಹ ಪೊಲೀಸ್ ಕಾನ್ಸ್ಟೇಬಲ್ಗಳನ್ನು ನಿಯುಕ್ತಿ ಮಾಡುವ ಮೂಲಕ.

(3)ಮಹಿಳಾ ಪೊಲೀಸ್ ನಿರೀಕ್ಷಕರು(ಇನ್ಸ್ಪೆಕ್ಟರ್)
ಎ. ಶೇಕಡಾ ಅರವತ್ತೆಷ್ಟು ನೇರ ನೇಮಕಾತಿಯ ಮೂಲಕ ಮತ್ತು
ಬಿ. ಶೇಕಡಾ ನಲವತ್ತರಷ್ಟು ಸೇವಾ ಹಿರಿತನ ಮತ್ತು ಅರ್ಹತೆಯ ಆಧಾರದ ಮೇಲೆ ಪೊಲೀಸ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ಗಳಿಗೆ ಹೆಡ್ ಕಾನ್ಸ್ಟೇಬಲ್ಗಳಿಗೆ ಮುಂಬಡ್ತಿ ನೀಡುವ ಮೂಲಕ. ನೇರ ನೇಮಕಾತಿ ಮೂಲಕ.

(4)ಮಹಿಳಾ ಪೊಲೀಸ್ ಪೇದೆ(ಕಾನ್ಸ್ಟೇಬಲ್)

(5)ಸಶಸ್ತ್ರ ಮೀಸಲು ಪೊಲೀಸ್ ಉಪನಿರೀಕ್ಷಕ ಎ. ಶೇಕಡಾ ಅರವತ್ತರಷ್ಟು ನೇರ ನೇಮಕಾತಿ ಮೂಲಕ.(ಸಬ್ ಇನ್ಸ್ಪೆಕ್ಟರ್) ಬಿ. ಶೇಕಡಾ 30ರಷ್ಟು ಪೊಲೀಸ್ ಎ.ಎಸ್.ಐ.: ಹೆಚ್.ಸಿ.ಕೇಡರ್ಗಳಿಂದ ಸೇವಾ ಹಿರಿತನ ಮತ್ತು ಅರ್ಹತೆಯ ಆಧಾರದ ಮೇಲೆ ಮುಂಬಡ್ತಿಯ ಮೂಲಕ. ಸಿ. ಶೇಕಡಾ 10ರಷ್ಟು ಎ.ಆರ್.ಎಸ್.ಐ.ಗಳು: ಸಶಸ್ತ್ರ ಪೊಲೀಸ್ ಪೇದೆ (ಕಾನ್ಸ್ಟೇಬಲ್):ಎ.ಹೆಚ್ಸಿಗಳು ಎಪಿಗಳ ಕೇಡರ್ನಿಂದ ಸೇವೆಯಲ್ಲಿರುವ ಅಭ್ಯರ್ಥಿಗಳ ಆಯ್ಕೆ ಮೂಲಕ. ನೇರ ನೇಮಕಾತಿಯ ಮೂಲಕ ಅಥವಾ ಕೆ.ಎಸ್.ಆರ್.ಪಿಯಲ್ಲಿ ಐದು ವರ್ಷಗಳ ಕ್ರಮಬದ್ಧ ಸೇವೆಯನ್ನು ಪೂರ್ಣಗೊಳಿಸುವ ಅರ್ಹ ಪೊಲೀಸ್ ಪೇದೆಗಳು ಸ್ಥಳ ನಿಯುಕ್ತಿ ಮಾಡುವ ಮೂಲಕ ಸ್ಥಳ ನಿಯುಕ್ತಿಯನ್ನ್ತು ಡಿ.ಜಿ. ಮತ್ತು ಐ.ಜಿ.ಪಿ ಅವರು ಮಾಡತಕ್ಕದ್ದು. ಅಂಥ ಪೊಲೀಸ್ ಪೇದೆಗಳು ಸೇವೆಗೆ ಸೇರಿದ ದಿನಾಂಕದಿಂದ ಮುಂಬಡ್ತಿಯ ಉದ್ದೇಶಕ್ಕಾಗಿ ಅವರ ಸೇವೆಯನ್ನು ಪರಿಗಣಿಸಿ ಅವರ ಸೇವಾ ಹಿರಿತನವನ್ನು ಪೊಲೀಸ್ ಸಶಸ್ತ್ರ ಪೇದೆಗಳ ಕೇಡರ್ನಲ್ಲಿ ಮುಂಬಡ್ತಿ ಮೂಲಕ ಅಥವಾ ತತ್ಸಮಾನ ಕೇಡರ್ ನಲ್ಲಿ ಉಳಿಸಿಕೊಂಡು ಬರತಕ್ಕದ್ದು.

ಬ್ಯಾಂಡ್ ಮಾಸ್ಟರ್ (ಇಂಗ್ಲೀಷ್) :ಅಸಿಸ್ಟಂಟ್ ಬ್ಯಾಂಡ್ ಮಾಸ್ಟರ್ ಕೇಡರ್ ನಿಂದ ಮುಂಬಡ್ತಿ ಮೂಲಕ ಅಥವಾ ತತ್ಸಮಾನನ ಕೇಡರ್ ನಿಂದ ಪ್ರತಿನಿಯೋಜನೆ ಮೂಲಕ ಅಥವಾ ಕರಾರಿನ ಆಧಾರದ ಮೇಲೆ. ಬ್ಯಾಂಡ್ ಮಾಸ್ಟರ್ (ಕರ್ನಾಟಕ ಬ್ಯಾಂಡ್) ಅಸಿಸ್ಟಂಟ್ ಬ್ಯಾಂಡ್ ಮಾಸ್ಟರ್ ಕೇಡರ್ನಿಂದ ಮುಂಬಡ್ತಿ ಮೂಲಕ ಅಥವಾ ಪ್ರತಿನಿಯೋಜನೆ ಆಧಾರದ ಮೂಲಕ ಅಥವಾ ಕರಾರಿನ ಆಧಾರದ ಮೂಲಕ.

ಮ್ಯುಜಿಷಿಯನ್ : ನೇರ ನೇಮಕಾತಿ ಮೂಲಕ
ಮೀಸಲು ಪೊಲೀಸ್ ಪೇದೆ (ಕಾನ್ಸಟೇಬಲ್) : ನೇರ ನೇಮಕಾತಿ ಮೂಲಕ
ಪೊಲೀಸ್ ಉಪನಿರೀಕ್ಷಕ (ಸಬ್ ಇನ್ಸ್ಪೆಕ್ಟರ್) : ನೇರ ನೇಮಕಾತಿ ಮೂಲಕ ಫಿಂಗರ್ ಪ್ರಿಂಟ್ ಬ್ಯೂರೋ
ಪೊಲೀಸ್ ಉಪನಿರೀಕ್ಷಕ ಸಬ್ ಇನ್ಸ್ಪೆಕ್ಟರ್ ನಿಸ್ತಂತು (ವೈರ್ಲೆಸ್) : ಶೇಕಡ 50 ರಷ್ಟು ನೇರ ನೇಮಕಾತಿ ಮೂಲಕ ಮತ್ತು
ಶೇಕಡಾ 50 ರಷ್ಟು ಸೀನಿಯರ್ ರೇಡಿಯೋ ಮೆಕ್ಯಾನಿಕ್ ಅಸಿಸ್ಟಂಟ್ ಸಬ್ ಇನ್ಸೆಪೆಕ್ಟರ್ (ವೈರ್ಲೆಸ್) ಮತ್ತು ಎ.ಎಸ್.ಐ
ರೇಡಿಯೋ ಮೆಕ್ಯಾನಿಕ್ ಕೇಡರ್ನಿಂದ ಮುಂಬಡ್ತಿ ಮೂಲಕ.
ಪೊಲೀಸ್ ಪೇದೆ (ವೈರ್ಲೆಸ್): ನೇರ ನೇಮಕಾತಿ ಮೂಲಕ

ನೇಮಕಾತಿ

1.ಆಯ್ಕೆ ಸಮಿತಿಯು ಸಬ್ ಇನ್ಸ್ಪೆಕ್ಟರ್ನ್ನು ಆಯ್ಕೆ ಮಾಡುತ್ತದೆ. ಸಮಿತಿಗೆ ಸರಕಾರವು ನಾಮ ನಿದರ್ೇಶನ ಮಾಡಿದ ಪೊಲೀಸ್ ಅಡಿಷನಲ್ ಡೈರಕ್ಟರ್ ಜನರಲ್ ಇನ್ಸ್ಪೆಕ್ಟರ್ (ಆಡಳಿತ) ಪೊಲೀಸ್ ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್, ಸರಕಾರವು ನಾಮ ನಿದರ್ೇಶನ ಮಾಡಿದ ಒಬ್ಬ ಮನಶಾಸ್ತ್ರಜ್ಞರು, ಸಮಾಜ ಕಲ್ಯಾಣ ಇಲಾಖೆಯ ನಿದರ್ೇಶಕರ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿ ಈ ಎಲ್ಲರೂ ಆಯ್ಕೆ ಸಮಿತಿಯ ಸದಸ್ಯರುಗಳಾಗಿರುತ್ತಾರೆ. ಪೊಲೀಸ್ ಇನ್ಸ್ಪೆಕ್ಟರ್ ಜನರಲ್ರವರು (ಕೇಂದ್ರ ಕಛೇರಿ) ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಯಗಿರುತ್ತಾರೆ.
2.ಪೊಲೀಸ್ ಪೇದೆಗಳ ಆಯ್ಕೆಯನ್ನು, ಆಯ್ಕೆ ಸಮಿತಿಯು ಮಾಡುತ್ತದೆ. ಆ ಸಮಿತಿಯಲ್ಲಿ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪೊಲೀಸ್ ಕಮೀಷನರೇಟಿನ ಕೇಂದ್ರ ಕಛೇರಿಯ ಪೊಲೀಸ್ ಡೆಪ್ಯೂಟಿ ಕಮೀಷನರ್/ ಎಸ್.ಪಿ ರೈಲ್ವೆ / ಇವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತಾರೆ. ಡಿಜಿ ಮತ್ತು ಐಜಿಪಿ ಯವರಿಂದ ನಾಮನಿರ್ದೇಶಿತರಾದ ಜಿಲ್ಲೆಯ ಡಿಸಿಪಿ/ಅಡಿಷನಲ್ ಎಸ್.ಪಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಪೊಲೀಸ್ ಡೆಪ್ಯೂಟಿ ಕಮೀಷನರ್/ಅಡಿಷನಲ್ ಎಸ್.ಪಿ /ಡಿ.ಎಸ್.ಪಿ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಾರೆ. ಕಮೀಷನರ್ ಕಛೇರಿಯ/ಜಿಲ್ಲಾಪೊಲೀಸ್ ಕಛೇರಿಯ ಎಒ/ಎಎಒ/ ಇಒರವರು ಆಯ್ಕೆ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪೇದೆಗಳನ್ನು ಕೆ.ಎಸ್.ಆರ್.ಪಿ ಬೆಟ್ಯಾಲಿಯನ್ ಕಮಾಂಡೆಂಟರು ಆಯ್ಕೆ ಮಾಡುತ್ತಾರೆ.
3.ಹುದ್ದೆಗಳ ಖಾಯಂ ಅಥವಾ ಧೀರ್ಘಾವಧಿ ಸ್ಥಾನಗಳನ್ನು ನೇರ ನೇಮಕಾತಿ ಮೂಲಕ ಅಥವಾ 1994ರ ಲಿಪಿಕ ಸೇವಾ ನಿಯಮಗಳೂ ಸೇರಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಸೇವಾ ನಿಯಮಗಳ ಪ್ರಕಾರ ನೇರ ನೇಮಕಾತಿಯ ಮೂಲಕ ಬತರ್ಿ ಮಾಡಬೇಕೆ ಅಥವಾ ಮುಂಬಡ್ತಿಯ ಮೂಲಕ ಬತರ್ಿ ಮಾಡಬೇಕೆ ಎಂಬುದನ್ನು ಘಟಕಾಧಿಕಾರಿಗಳು ಮೊದಲು ನಿರ್ಧರಿಸಬೇಕು. ಆ ತರುವಾಯ ನೇರ ನೇಮಕಾತಿಯ ಮೂಲಕ ಬತರ್ಿ ಮಾಡಬೇಕಾದ ಖಾಲಿ ಸ್ಥಾನಗಳನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳು, ಹಿಂದುಳಿದ ವರ್ಗಗಳು, ಸಾಮಾನ್ಯ ಅರ್ಹತೆ ಮುಂತಾದವುಗಳಿಗೆ ನಿಗದಿ ಮಾಡಿರುವ ರೋಸ್ಟರ್ ಪದ್ದತಿಯನ್ನು ಅನುಸರಿಸಬೇಕೆಂದು ನಿರ್ದಿಷ್ಟ ಪಡಿಸಿರುವ ನಿಯಮಗಳಿಗೆ ಅನುಸಾರವಾಗಿ (ಪರಿಶಿಷ್ಠ- ಗಿ) ಮತ್ತೆ ವರ್ಗೀಕರಣ ಮಾಡಬೇಕು.
4.ಈ ಮೇಲೆ ತಿಳಿಸಿದ ಆದೇಶದಲ್ಲಿ ಹೇಳಿರುವ ರೀತಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ವಗರ್ಿಕರಿಸಿದ ತರುವಾಯ, ಅವುಗಳು ಈ ಮುಂದೆ ನಮೂದಿಸಿದ ವಿನಾಯತಿಯ ಪ್ರವರ್ಗಗಳಿಗೆ ಸೇರಿದ್ದ ಹೊರತು, ಪೊಲೀಸ್ ಕಮೀಷನರ್ / ಪೊಲೀಸ್ ಸೂಪರಿಂಟೆಂಡೆಂಟರು, ಖಾಲಿ ಸ್ಥಾನಗಳನ್ನು ಪತ್ರದ ಮೂಲಕ ಅಧಿಕಾರ ವ್ಯಾಪ್ತಿಯ ಉದ್ಯೋಗ ವಿನಿಮಯ ಕೇಂದ್ರಕ್ಕೆ ತಿಳಿಸತಕ್ಕದ್ದು. ಕರ್ನಾಟಕ ರಾಜ್ಯ ಉದ್ಯೋಗ ವಿನಿಮಯ ಕೇಂದ್ರ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) 1958ರ ಅಧಿನಿಯಮದಲ್ಲಿ ಮತ್ತು 1960ರ ನಿಯಮಗಳಲ್ಲಿ ಖಾಲಿ ಇರುವ ಸ್ಧಾನಗಳನ್ನು ತಿಳಿಸುವುದಕ್ಕೆ ಮತ್ತು ಸಂಬಂಧಪಟ್ಟ ಇತರ ವಿಷಯಗಳ ಬಗ್ಗೆ ಅನುಸರಿಸಬೇಕಾಗಿರುವ ವಿಧಾನವನ್ನು ನಿರೂಪಿಸಲಾಗಿದೆ. ನಿರ್ದಿಷ್ಟಪಡಿಸಿದ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಪ್ರಯೋಜಿಸಲು ತನಗೆ ಸಾಧ್ಯವಾಗದೆಂದು ಉದ್ಯೋಗ ವಿನಿಮಯ ಅಧಿಕಾರಿಯು ಪ್ರಮಾಣಿಕರಿಸಿದ ಹೊರತು, ಪೊಲೀಸ್ ಸೂಪರಿಂಟೆಂಡೆಂಟರು ಮುಕ್ತ ಮಾರುಕಟ್ಟೆಯಿಂದ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುವಂತಿಲ್ಲ.
5.ಈ ಕೆಳಗೆ ಕಾಣಿಸಿದ ತೆರವಾದ ಸ್ಥಾನಗಳನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ತಿಳಿಸುವ ಆವಶ್ಯಕತೆಯಿಲ್ಲ.

ಒಟ್ಟಾರೆ ಒಂದು ತಿಂಗಳ ಅವಧಿ ಮೀರದಿರುವ ತೆರವಾಗಿರುವ ಸ್ಧಾನಗಳು:

ಮುಂಬಡ್ತಿ ಮೂಲಕ ಅಥವಾ ಅದೇ ಇಲಾಖೆಯ ಯಾವುದೇ ಶಾಖೆಯ ಹೆಚ್ಚುವರಿ ಸಿಬ್ಬಂದಿಯನ್ನು ವಿಲೀನಗೊಳಿಸುವ ಮೂಲಕ ಅಥವಾ ಯಾವುದೇ ಸ್ವತಂತ್ರ ನಿಯೋಗದವರು ಅಂದರೆ ಲೋಕಸೇವಾ ಆಯೋಗದಂಥವರು ನಡೆಸುವ ಯಾವುದೇ ಪರೀಕ್ಷೆಯ ಅಥವಾ ಶಿಫಾರಸ್ಸಿನ ಮೇಲೆ ಭರ್ತಿಮಾಡಲು ಉದ್ದೇಶಿಸಲಾದ ಸ್ಥಾನಗಳು.
ಶಾರೀರಿಕ ಮತ್ತು ವಿದ್ಯಾರ್ಹತೆಗಳಿಂದ ವಿನಾಯತಿ ಅವಶ್ಯವಿದ್ದರೆ, ನಮೂನೆ 2ರಲ್ಲಿ ಒಂದು ಪರಿದಿಯನ್ನು ಅಧಿಕಾರವುಳ್ಳ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
ಸರಕಾರಿ ಸೇವೆಯಿಂದ ಅಥವಾ ಸಾರ್ವಜನಿಕ ಉದ್ಯಮದ ಸೇವೆಯಿಂದ ಅಥವಾ ಸರಕಾರವು ಪ್ರಾಯೋಜಿಸಿದ ನಿಗಮದ ಸೇವೆಯಿಂದ ವಜಾ ಆದ ವ್ಯಕ್ತಿಯು, ಪೊಲೀಸ್ ಇಲಾಖೆಯಲ್ಲಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ

ಪೊಲೀಸ್ ಇಲಾಖೆಯ ಸ್ಥಾನಗಳಿಗೆ ನೇಮಕಗೊಳ್ಳಲು ಅಭ್ಯರ್ಥಿಗಳ ನಡತೆ ಮತ್ತು ಪೂರ್ವೋತ್ತರಗಳನ್ನು ಪರೀಕ್ಷಿಸುವುದು:

ಪೊಲೀಸ್ ಇಲಾಖೆಯ ಯಾವುದೇ ಸ್ಥಾನಕ್ಕೆ ಅಥವಾ ಸೇವೆಗೆ ನೇಮಕಾತಿ ಮಾಡುವ ಪ್ರಾಧಿಕಾರವು, ಆ ನೌಕರನು ಉತ್ತಮ ನಡೆವಳಿಕೆಯುಳ್ಳವನು, ಮತ್ತು ಎಲ್ಲಾ ವಿಧದಲ್ಲೂ ಅಂತಹ ಸ್ಥಾನ ಅಥವಾ ಸೇವೆಗೆ ಅರ್ಹನೆಂದು ಪರಿಗಣಿಸದ ವಿನ: ಆ ವ್ಯಕ್ತಿಯನ್ನು ಆ ಸ್ಥಾನ ಅಥವಾ ಸೇವೆಗೆ ನೇಮಿಸತಕ್ಕದ್ದಲ್ಲ. .
ಸರಕಾರದವರು ಅನುಬಂಧ ತ ಸರಕಾರಿ ಸೇವೆಯಲ್ಲಿ ಅನೇಕ ಸ್ಥಾನಗಳಿಗೆ ನೇಮಿಸಲಾಗುವ ನೌಕರರ ನಡತೆ ಮತ್ತು ಪೂರ್ವತ್ತರಗಳನ್ನು ಪರೀಕ್ಷಿಸಲು ಸೂಚನೆಗಳನ್ನಿತ್ತಿರುತ್ತಾರೆ. ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ ನಿಗದಿಪಡಿಸಿದ ಸವಿವರ ಕ್ರಮವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಸರಕಾರದವರು ತಮ್ಮ ಅರ್ಜಿಗಳ ಜೊತೆಗೆ ಸಲ್ಲಿಸದಿದ್ದ ಪ್ರಕರಣಗಳಲ್ಲಿ ಅವುಗಳನ್ನು ತರಿಸಿಕೊಳ್ಳಲು ಮತ್ತು ಅವರ ಪೂರ್ವತ್ತರ ಮತ್ತು ನಡೆತೆಯನ್ನು ನೇಮಕಾತಿಗಿಂತ ಮುಂಚೆ ಪರೀಕ್ಷಿಸಲು ವ್ಯವಸ್ಥೆ ಮಾಡತಕ್ಕದ್ದು.

ವೈದ್ಯಕೀಯ ಪರೀಕ್ಷೆ:

ಹೊಸದಾಗಿ ಸೇರುವ ನೌಕರರನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ವೈದ್ಯಾಧಿಕಾರಿ ಅಥವಾ ಜಿಲ್ಲಾ ವೈದ್ಯಾಧಿಕಾರಿ ಇರದಿದ್ದರೆ ಸಹಾಯಕ ವೈದ್ಯಾಧಿಕಾರಿಗೆ, ನೌಕರಿ ಸೇರುವ ದಾಖಲೆ ಪುಸ್ತಕದ ಸಂಖ್ಯೆ (ನಮೂನೆ 3ರ) ಜೊತೆಗೆ ಕಳುಹಿಸತಕ್ಕದ್ದು.

ಸೇವೆಯಲ್ಲಿರುವ ಅಭ್ಯರ್ಥಿಗಳಗಳನ್ನು ನೇಮಕಾತಿ ಮಾಡುವ ವಿಧಾನ:

ಸೇವೆಯಲ್ಲಿರುವ ಅಭ್ಯರ್ಥಿಗಳ ಆಯ್ಕೆಯನ್ನು ನೇರ ನೇಮಕಾತಿಗಾಗಿ ರಚಿಸಿದ ಸಮಿತಿಯು ಮಾಡುತ್ತದೆ ಮತ್ತು ಆಯ್ಕೆ ವಿಧಾನವು 1994ರ ಲಿಪಿಕ ಸೇವೆಗಳ ನೇಮಕಾತಿ ನಿಯಮಗಳೂ ಸೇರಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಸೇವಾನಿಯಮಗಳಲ್ಲಿ ನೇರ ನೇಮಕಾತಿಗೆ ಅನ್ವಯಿಸುವಂಥ ವಿಧಾನಗಳಂತೆಯಿಸು ಕೆಲವು ವ್ಯತ್ಯಾಸಗಳೊಡನೆ ಇರತಕ್ಕದ್ದು.

ಇತರೆ ಅರ್ಜಿಗಳಿಗೆ ಬಡ್ತಿ:

ಸರಕಾರಿ ಆದೇಶ ಸಂಖ್ಯೆ ಡಿ.ಪಿ.ಎ.ಆರ್. 22 ಎಸ್.ಬಿ.ಸಿ. 79 ದಿನಾಂಕ 30-08-1979ರಲ್ಲಿ ಮುಂಬಡ್ತಿ ಹುದ್ದೆಗಳ ಪೈಕಿ ಕೆಲವೊಂದು ನಿದರ್ಿಷ್ಟ ಪಡಿಸಿದ ಪ್ರವರ್ಗಗಳಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಳಿಗಾಗಿ ಮೀಸಲಾತಿ ಆದೇಶವನ್ನು ಸರಕಾರವು ಹೊರಡಿಸಿದೆ. ಆ ಸೌಲಭ್ಯವನ್ನು ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 21 ಎಸ್.ಬಿ.ಸಿ 97 ಬೆಂಗಳೂರು, ದಿನಾಂಕ 27-10-1997 (ಅನುಬಂಧ 9)ರಲ್ಲಿ ಹೇಳಿರುವ ಕಾರಣಗಳಿಗಾಗಿ 1997ರ ತರುವಾಯವೂ ಮುಂದುವರಿಸಲಾಗಿದೆ. ಅಂಥ ಖಾಲಿಸ್ಥಾನಗಳನ್ನು ಅನ್ವಯವಾಗುವ ನಿಗದಿತ ರೋಷ್ಟರ್ಗೆ ಅನುಸಾರವಾಗಿ ವಗರ್ಿಕರಿಸಬೇಕು. ಆ ತರುವಾಯ ಮುಖ್ಯ ಪೇದೆಗಳು ಸಹಾಯಕ ಉಪನಿರೀಕ್ಷಕರ ಮತ್ತು ಪೊಲೀಸ್ ಉಪನಿರೀಕ್ಷಕರ ದರ್ಜೆಗಳಿಗೆ ಮುಂಬಡ್ತಿಯನ್ನು 1994 ಕರ್ನಾಟಕ ರಾಜ್ಯ ಪೊಲೀಸ್ ಸೇವಾ (ನೇಮಕಾತಿ) ನಿಯಮಗಳಿಗೆ ಅನುಸಾರವಾಗಿ ಪೊಲೀಸ್ ಅಧೀಕ್ಷಕರು ನೀಡತಕ್ಕದ್ದು ಪೊಲೀಸ್ ನಿರೀಕ್ಷಕರ ಶ್ರೇಣಿಗೆ ಮುಂಬಡ್ತಿಯನ್ನು ಈ ಮೇಲೆ ಹೇಳಿದ ನಿಯಮಗಳಲ್ಲಿ ನಿಗದಿ ಪಡಿಸಿದ ಷರತ್ತುಗಳಿಗೆ ಅನುಸಾರವಾಗಿ ಪೊಲೀಸ್ ಮಹಾನಿರ್ದೇಶಕರು ಅದರಂತಯೆ ನೀಡತಕ್ಕದ್ದು.

ತರಬೇತಿ:

1.ಹೊಸದಾಗಿ ನೇಮಕವಾದ ಮತ್ತು ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ತರಬೇತಿಯನ್ನು ಈ ಕೆಳಕಂಡಂತೆ ಕೊಡಲಾಗುತ್ತದೆ. .
2.ಪೊಲೀಸ್ ಉಪನಿರೀಕ್ಷಕರು ನೇಮಕಾತಿ ಹೊಂದಿದ ಕೂಡಲೇ ಒಂದು ವರ್ಷದವರೆಗೆ ತರಬೇತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ಪಡೆಯುತ್ತಾರೆ. .
3.ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ಗಳು ನೇಮಕಾತಿ ಹೊಂದಿದ ಕೂಡಲೇ ಮೂಲ ತರಬೇತಿಯನ್ನು ಚನ್ನಪಟ್ಟಣ ಮತ್ತು ಇತರೆ ಸ್ಥಳಗಳಲ್ಲಿರುವ ಪೊಲೀಸ್ ತರಬೇತಿ ಶಾಲೆಗಳಲ್ಲಿ ಪಡೆಯುತ್ತಾರೆ. .
4.ನಗರ ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ನೇಮಕವಾದ ಮೀಸಲು ಪೊಲೀಸ್ ಪೇದೆಗಳು ತರಬೇತಿಯನ್ನು ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಪಡೆಯುತ್ತಾರೆ. .
5.ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ದಳದ ಪೊಲೀಸರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಾರೆ. .
6.ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಡೆಸುತ್ತಿರುವ ವಿಶೇಷ ತರಬೇತಿ ಕೇಂದ್ರಗಳಲ್ಲಿ ಮತ್ತು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಆಕಾಡೆಮಿಯಲ್ಲಿ ರಾಜ್ಯ ಸರ್ಕಾರ ಅಥವಾ ಡೈರಕ್ಟರ್ ಜನರಲ್ ಆಫ್ ಪೊಲೀಸ್ ಅವರು ಕಾಲಕಾಲಕ್ಕೆ ಹೊರಡಿಸುವ ಆದೇಶದಂತೆ (ಅನುಬಂಧ-ಥ) ವಿವಿಧ ಶ್ರೇಣಿಯ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಪುನಶ್ಛೇತನ ಅಥವಾ ವಿಶೇಷ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತದೆ.

ಕನ್ನಡ ಪರೀಕ್ಷೆ:

1.ಪೊಲೀಸ್ ಪೇದೆಗಿಂತ ಹಿರಿಯ ಅಧೀನ ಪೊಲೀಸ್ ಅಧಿಕಾರಿಗಳು ಕೆಳಗೆ ನಮೂದಿಸಿದವರನ್ನು ಹೊರತು ಪಡಿಸಿ, ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1994 (ಸೇವೆ ಮತ್ತು ಕನ್ನಡ ಭಾಷೆ ಪರೀಕ್ಷೆ) ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾತಕ್ಕದ್ದು. .
2.ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಯಾಗಲೀ ಅಥವಾ ಅದಕ್ಕೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಾಸಮಾಡಿ ಉತ್ತೀರ್ಣನಾಗಿದ್ದರೆ ಅಥವಾ ಅಂತಹ ಇತರೆ ಯಾವುದೇ ಪರೀಕ್ಷೆಗಳಲ್ಲಿ ಕನ್ನಡವನ್ನು ಒಂದು ಮುಖ್ಯ ಭಾಷೆ ಅಥವಾ ದ್ವಿತೀಯ ಭಾಷೆ ಅಥವಾ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಉತ್ತೀರ್ಣರಾಗಿದ್ದರೆ ಅಥವಾ ಡಿಪ್ಲೊಮಾ ಸರ್ಟಫಿಕೇಟ್ ಕೋರ್ಸ್ ಕನ್ನಡದಲ್ಲಿ (ವಿಶ್ವವಿದ್ಯಾನಿಯದವರು ನಡೆಸುವ) ಉತ್ತೀರ್ಣರಾಗಿದ್ದರೆ ಅಥವಾ ಕ.ಸಾ.ಪ.ನವರು ನಡೆಸುವ ಕಾವ್ಯ/ ಜಾಣ/ ರತ್ನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದರೆ. .
3.ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ನಡೆಸುವ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನಗಳಿಸಿದ್ದರೆ ಅಥವಾ ಅನುಸೂಚಿ 111ರಲ್ಲಿ ಕಾಣಿಸಿದ ಕನ್ನಡ ಭಾಷೆಯ ಪರೀಕ್ಷೆಗೆ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿದ್ದರೆ. .
4.ನೌಕರಿಗೆ ಸೇರಿದ ದಿನಾಂಕದಿಂದ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕ ಅವಧಿಯು ಎರಡು ವರ್ಷಗಳಿರತಕ್ಕದು, ಕಾಲಾನುಕಾಲಕ್ಕೆ ಸಾಮಾನ್ಯ ಅಥವಾ ವಿಶೇಷ ಆದೇಶದ ಮೇರೆಗೆ ಅಂಥ ನಿಗದಿಪಡಿಸಿದ ಸಮಯವನ್ನು ತಾನು ನಿರ್ಣಯಿಸುವಂತಹ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು. .
5.ನಿಗದಿತ ಅವಧಿಯನ್ನು ವಿಸ್ತರಿಸಿದರೂ ಸಹಿತ, ಸೇವೆಯಲ್ಲಿ ಇರುವ ನೌಕರನು, ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣನಾಗದಿದ್ದರೆ, ಆತನಿಗೆ ವಿನಾಯತಿ ದೊರೆಯದಿದ್ದರೆ, ಕನ್ನಡ ಪರೀಕ್ಷಯಲ್ಲಿ ಉತ್ತೀರ್ಣನಾಗುವವರೆಗೆ ಆತನು ವೇತನ ಏರಿಕೆ (ಇನ್ ಕ್ರಿಮೆಂಟ್ ಪಡೆಯು ಅರ್ಹನಲ್ಲ). .
6.ಸೇವೆಗೆ ನೇರವಾಗಿ ಭರ್ತಿಯಾದ ಒಬ್ಬ ಸದಸ್ಯನು ಪರಿವೀಕ್ಷಣೆಯ ಅಥವಾ ವಿಸ್ತರಿಸಲಾದ ಪರಿವೀಕ್ಷಣೆಯ ಅವಧಿಯಲ್ಲಿ ಸಂದರ್ಭಾನುಸಾರ, ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ, ಆತನು ಪರಿವೀಕ್ಷಣೆಯ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದನೆಂದು ಭಾವಿಸತಕ್ಕದ್ದಲ್ಲ ಮತ್ತು ಆತನು ನೌಕರಿಯನ್ನು ಖಾಯಂಗೊಳಿಸಲು ಅಥವಾ ವೇತನದ ಹೆಚ್ಚಳ ಪಡೆಯುಲು ಹಕ್ಕುದಾರನಾಗಿರತಕ್ಕದ್ದಲ. ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಅಧಿಕಾರಿ ಆಥವಾ ಉತ್ತೀರ್ಣನಾಗಲು ವಿನಾಯತಿ ಪಡೆದ ಅಧಿಕಾರಿಯು, ತಾನು ಉತ್ತೀರ್ಣನಾದ ಸಮಯದಿಂದ ಆಥವಾ ವಿನಾಯತಿ ಪಡೆದ ದಿನದಿಂದ, ಹೆಚ್ಚುವರಿ ವೇತನವನ್ನು ಪಡೆಯಲು ಅರ್ಹನು, ಮತ್ತು ಆತನ ವೇತನವನ್ನು, ವೇತನ ಏರಿಕೆ ನಿಲ್ಲಿಸದಿರುವಂತೆ ಬಾವಿಸಿ ನಿಗದೆಪಡಿಸತಕ್ಕದ್ದು. ಆದರೆ ತಾನು ಉತ್ತೀರ್ಣನಾಗದಿರುವ ಅಥವಾ ವಿನಾಯತಿ ಪಡೆಯದಿರುವ ಸಮಯದಲ್ಲಿ ಮಂಜೂರಾದ ವೇತನ ಏರಿಕೆಗಳ ಬಡ್ತಿಯನ್ನು ಕೇಳಲು ಆತನು ಹಕ್ಕುದಾರನಾಗಲಾರನು. .
7.ಕಿರಿಯ ಪೊಲೀಸ್ ಅಧಿಕಾರಿಗಳ ನಿಯುಕ್ತತೆ (ಹುದ್ದೆಗೆ ನೇಮಕ) ಮತ್ತು ವರ್ಗಾವಣೆ.
8. ಮೂರು ವರ್ಷಗಳ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚಿನ ಸಲ ವರ್ಗಾವಣೆ ಮಾಡಲು ಸಾರ್ವಜನಿಕ ಹಿತದೃಷ್ಷಿ ಮಾತ್ರ ಕಾರಣವಾಗತಕ್ಕದ್ದು. ಮೇಲ್ಲಿಂದ ಮೇಲೆ ವರ್ಗಾವಣೆ ಮಾಡುವುದರಿಂದ ನೌಕರರಿಗೆ ವ್ಯಕ್ತಿಗತ ಹೆಚ್ಚಿನ ತೊಂದರೆಯಲ್ಲದೆ, ಸರಕಾರಕ್ಕೂ ಆತನ ಪ್ರಯಾಣ ಭತ್ಯೆ ಮತ್ತು ಇತರೆ ಖರ್ಚುಗಳ ಹೆಚ್ಚಿನ ಹೊರೆಯಾಗುತ್ತದೆ. .
9. ಸೇವೆಯಲ್ಲಿರುವ ನೌಕರನನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡುವುದರಿಂದ ಆಡಳಿತದಲ್ಲಿ ವ್ಯತ್ಯಯವಾಗುತ್ತದೆ. ಹಾಗೂ ಇತರೆ ಲೋಪದೋಷಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಕಷ್ಠವಾಗುತ್ತದೆ. ವರ್ಗಾವಣೆ ಮಾಡುವ ಪ್ರಾಧಿಕಾರವು ಈ ತತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. .
10. ಸೇವೆಯಲ್ಲಿರುವ ಯಾವನೇ ನೌಕರನನ್ನು ಎರಡು ವರ್ಷಗಳಿಗಿಂತ ಕಡಿಮೆಯ ಅವಧಿಗೆ ಒಂದು ಸ್ಥಳದಲ್ಲಿ ಇರುವವನನ್ನು, ಸರಕಾರದ ಪೂರ್ವಾನುಮತಿ ಪಡೆಯದೆ ಸಾಮಾನ್ಯವಾಗಿ ವರ್ಗಾವಣೆ ಮಾಡತಕ್ಕದ್ದಲ್ಲ. .
11. ಸೇವೆಯಲ್ಲಿರುವ ಓರ್ವ ಸದಸ್ಯನನ್ನು ಮೂರು ವರ್ಷಗಳಿಗಿಂತ ಹೆಚ್ಚಿಗೆ ಒಂದೇ ಸ್ಥಳದಲ್ಲಿ ಇಡತಕ್ಕದ್ದಲ್ಲ. .
12. ಸಾಮಾನ್ಯವಾಗಿ ವರ್ಗಾವಣೆಗಳನ್ನು ಏಪ್ರಿಲ್ ಮತ್ತು ಜೂನ್ ತಿಂಗಳುಗಳೊಳಗೆ ಮಾಡತಕ್ಕದ್ದು. .
13. ಸಂಬಂಧ ಪಟ್ಟ ನೌಕರನ ಬೇಡಿಕೆಗನುಗುಣವಾಗಿ ಮಾಡಿದ ಮಗರ್ಾವಣೆಗಳಿಗೆ ಪ್ರಯಾಣ ಭತ್ಯೆ ಕೊಡತಕ್ಕದಲ್ಲ. .
14. ಜಿಲ್ಲೇವಾರು ಹುದ್ದೇಗಳಾಗಿದ್ದಲ್ಲಿ, ಜಿಲ್ಲೆಯ ಹೊರಗಡೆ, ವಲಯವಾರು ಹುದ್ದೆಗಳಾಗಿದ್ದಲ್ಲಿ ವಲಯದ ಹೊರಗೆ, ಸೇವೆಯೊಳಗಿನ ಯಾವನೇ ನೌಕರನನ್ನೂ ವರ್ಗಾವಣೆ ಮಾಡತಕ್ಕದ್ದಲ್ಲ. .
15. ಪೊಲೀಸ್ ಅಧಿಕಾರಿಗಳು (ಪೇದೆಗಳಿಗಿಂತ ಹೆಚ್ಚಿನ ಹುದ್ದೆಯವರನ್ನು) ತಮ್ಮ ಸ್ವಂತ ಪಟ್ಟಣಗಳಿಗಾಗಲೀ ಅಥವಾ ತಾವು ಸ್ಥಿರಾಸ್ಥಿ ಹೊಂದಿರುವ ಸ್ವಂತ ಪಟ್ಟಣಗಳಿಗಾಗಲೀ ಅಥವಾ ಸ್ಥಳಗಳಿಗಾಗಲೀ, ಸಾಮನ್ಯ ವರ್ಗಾವಣೆ ಮಾಡತಕ್ಕದಲ್ಲ. .
16.. ಕೆ.ಸಿ.ಎಸ್.ಆರ್ ಗೆ ಅನುಗುಣವಾಗಿ ಸೇವೆಗೆ ವರದಿಮಾಡಿಕೊಳ್ಳಲು ಕಾಲಾವಕಾಶ ಕೊಡಬಹುದು. ಬಡ್ತಿ ಕಾಲಾವಕಾಶವನ್ನೂ ಒಂದು ಹಕ್ಕಾಗಿ ಕೇಳಲು ಬರುವುದಿಲ್ಲವೆನ್ನುವುದನ್ನು ತಿಳಿದಿರತಕ್ಕದ್ದು. ಮತ್ತು ಯಾವ ನೌಕರನಿಗಾಗಲಿ ತಕ್ಷಣ ವರ್ಗಾಯಿಸಿದ ಹುದ್ದೆಗೆ ಸೇರುವಂತೆ ನಿರ್ದೇಶಿಸಬಹುದು. .
17. ಒಬ್ಬ ವೃತ್ತ ನಿರೀಕ್ಷಕನ ಅಥವಾ ಉಪನಿರೀಕ್ಷಕನ ವರ್ಗಾನಣೆಯಾದಲ್ಲಿ ಅಧೀಕ್ಷಕರು ನಮೂನೆ 5 ರಲ್ಲಿ ಒಂದು ದೃಢೀಕರಣ ಪತ್ರವನ್ನು ಉಪಮಹಾನಿರೀಕ್ಷಕನ ಮೂಲಕ ಮಹಾ ನಿರೀಕ್ಷಕನಿಗೆ ಕಳುಹಿಸತಕ್ಕದ್ದು. ಈ ವರ್ಗಾವಣೆಗಳನ್ನು ಪೊಲೀಸ್ ರಾಜಪತ್ರ (ಪೊಲೀಸ್ ಗೆಜೆಟ್ನಲ್ಲಿ) ಪ್ರಕಟಿಸತಕ್ಕದ್ದು. .
18. ಒಂದು ವೃತ್ತದ ಅಧಿಕಾರವನ್ನು ಒಪ್ಪಿಸುವ , ಒಬ್ಬ ನಿರೀಕ್ಷಕನು ಇಡಬೇಕಾದ ದಾಖಲೆಗಳನ್ನು (ರೆಕಾರ್ಡ್ ಗಳನ್ನು) ತನ್ನಿಂದ ಅಧಿಕಾರ ವಹಿಸಿಕೊಳ್ಳುವ ಅಧಿಕಾರಿಗೆ ಕೊಡತಕ್ಕದ್ದು. ಅಲ್ಲದೆ ಆತನು () ತಾನು ಕೊಟ್ಟ ಎಲ್ಲ ಹಣಗಳ ಟಿಪ್ಪಣಿಯನ್ನು ಮತ್ತು () ವಿಲೇವಾರಿ ಮಾಡಿದ ಕಾಗದ ಪತ್ರಗಳ ಯಾದಿಯನ್ನು ಆ ಅಧಿಕಾರ ವಹಿಸಿಕೊಳ್ಳವ ಅಧಿಕಾರಿಯು ಈ ವಸ್ತುಗಳನ್ನು ತಾನು ತೆಗೆದುಕೊಂಡಿದ್ದಕ್ಕೆ ರಸೀದಿ ಕೊಡತಕ್ಕದ್ದು. .
19. ಒಂದು ವೃತ್ತದ ಠಾಣೆಗಳ ಸರಕಾರದ ಆಸ್ತಿಯ ದಾಖಲೆ ಪುಸ್ತಕವನ್ನು (ರಿಜಿಸ್ಟರನ್ನು) (ನಮೂನೆ ನಂಬರ್ 6ರ ಪ್ರಕಾರ) ಒಬ್ಬ ವೃತ್ತ ನಿರೀಕ್ಷಕನು ಇಡತಕ್ಕದ್ದು. ದಾಖಲೆ ಪುಸ್ತಕವು ಆ ವೃತ್ತದ ಠಾಣೆಗಳ, ಆಸ್ತಿಗಳ ದಾಖಲೆಯಾಗತಕ್ಕದ್ದು ಮತ್ತು ಅಧಿಕಾರ ವಹಿಸಿಕೊಂಡ ನಿರೀಕ್ಷಕನು 30 ದಿನಗಳ ಅವಧಿಯೊಳಗೆ ತನ್ನ ವೃತ್ತದ ಪ್ರತಿಯೊಂದು ಠಾಣೆಗೆ ಭೇಟಿಕೊಡತಕ್ಕದ್ದು ಮತ್ತು ಆಸ್ತಿಯ ತನಿಖೆ ಮಾಡತಕ್ಕದ್ದು. ಮತ್ತು ಯಾವುದಾದರೂ ನ್ಯೂನತೆ ಇದ್ದಲ್ಲಿ ಪೊಲೀಸ್ ಅಧೀಕ್ಷಕರ ಗಮನಕ್ಕೆ ತರತಕ್ಕದ್ದು. ಮತ್ತು ಆ ರೀತಿ ನ್ಯೂನತೆ ಇದ್ದುದಕ್ಕೆ ಹೊರಹೋಗುವ ನಿರೀಕ್ಷಕನೇ ಹೊಣೆಗಾರನಾಗತಕ್ಕದ್ದು. ಅಧಿಕಾರ ವಹಿಸಿಕೊಂಡ ಸರ್ಕಾರಿ ನೌಕರನ ಹೊಣೆಗಾರಿಕೆಯು ಆನಂತರ ಪ್ರಾರಂಭವಾಗುತ್ತದೆ. .
20. ಒಂದು ಠಾಣೆಯ ಠಾಣಾಧಿಕಾರಿಯು ಒಂದು ಠಾಣೆಯ ಉತ್ತರಾಧಿಕಾರಿಗೆ ಪದದ ಪ್ರಭಾರವನ್ನು ವಹಿಸಿದಾಗ ಆಸ್ತಿಯ ದಾಖಲೆ ಪುಸ್ತಕಗಳು (ರಿಜಿಸ್ಟರ್ಗಳು) ಇತ್ಯಾದಿಗಳ ಒಂದು ಠಾಣೆಯ ಚಾರ್ಜ್ನ ಯಾದಿಯನ್ನು ಕೊಡತಕ್ಕದ್ದು. ಅಂತಹ ಯಾದಿಯನ್ನು ಠಾಣಾಧಿಕಾರಿಯು ಇಟ್ಟಿರತಕ್ಕದ್ದು. ಮತ್ತು ತಾನು ವಹಿಸಿಕೊಡುವ ಪ್ರಭಾರದ ಯಾದಿಯ ಜೊತೆಗೆ, ಅಧಿಕಾರ ವಹಿಸಿಕೊಳ್ಳುವ ನೌಕರನೂ ಗಮನಿಸಿಕೊಳ್ಳಬೇಕಾದ ಮುಖ್ಯ ಅಂಶಗಳ ಒಂದು ಟಿಪ್ಪಣಿಯನ್ನು ಸಹಿತ ಆತನಿಗೆ ಕೊಡತಕ್ಕದ್ದು. ಅಧಿಕಾರ ವಹಿಸಿಕೊಳ್ಳುವ ನೌಕರನು ತಾನು ಅಧಿಕಾರ ವಹಿಸಿಕೊಳ್ಳುವ ಮುಂಚೆ ಆಸ್ತಿಗಳು, ದಾಖಲೆಗಳು ಇತ್ಯಾದಿ ಯಾದಿಯಲ್ಲಿ ನಮೂದಿಸಿದ ಪ್ರತಿಯೊಂದು ಬಾಬ್ತನ್ನು ಪರಿಶೀಲನೆ ಮಾಡತಕ್ಕದ್ದು ಮತ್ತು ಎಲ್ಲಾ ಬಾಬ್ತುಗಳನ್ನು ತನಗೆ ಕೊಟ್ಟ ಬಗ್ಗೆ ಪೊಲೀಸ್ ಠಾಣೆಯ ದಿನಚರಿಯಲ್ಲಿ ನಮೂದಿಸತಕ್ಕದ್ದು ಮತ್ತು ಅಧಿಕಾರಕೊಟ್ಟ ನೌಕರನಿಗೆ ಆ ಬಗ್ಗೆ ಒಂದು ರಸೀದಿಯನ್ನು ಕೊಡತಕ್ಕದ್ದು. ತಾನು ವಹಿಸಿಕೊಂಡ ಬಾಬುಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ಕೊರತೆಕಂಡು ಬಂದಲ್ಲಿ ದಿನಚರಿಯಲ್ಲಿ ನಮೂದಿಸಿ ಜಿಲ್ಲಾ ಅಧೀಕ್ಷಕನಿಗೆ ತಿಳಿಸತಕ್ಕದ್ದು. .
21. ನೌಕರಿಯನ್ನು ಬಿಡುವ ನೌಕರನಿಗೆ ಮೇಲಿನ ಪರಿಶೀಲನೆಯನ್ನು ಮುಗಿಸಿದ ವಿನಹ ತನ್ನ ಸ್ವಾಧೀನದಲ್ಲಿದ್ದ ಸರ್ಕಾರಿ ಪತ್ರಗಳು, ದಾಖಲೆಗಳ ಮತ್ತು ರಿಜಿಸ್ಟಗಳ ಲೆಕ್ಕ ಕೊಡದ ಹೊರತು ಅವನ ವೇತನವನ್ನು ಅಂತಿಮವಾಗಿ ತೀರ್ಮಾನನಿಸತಕ್ಕದ್ದಲ್ಲ ಮತ್ತು ಆತನಿಗೆ ಕೊಡತಕ್ಕದ್ದಲ್ಲ. .
22. ಜಿಲ್ಲೆಗಳ ಅಧೀಕ್ಷಕರು (ರೈಲ್ವೆ) ಮತ್ತು ಪೊಲೀಸ್ ಕಮಿಷನರುಗಳು ನಮೂನೆ (ತ) ರಲ್ಲು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಪೊಲೀಸ್ ಉಪ ನಿರೀಕ್ಷರಿಗಿಂತ ಹೆಚ್ಚಿನ ಹುದ್ದೆಯ ಅಧಿಕಾರಿಗಳ ಸ್ಥಳದ ಯಾದಿಯನ್ನು ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ಡೈರೆಕ್ಟರ್ ಜನರಲ್ ಮತ್ತು ಐ.ಜಿ. ರವರಿಗೆ ಕಳುಹಿಸತಕ್ಕದ್ದು. ಅದೇ ರೀತಿ ಇತರೇ ಘಟಕಗಳಲ್ಲಿ ತಮ್ಮ ಅಧೀನದಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ಸ್ಥಳದ ಯಾದಿಯನ್ನು ಪ್ರತಿತಿಂಗಳ 10ನೇ ತಾರೀಖಿನೊಳಗೆ ಡಿ.ಜಿ ರವರಿಗೆ ಕಳುಹಿಸಬೇಕು.