Karnataka State Police

ಬಹುಮಾನಗಳು

ಸಾಮಾನ್ಯ ಸಲ್ಲಿಸಿದ ಸೇವೆಗಾಗಿ ಅಧೀನ ಪೊಲೀಸ್ ಅಧಿಕಾರಿಗಳಿಗೆ ಯುಕ್ತ ಪ್ರಕರಣಗಳಲ್ಲಿ ಬಹುಮಾನಗಳನ್ನು ಕೊಡಬಹುದು.

ಇಲಾಖೆಯಿಂದ ಹಣದ ಬಹುಮಾನ

343 ನೇ ಆದೇಶದಲ್ಲಿ ನಮೂದಿಸಿರುವ ಅಧಿಕಾರಿಗಳ ವ್ಯಾಪ್ತಿಯೊಳಗೆ ವಿಶೇಷ ಅರ್ಹತೆಯ ಸೇವೆಗಳಿಗಾಗಿ ಪೂಲೀಸ್ ನಿರೀಕ್ಷಕರ ಶ್ರೇಣಿಯ ಮತ್ತು ಅದಕ್ಕೂ ಕೆಳ ದಜರ್ೆಯ ಪೊಲೀಸ್ ಅಧಿಕಾರಿಗಳಿಗೆ, ಮತ್ತು ಕೆ.ಎಸ್.ಆರ್.ಪಿ.ಯನ್ನೂಳಗೊಂಡು ತತ್ಸಮಾನ ಹುದ್ದೆಯಲಿರುವ ಅಧಿಕಾರಿಗಳಿಗೆ ಹಣದ ರೂಪದಲ್ಲಿ ಬಹುಮಾನಗಳನ್ನು ಕೊಡಬಹುದು. ಮಾಮೂಲಿ ಕೆಲಸಗಳಾದ ದಸ್ತಗಿರಿಯಾದನಂತರ ಒಪ್ಪಿಗೆ ಅಥವಾ ತಪ್ಪೊಪ್ಪಿಗೆ, ಉತ್ತಮ ಹಾಜರಾತಿ ಇತ್ಯಾದಿಗಳು ಯಾವುದೇ ರೀತಿಯ ವಿಶೇಷ ಕೌಶಲ್ಯವನ್ನು ತೋರದಂಥವುಗಳಾಗದ್ದರಿಂದ, ಅವುಗಳು ಬಹುಮಾನಕ್ಕರ್ಹವಲ್ಲ.

ಇತರೆಯವರಿಂದ ಹಣದ ಬಹುಮಾನ

ವರಿಷ್ಠ ಪೊಲೀಸ್ ಅಧಿಕಾರಿಗಳಲ್ಲದ, ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಕೆಳಗೆ ನಮೂದಿಸಿದ ಪ್ರಕರಣಗಳಲ್ಲಿ ಹಣದ ಬಹುಮಾನ ಪಡೆಯಲು ಅರ್ಹರಿದ್ದಾರೆ.

ಸರ್ಕಾರ ಕೊಡುವ ಬಹುಮಾನಗಳು

ನ್ಯಾಯಾಲಯಗಳು ಕೊಡುವ ಬಹುಮಾನಗಳು

ಖಾಸಗೀ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು, ಅಥವಾ ಸರಕಾರದ ಇತರೆ ಇಲಾಖೆಗಳು, ಕೊಡಲ್ಪಡುವ ಬಹುಮಾನಗಳಾಗಿದ್ದು, ಅವುಗಳು ಕಮೀಷನರು, ಪೊಲೀಸ್ ಮಹಾನಿರೀಕ್ಷಕ/ಉಪಮಹಾನಿರೀಕ್ಷಣಾಧಿಕಾರಿ/ಅಧೀಕ್ಷಕರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ಮಂಜೂರು ಮಾಡಲು ಅಧಿಕಾರವಿದ್ದು, ಅವರ ಆದೇಶಗಳಿಗೆ ಒಳಪಟ್ಟು, ಅವರು ಆ ಮೊತ್ತವು ಸಂಬಂಧಿಸಿದ ವ್ಯಕ್ತಿಗಳಿಗೆ ಅಥವಾ ಪೊಲೀಸ್ ನಿಧಿಗೆ ಅಥವಾ ಭಾಗಶ: ಎರಡಕ್ಕೂ ಕೊಡಬಹುದೆಂದು ನಿರ್ಧರಿಸತಕ್ಕಂಥವುಗಳು.

ಸುಂಕದ, ಉಪ್ಪಿನ, ಜಕಾತಿ, ಮತ್ತು ಇತರೆ ಸರಕಾರಿ ಇಲಾಖೆಗಳು ಕೊಡುವ ಬಹುಮಾನಗಳು.
ಇತರ ರಾಜ್ಯಗಳು ಮತ್ತು ಭಾರತ ಸರಕಾರ ಕೊಡುವ ಬಹುಮಾನಗಳು.

ಯಾವುದೇ ಸಂದರ್ಭಗಳಲ್ಲಿ ಮತ್ತು ಮೂಲದಿಂದಾಗಲೀ, ಪೊಲೀಸ್ ಅಧಿಕಾರಿಗಳು ನೇರವಾಗಿ ಬಹುಮಾನಗಳನ್ನು ಸ್ವೀಕರಿಸತಕ್ಕದ್ದಲ್ಲ. ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ನ್ಯಾಯಾಲಯಗಳು ಅಥವಾ ಇತರೆ ಇಲಾಖೆಗಳು ಅಥವಾ ಇತರೆ ರಾಜ್ಯಗಳು ಕೊಟ್ಟ ಹಣವನ್ನು ಪ್ರಥಮವಾಗಿ ಅಧೀಕ್ಷಕರು, ಪಡೆದು, ರಾಜ್ಯ ಠೇವಣಿ, ಎನ್ನುವ ಶೀಷರ್ಿಕೆಯಲ್ಲಿ, ಖಜಾನೆಯಲ್ಲಿ ಠೇವಣೆ ಇಡತಕ್ಕದ್ದು. ಖಾಸಗಿಯವರು, ಮತ್ತು ಸಂಘ ಸಂಸ್ಥೆಯವರು ಕೊಡ ಬಯಸುವ ಬಹುಮಾನಗಳನ್ನು, ಸ್ವೀಕರಿಸುವ ಮೊದಲು, ಸಂಬಂಧಿಸಿದ ಅಧೀಕ್ಷಕರು ಅವುಗಳನ್ನು ಸಕರ್ಾರದ ಒಂದು ಆದೇಶದ ಮೂಲಕ ವಿತರಿಸಬೇಕು.

ಸಾರ್ವಜನಿಕ ನ್ಯಾಯ ದೊರಕಿಸಲು ಮಾಡಿದ ಸೇವೆಗಾಗಿ, ಅಥವಾ ತಪ್ಪಿಸಿಕೊಂಡ ಶಿಕ್ಷಿತ ಅಪರಾಧಿಗಳನ್ನು ಸೆರೆ ಹಿಡಿದದ್ದಕ್ಕಾಗಿ ಅಥವಾ ಮಾನವೀಯತೆಯ ಕಾರ್ಯಗಳ ಪ್ರೋತ್ಸಾಹಕ್ಕಾಗಿ, ಮತ್ತು ಧೈರ್ಯದ ಪ್ರದರ್ಶನಕ್ಕಾಗಿ, ಯಾವುದೇ ರೀತಿಯ ಬಹುಮಾನಗಳನ್ನಾಗಲೀ ಕೊಡಬಹುದು ಮತ್ತು ಆದಷ್ಟು ಶೀಘ್ರವಾಗಿ ಅವುಗಳನ್ನು ವಿತರಿಸತಕ್ಕದ್ದು, ಬಹುಮಾನ ಕೊಡುವಂತೆ ಮಾಡುವ ಸಮಸ್ತ ಶಿಪಾರಸ್ಸುಗಳನ್ನು, ನಮುನೆ 30 ರಲ್ಲಿ, ಮಂಜೂರು ಮಾಡುವ ಅಧಿಕಾರಿಗೆ ಕಳುಹಿಸತಕ್ಕದ್ದು. ಮತ್ತು ಪ್ರತಿಯೊಂದು ಹಂತದಲ್ಲಿ ಅವುಗಳನ್ನು ಗುಪ್ತವಾದದ್ದೆಂದು ಕಡ್ಡಾಯವಾಗಿ ಪರಿಗಣಿಸತಕ್ಕದ್ದು. ಅದು ಶಿಕ್ಷೆಯಾದಾಗ, ಶಿಕ್ಷೆಯ ಅವಧಿಯ ಮಾಹಿತಿಯನ್ನು ಒಳಗೊಳ್ಳತಕ್ಕದ್ದು. ಅಥವಾ ಮೇಲ್ಮನವಿ ಮಾಡಿದಲ್ಲಿ, ಅದರ ಫಲಿತಾಂಶ, ಮತ್ತು ಪೊಲೀಸ್ರ ನಡತೆಯ ಸಂಬಂಧವಾಗಿ, ನ್ಯಾಯಾಲಯದವರು ಮಾಡಿದ, ಅಭಿಪ್ರಾಯೋಕ್ತಿಗಳು, ಮತ್ತು ಪ್ರತಿಯೊಬ್ಬ ವ್ಯಕ್ತಿಯು ವಹಿಸಿದ ಪಾತ್ರವನ್ನು ವಿಶಿಷ್ಟವಾದ ಶ್ಲಾಘನೀಯ ಗುಣ ಹೊಂದಿದೆಯೆಂದು ಪರಿಗಣಿಸಲು ಇರುವ ಕಾರಣಗಳನ್ನು ಕಾಣಿಸಬೇಕು.

ಆದಿ ವಿಚಾರಣೆಯಲ್ಲಿರುವ ಶಿಕ್ಷೆಯಾಗದಿರುವ ಪ್ರಕರಣಗಳಲ್ಲಿ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರು, ಮಹಾ ನಿದರ್ೆಶನಾಧಿಕಾರಿ, ಅಥವಾ ಉಪಮಹಾನಿದರ್ೆಶನಾಧಿಕಾರಿ, ಅಧೀಕ್ಷಕ ಅಧಿಕಾರಿಯು ಅಥವ ಖಾಸಗಿ ವ್ಯಕ್ತಿಯು ಮಾಡಿದ ಅತ್ಯುತ್ತಮ ಕಾರ್ಯಕ್ಕೆ ಅಥವಾ ಸಲ್ಲಿಸಿದ ವಿಶಿಷ್ಡ ಸೇವೆಗೆ, ಕೂಡಲೆ ಮಾನ್ಯತೆ ನೀಡುವುದು ಅವಶ್ಯವೆಂದು ಭಾವಿಸಿದರೆ, ವಿಚಾರಣೆಯ ಫಲಿತಾಂಶದವರೆಗೆ ಕಾಯದೆ ಬಹುಮಾನವನ್ನು ಮಂಜೂರು ಮಾಡಿ ವಿತರಣೆ ಮಾಡಬಹುದು. ಈ ನಿಬಂಧನೆಯನ್ನು ಉಪ ಆದೇಶ (ಎ) ಯಿಂದ ನುಣುಚಿಗೊಳ್ಳುಲು ನೆಪವಾಗಿ ಬಳಸತಕ್ಕದ್ದಲ್ಲ. ಇಂಥ ವಿಶೇಷ ನಿಬಂಧನೆಯನ್ನು ಪ್ರಯೋಗಿಸಿದ ಪ್ರತಿಯೊಂದು ಪ್ರಕರಣವನ್ನು ಎಲ್ಲಾ ಸಂಗತಿಗಳೊಂದಿಗೆ ಪೊಲೀಸ್ ಮಹಾನಿದರ್ೆಶಕನಿಗೆ ವರದಿ ಮಾಡತಕ್ಕದ್ದು.

ಒಂದು ಪ್ರಕರಣದಲ್ಲಿ ಶಿಕ್ಷೆಯಾಗದಿದ್ದರೂ, ಅಧೀಕ್ಷಕರು, ಆ ವಲಯದ ಮಹಾನಿರೀಕ್ಷಕ, ಅಥವಾ ಕಮಿಷನರ್, ಆ ಪ್ರಕರಣ ಅನುಗುಣವಾಗಿ, ಒಂದು ಬಹುಮಾನವನ್ನು ಕೊಡತಕ್ಕದ್ದೆನ್ನುವ ಅಭಿಪ್ರಾಯಕ್ಕೆ ಬಂದರೆ, ಆತನು ಪೊಲೀಸ್ ಮಹಾನಿದರ್ೆಶಕನ ಮಂಜೂರಾತಿ ಪಡೆದರೆ ಮಾತ್ರ ಬಹುಮಾನವನ್ನು ಕೊಡಬಹುದು.

ಬಹುಮಾನಗಳು: ಅಧಿಕಾರಿಗಳಿಗೆ ಮಂಜೂರು ಮಾಡುವ ಅಧಿಕಾರಿಗಳು
ಸರಕಾರದಿಂದ ಮಂಜೂರಾದ ಆಥರ್ಿಕ ಅಧಿಕಾರಗಳು ಈ ಕೆಳಗಿನಂತಿರುತ್ತವೆ.
ಪೊಲೀಸ್ ಮಹಾನಿದರ್ೆಶಕ ಮತ್ತು ಮಹಾನಿರೀಕ್ಷಣಾಧಿಕಾರಿ

ಪ್ರತಿಯೊಂದು ದಂಡನೆಯ ಪ್ರಕರಣದಲ್ಲಿ, ಜುಲ್ಮಾನೆಯ ಮೊತ್ತದಿಂದ ಮತ್ತು 1,00,000/- ರೂಪಾಯಿ ಪರಿಮಿತಿವರೆಗೆ ಮುಟ್ಟುಗೋಲು ಹಾಕಿದ ಸ್ವತ್ತಿನಿಂದ, ಉತ್ತಮ ಸೇವೆಗಾಗಿ ಪ್ರತಿ ವ್ಯಕ್ತಿಗೆ ರೂ 2,000/- ದಂತೆಉತ್ತಮ ಸೇವೆಗಾಗಿ ಬಹುಮಾನಗಳನ್ನು ಮಂಜೂರು ಮಾಡಬಹುದು, (ಶಿಕ್ಷೆಯಾದ ನಂತರ ಮತ್ತು ಮೇಲ್ಮನವಿ ಅಥವಾ ಪುನರೀಕ್ಷಣಾ ಅಜರ್ಿಗಳನ್ನು ಸಲ್ಲಿಸುವ ಅವಧಿಯು ಮುಗಿದ ನಂತರ), ಇದು ಪ್ರತಿಯೊಂದು ಪ್ರಕರಣದಲ್ಲಿ ಬಹುಮಾನದ ಮೊಬಲಗು ಜುಲ್ಮಾನೆ ಮೊತ್ತದಿಂದ ಅಥವಾ ಮುಟ್ಟುಗೋಲು ಹಾಕಿಕೊಂಡ ಸ್ವತ್ತುಗಳ ಬೆಲೆಯಿಂದ ಅಥವಾ ಖಾಸಗಿಯವರ. ದೇಣಿಗೆಯಿಂದ ಅರ್ಧಕ್ಕಿಂತ ಹೆಚ್ಚಾಗ ಕೂಡದೆನ್ನುವ ಷರತ್ತಿಗೆ ಒಳಪಟ್ಟಿರುತ್ತದೆ ಕರ್ನಾಟಕ ಸರ್ಕಾರದ ನಡಾವಳಿಗಳತ್ತ ಗಮನ ಸೆಳೆಯಲಾಗಿದೆ.

ಶ್ಲಾಘನೀಯ ಸೇವೆಯನ್ನು ಮಾಡಿದ ಪೊಲೀಸ್ ನಿರೀಕ್ಷಕರು, ಮತ್ತು ಅವರಿಗಿಂತ ಕಿರಿಯ ಶ್ರೇಣಿಯ ಅಧಿಕಾರಿಗಳು, ಮತ್ತು ಅದೇ ಶ್ರೇಣಿಯಲ್ಲಿ ಇತರೇ ಇಲಾಖೆಗಳಲ್ಲಿ ಇರುವ ಸರಕಾರಿ ಅಧಿಕಾರಿಗಳು, ಮತ್ತು ಖಾಸಗಿ ವ್ಯಕ್ತಿಗಳಿಗೆ, ಪ್ರತಿಯೊಂದು ಪ್ರಕರಣದಲ್ಲಿ ರೂಪಾಯಿ ನಗದು ಹಣವನ್ನು ಮಿತಿಯೊಳಗೆ ಬಹುಮಾನವಾಗಿ ಮಂಜೂರು ಮಾಡಬಹುದು ಈ ಮಿತಿಗಳು ಖಾಸಗಿ ವ್ಯಕ್ತಿಗಳು ಮತ್ತು ಇತರೆ ಇಲಾಖೆಯವರು ಕೊಟ್ಟ ಬಹುಮಾನಗಳ ಸ್ವೀಕಾರ ಮತ್ತು ವಿತರಣೆಗೂ ಅನ್ವಯಿಸುತ್ತದೆ.
ಬೆಂಗಳೂರು ನಗರ ಪೊಲೀಸ್ ಸಹಾಯಕ ಮಹಾನಿದರ್ೇಶಕ / ಬೆಂಗಳೂರು ನಗರ ಆಯುಕ್ತ (ಕಮೀಶನರ್) ಮತ್ತು ಪೊಲೀಸ್ ಮಹಾನಿರೀಕ್ಷಣಾಧಿಕಾರಿ
ಪೊಲೀಸ್ ಮಹಾನಿದರ್ೇಶಕರಿಗೆ ಇರುವಂಥ ಅಧಿಕಾರಗಳೇ ಇವರಿಗೂ ಇವೆ.

ಪೊಲೀಸ್ ಉಪ ಮಹಾನಿರೀಕ್ಷಕರು

(ತ) ಪೊಲೀಸ್ ನಿರೀಕ್ಷಕರಿಗಿಂತ ಕಡಿಮೆ ಶ್ರೇಣಿಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಇತರೆ ಇಲಾಖೆಯೊಳಗಿನ ಅದೇ ಶ್ರೇಣಿಯ ಸರಕಾರಿ ನೌಕರರಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಅವರು ಸಲ್ಲಿಸಿದ ಶ್ಲಾಘನೀಯ ಸೇವೆಗೆ ಪ್ರತಿಯೊಂದು ಪ್ರಕರಣದಲ್ಲಿ ರೂ. 500-ರ ಪರಿಮಿತಿಯವರೆಗೆ ಬಹುಮಾನ ಮಂಜೂರು ಮಾಡುವುದು ಒಬ್ಬ ವ್ಯಕ್ತಿಗೆ ರೂ. 75 /- ಕ್ಕೆ ಒಳಪಟ್ಟು, ಇಂತ ಪರಿಮಿತಿಗೊಳಪಟ್ಟ ಖಾಸಗಿ ವ್ಯಕ್ತಿಗಳು ಮತ್ತು ಇತರೆ ಇಲಾಖೆಗಳು ನೀಡುವ ಬಹುಮಾನಗಳನ್ನು ಸ್ವೀಕರಿಸುವುದಕ್ಕೆ ಮತ್ತು ವಿತರಿಸುವುದಕ್ಕೆ ಅನ್ವಯವಾಗುತ್ತವೆ.
ಪೊಲೀಸ್ ಅಧೀಕ್ಷಕರು ಮತ್ತು ಸಂವಾದಿ ದಜರ್ೆಯ ಅಧಿಕಾರಿಗಳು
(ತ) ಪ್ರತಿಯೊಂದು ಪ್ರಕರಣದಲ್ಲಿ ರೂಪಾಯಿ 500-00 ರವರೆಗೆ (ಯಾವನಾದರೊಬ್ಬ ವ್ಯಕ್ತಿಗೆ ಹೆಚ್ಚೆಂದರೆ ರೂಪಾಯಿ 150ರ ವರೆಗೆ). ಪೊಲೀಸ್ ನಿರೀಕ್ಷಕ ಮತ್ತು ಆತನಿಗಿಂತ ಕಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಇತರೇ ಇಲಾಖೆಗಳಲ್ಲಿರುವ, ಸಮಾನ ಹುದ್ದೆಯ ಸರಕಾರಿ ಅಧಿಕಾರಿಗಳಿಗೆ, ಮತ್ತು ಶ್ಲಾಘನೀಯ ಸೇವೆ ಸಲ್ಲಿಸಿದ ಖಾಸಗಿ ವ್ಯಕ್ತಿಗಳಿಗೆ, ಬಹುಮಾನಗಳನ್ನು ಮಂಜೂರು ಮಾಡಬಹುದು. ಖಾಸಗಿ ವ್ಯಕ್ತಿಗಳು ಮತ್ತು ಇತರೆ ಇಲಾಖೆಯವರು ಕೊಟ್ಟ ಬಹುಮಾನಗಳ ಸ್ವೀಕಾರ ಮತ್ತು ಹಂಚುವಿಕೆಗೆ ಈ ಮಿತಿಗಳು ಅನ್ವಯಿಸುತ್ತವೆ.

ಕಾರಾಗೃಹದಿಂದ ಮತ್ತು ಬಂಧನ ಗೃಹದಿಂದ (ಲಾಕಪ್ಗಳಿಂದ) ತಪ್ಪಿಸಿಕೊಂಡು ಹೋದ ಖೈದಿಗಳನ್ನು ಪುನಃ ಬಂಧಿಸುವುದು ಬಂಧೀಖಾನೆ ಇಲಾಖೆಯು ಬಂದೀಖಾನೆಯಿಂದ ತಪ್ಪಿಸಿಕೊಂಡು ಹೋದ ಖೈದಿಗಳನ್ನು ಪುನಃ ಬಂಧಿಸಲು ಬಹುಮಾನಗಳನ್ನು ಮಂಜೂರು ಮಾಡುತ್ತದೆ. ಮತ್ತು ಪೊಲೀಸ್ರು ಕಾಯುತ್ತಿರುವ ಉಪಕಾರಾಗೃಹದಿಂದ ತಪ್ಪಿಸಿಕೊಂಡ ಖೈಧಿಗಳನ್ನು ಪುನಃ ಬಂಧಿಸಲು ಅಥವಾ ಪೊಲೀಸ್ರ ಬಂಧನದ ಕೋಣೆಗಳಿಂದ, ಅಥವಾ ಪೊಲೀಸರ ಸ್ವಾಧೀನದಿಂದ ತಪ್ಪಿಸಿಕೊಂಡವರನ್ನು ಪುನಃ ಬಂಧಿಸಲು, ಪೊಲೀಸ್ ಇಲಾಖೆಯು ಬಹುಮಾನಗಳನ್ನು ಮಂಜೂರು ಮಾಡುತ್ತದೆ.

ಬಂಧೀಖಾನೆಯಿಂದ ತಪ್ಪಿಸಿಕೊಂಡ ಖೈದಿಗಳನ್ನು ಪುನಃ ಬಂಧಿಸಿದವರಿಗೆ ಬಹುಮಾನ ಕೊಡುವ ಸಂಬಂಧದ ಶಿಫಾರಸ್ಸುಗಳನ್ನು ಕಳುಹಿಸುವಾಗ ಅಧಿಕಾರಿಯು ಖೈದಿಯನ್ನು ಪುನಃ ಬಂಧಿಸುವಲ್ಲಿ ವಹಿಸಿದ ಪಾತ್ರವನ್ನು ವಿವರಿಸಬೇಕು ಮತ್ತು ಶಿಫಾರಸ್ಸು ಮಾಡಿದ ಪೊಲೀಸ್ ಅಧಿಕಾರಿಗಳು ಬಹುಮಾನಕ್ಕೆ ಯಾವ ರೀತಿ ಅರ್ಹರೆಂದು, ಸವಿವರವಾಗಿ ಅದರಲ್ಲಿ ಕಾಣಿಸಿ. ಬಂಧೀಖಾನೆಯ ಪೊಲೀಸ್ ಹೆಚ್ಚುವರಿ ಮಹಾನಿದರ್ೇಶಕ / ಮಹಾ ನಿರೀಕ್ಷಕರಿಗೆ ಕಳುಹಿಸಲು ಸಂಬಂಧಪಟ್ಟ ಬಂಧೀಖಾನೆಯ ಪೊಲೀಸ್ರಿಗೆ ಕಳುಹಿಸತಕ್ಕದ್ದು.

ತ್ಯಜಿಸಿದವರನ್ನು ಹಿಡಿದುಕೊಟ್ಟವರಿಗೆ ಬಹುಮಾನ

346 ಸೈನ್ಯವನ್ನು ತ್ಯಜಿಸಿ ಹೋದವರನ್ನು ಹಿಡಿದುಕೊಟ್ಟವರಿಗೆ, ಸೈನಿಕ ಅಧಿಕಾರಿಗಳು ಬಹುಮಾನ ಕೊಡುತ್ತಾರೆ. ಆದರೆ ತ್ಯಜಿಸಿದವನು ತಾನೇ ಶರಣಾಗತನಾದರೆ ಬಹುಮಾನಗಳನ್ನು ಕೊಡಲಾಗುವುದಿಲ್ಲ.
ಜೀವ ಮತ್ತು ಸ್ವತ್ತು ರಕ್ಷಿಸಿದವರಿಗೆ ಮತ್ತು ಬೆಂಕಿಯನ್ನು ಆರಿಸಿದವರಿಗೆ ಇತ್ಯಾದಿಯವರಿಗೆ ಬಹುಮಾನಗಳು 347.ಮಹಾನಿದರ್ೇಶನಾಧಿಕಾರಿ, ಹೆಚ್ಚುವರಿ ಮಹಾನಿದರ್ೇಶನಾಧಿಕಾರಿ, ಆಯುಕ್ತರು (ಕಮಿಷನರ್), ಉಪಮಹಾನಿರೀಕ್ಷಣಾಧಿಕಾರಿ, ವಲಯ ನಿರೀಕ್ಷಣಾಧಿಕಾರಿ, ಅಧೀಕ್ಷಕರು, ಮತ್ತು ಆ ಶ್ರೇಣಿಗೆ ಸಮನಾದ ಅಧಿಕಾರಿಗಳು, ಪೊಲೀಸ್ ನಿರೀಕ್ಷಕರು, ಮತ್ತು ಅದಕ್ಕಿಂತ ಕಿರಿಯ ಶ್ರೇಣಿಯ ಅಧೀನ ಅಧೀಕ್ಷಕ ಅಧಿಕಾರಿಗಳಿಗೆ, ಜೀವ ಮತ್ತು ಸ್ವತ್ತು ರಕ್ಷಿಸಿದ ಮತ್ತು ಬೆಂಕಿಯನ್ನು ಆರಿಸಿದವರಿಗೆ ಬಹುಮಾನಗಳನಬಹುಮಾನಗಳನ್ನು ತಿಳಿಸುವುದು ್ನು ಆದೇಶ 343ರ ಹಣದ ಪರಿಮಿತಿಗೊಳಪಟ್ಟು ಮಂಜೂರು ಮಾಡಬಹುದು.

ಬಹುಮಾನಗಳನ್ನು ತಿಳಿಸುವುದು

ಇಲಾಖೆಯಿಂದ ಪೊಲೀಸ್ ಅಧಿಕಾರಿಗಳಿಗೆ, ಮಂಜೂರಾದ ಸಮಸ್ತ ಹಣದ ಬಹುಮಾನಗಳನ್ನು ಮತ್ತು ನ್ಯಾಯಾಲಯದಿಂದ ಸ್ವೀಕರಿಸಲಾದ ಹಣದ ಬಹುಮಾನಗಳನ್ನು, ಖಾಸಗೀ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಇತರೆ ಇಲಾಖೆಯವರು, ಮತ್ತು ಇತರೇ ರಾಜ್ಯಗಳವರು ಕೊಟ್ಟವುಗಳನ್ನು, ಪೊಲೀಸ್ ಅಧಿಕಾರಿಗಳಿಗೆ ನಮೂನೆ 31ರಲ್ಲಿ ತಿಳಿಸಿ, ಸೇವಾ ರಿಜಿಸ್ಟರಿನಲ್ಲಿ ದಾಖಲು ಮಾಡಿ, ಮತ್ತು ಗುಪ್ತ ಖಾಸಗಿ ಕಡತದಲ್ಲಿ / ಗುಪ್ತ ವ್ಯಕ್ತಿಗಳ ಹಾಳೆಯಲ್ಲಿ ದಾಖಲು ಮಾಡಿ, ಅದರ ಒಂದು ನಕಲನ್ನು ಖಾಸಗಿ ಗುಪ್ತ ಫೈಲಿನಲ್ಲಿ ಸೇರಿಸತಕ್ಕದ್ದು.

ಇತರೆ ಬಹುಮಾನಗಳು

ಪ್ರಮುಖವಾಗಿ ಉತ್ತಮ ಕೆಲಸದಿಂದ ವಿಶೇಷ ಗಮನಕ್ಕೆ ಅರ್ಹರಾದವರಿಗೆ, ಶ್ಲಾಘನೀಯ ಸೇವೆಯ ನಮೂದುಗಳು, ಎಂದು ನಮೂದಿಸುವ ಬಹುಮಾನವನ್ನು ಕೊಡಲಾಗುವುದು. ಪೊಲೀಸ್ ಮಹಾ ನಿದರ್ೇಶಕರು ಮತ್ತು ಮಹಾನಿರೀಕ್ಷಣಾಧಿಕಾರಿಯು ಕೊಡುವ ಈ ಬಹುಮಾನಗಳಿಗೆ, ಪೊಲೀಸ್ ನಿರೀಕ್ಷಕರ ಮತ್ತು ಅವರ ಸಮಾನ ಹುದ್ದೆಯಲ್ಲಿರುವ ಕೆ.ಎಸ್.ಆರ್.ಪಿ. ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳು ಮಾತ್ರ ಅರ್ಹರಾಗಿರುತ್ತಾರೆ.

ಉತ್ತಮ ಸೇವೆಯ ನಮೂದುಗಳು

ಉತ್ತಮ ಪತ್ತೆ ಕಾರ್ಯ, ಚಾತುರ್ಯ ಪ್ರದರ್ಶನ, ಅಥವಾ ವಿಶೇಷ ಗಮನ ಸೆಳೆಯುವ ಯಾವುದೇ ಕೆಲಸಕ್ಕೆ, ಉತ್ತಮ ಸೇವಾ ನಮೂದುಗಳನ್ನು ಕೊಡಲಾಗುವುದು. ಅಧಿಕಾರಿಯು ಇಂಥ ಉತ್ತಮ ಸೇವಾ ನಮೂದುಗಳನ್ನು, ಉಪ ನಿರೀಕ್ಷಕರು, ಸಹಾಯಕ ನಿರೀಕ್ಷಕರು, ಮುಖ್ಯ ಪೇದೆಗಳು, ಮತ್ತು ಪೊಲೀಸ್ ಪೇದೆಗಳಿಗೆ ಮತ್ತು ತತ್ಸಮಾನ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ, ಪೊಲೀಸ್ ಅಧೀಕ್ಷಕ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಕೊಡುತ್ತಾರೆ.

ಶ್ಲಾಘನೀಯ ಸೇವೆ / ಉತ್ತಮ ಸೇವೆ ನಮೂದುಗಳು

ಶ್ಲಾಘನೀಯ ಸೇವೆ ಮತ್ತು ಉತ್ತಮ ಸೇವೆ ನಮೂದುಗಳನ್ನು, ನಮೂನೆ 31ರಲ್ಲಿ ಕೊಡಲಾಗುತ್ತದೆ. ಅದರ ಒಂದು ನಕಲನ್ನು ಆ ಅಧಿಕಾರಿಯ ಖಾಸಗಿ ಕಡತದಲ್ಲಿಡತಕ್ಕದ್ದು, ಮತ್ತು ಆತನ ಸೇವಾ ರಿಜಿಸ್ಟರ್ನಲ್ಲಿ ನಮೂದಿಸುವುದು, ಮತ್ತು ಮುಖ್ಯ ಪೇದೆಗಳ ಮತ್ತು ಪೊಲೀಸ್ ಪೇದೆಗಳ ಸಂಬಂಧವಾಗಿ, ಅವರ ಗುಪ್ತ ವೈಯುಕ್ತಿಕ ಹಾಳೆಯಲ್ಲಿ ದಾಖಲಿಸುವುದು.
ವರಿಷ್ಠ ಪೊಲೀಸ್ ಅಧಿಕಾರಿಗೆ ವಿಶಿಷ್ಠ ಅರ್ಹತೆಯ ಯಾವುದೇ ಕಾರ್ಯನಿರ್ವಹಣೆಯ ಸಂಕೇತವಾಗಿ ಪ್ರಶಂಸಾಪತ್ರವನ್ನು ಕೊಡಬಹುದು. ಅಂಥ ಪತ್ರವನ್ನು ಅರೆ ಸಕರ್ಾರಿ ಪತ್ರದ ರೂಪದಲ್ಲಿ ಕೊಡಬೇಕು. ಹಾಗೂ ಮುಖ್ಯ ಕಾರ್ಯದಶರ್ಿ ಅಥವಾ ಒಳಾಡಳಿತ ಇಲಾಖಾ ಕಾರ್ಯದಶರ್ಿ ಅಥವಾ ಪೊಲೀಸ್ ಮಹಾನಿದರ್ೇಶಕರು ಅದಕ್ಕೆ ಸಹಿ ಮಾಡಬೇಕು. ಈ ಪತ್ರದ ಪ್ರತಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವೈಯುಕ್ತಿಕ ಕಡತದಲ್ಲಿ ದಾಖಲು ಮಾಡಬೇಕು.

ವಿದೇಶಿ ಸರ್ಕಾರದಿಂದ ನೀಡಲಾಗುವ ಬಹುಮಾನಗಳು

ರಾಷ್ಟ್ರಪತಿಯವರ ಪರವಾನಿಗೆಯಿಲ್ಲದೆ, ಯಾವುದೇ ಬಹುಮಾನ, ಅಥವಾ ಯಾವುದೇ ರೀತಿಯ ನೌಕರಿಯನ್ನು, ವಿದೇಶ ರಾಜ್ಯದಿಂದ, ಅಥವಾ ರಾಜ್ಯದ ಅಧೀನರಿಂದ ಸ್ವೀಕರಿಸುವುದನ್ನು ನಮ್ಮ ಸಂವಿಧಾನವು ನಿಷೇದಿಸಿದೆ.

ಇತರೆ ಇಲಾಖೆಯ ಸಕರ್ಾರಿ ಸೇವಕರಿಗೆ ಬಹುಮಾನಗಳು

ಯಾವುದಾದರೂ ಹೀನ ಅಪರಾಧದ ಪತ್ತೆಯಲ್ಲಿ, ಗಂಭೀರ ಪ್ರಕರಣದ ಪತ್ತೆಯಲ್ಲಿ, ಅಥವಾ ಆರೋಪಿಗಳನ್ನು ಹಿಡಿಯುವಲ್ಲಿ, ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡಿದ ಇತರೆ ಇಲಾಖೆಯ ಸರಕಾರಿ ಅಧಿಕಾರಿಗಳಿಗೆ, ಉತ್ತೇಜನಕ್ಕಾಗಿ ಬಹುಮಾನಗಳನ್ನು ಕೊಡಬಹುದು. ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಮೂಲಕ, ಇತರೆ ಇಲಾಖೆಯ ಸರಕಾರಿ ನೌಕರರಿಗೆ ಬಹುಮಾನಗಳನ್ನು ಕೊಡತಕ್ಕದ್ದು.

ಖಾಸಗಿ ವ್ಯಕ್ತಿಗಳಿಗೆ ಬಹುಮಾನಗಳು

ಖಾಸಗಿ ವ್ಯಕ್ತಿಗಳಿಗೆ ಕೊಡುವ ಬಹುಮಾನಗಳು, ನಗದು ರೂಪದಲ್ಲಿ, ಅಥವಾ ಯುಕ್ತ ವಸ್ತುವಿನ ರೂಪದಲ್ಲಿರಬಹುದು. ಖಾಸಗಿಯವರಿಗೆ ಪದಕಗಳನ್ನು ಬಹುಮಾನ ರೂಪದಲ್ಲಿ ಕೊಡತಕ್ಕದ್ದಲ್ಲ. ಆರೋಪಿಗಳನ್ನು ಬಂಧಿಸಿದ ಮತ್ತು ಅಪರಾಧ ಪತ್ತೆಗೆ ಮಾಹಿತಿ ನೀಡಿದ ಖಾಸಗಿ ವ್ಯಕ್ತಿಗಳಿಗೆ, ಆದೇಶ 343ರ ಮಿತಿಗೊಳಪಟ್ಟು, ಬಹುಮಾನಗಳನ್ನು ಮಂಜೂರು ಮಾಡಬಹುದು.

ಖಾಸಗಿ ವ್ಯಕ್ತಿಗಳಿಗೆ ಪ್ರಮಾಣಪತ್ರ

(ಎ) ಹಣದ ರೂಪದ ಬಹುಮಾನಗಳು ಉಚಿತವಲ್ಲದ ಸಂದರ್ಭಗಳಲ್ಲಿ, ಖಾಸಗಿ ವ್ಯಕ್ತಿಗಳು ಸೇವೆ ಮಾಡಿದ ಸ್ಮರಣೆಗೆ, ವಂದನೆಯ ಪತ್ರಗಳನ್ನು, ಅಥವಾ ಅವರ ಸೇವೆಯನ್ನು ಸ್ವೀಕರಿಸಿದ್ದಕ್ಕೆ ಸಮರ್ಥನಾ ಪತ್ರಗಳನ್ನು, ಪೊಲೀಸ್ ಅಧೀಕ್ಷಕ ಮತ್ತು ಆತನಿಗಿಂತ ಹಿರಿಯ ಶ್ರೇಣಿಯ ಅಧಿಕಾರಿಗಳು ಕೊಡಬಹುದು.
ರಾಜ್ಯಪತ್ರಾಂಕಿತ ಅಧಿಕಾರಿಗಳಲ್ಲದ ಪೊಲೀಸ್ ಅಧಿಕಾರಿಗಳಿಂದ ಖಾಸಗಿ ವ್ಯಕ್ತಿಗಳಿಗೆ ಸಮರ್ಥನಾ ಪತ್ರ ನೀಡುವ ನಿರ್ಬಂಧ
(ಬಿ) ಪೊಲೀಸರಿಗೆ ಸಲ್ಲಿಸಿದ ಯಾವುದೇ ರೀತಿಯ ಸೇವೆಗಾಗಿ, ತಮ್ಮ ಅಧಿಕಾರದ ಸಾಮಥ್ರ್ಯದಿಂದ, ಪೊಲೀಸ್ ಉಪವಿಭಾಗಾಧಿಕಾರಿಗಳು ಮತ್ತು ಪೊಲೀಸ್ ರಾಜ್ಯ ಪತ್ರಾಂಕಿತರಲ್ಲದ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಮತ್ತು ಇತರೆಯವರಿಗೆ ಸಮರ್ಥನಾ ಪತ್ರಗಳನ್ನು ಕೊಡುವದನ್ನು ನಿರ್ಬಂಧಿಸಲಾಗಿದೆ.

ಇನಾಮುಗಳು

ಖಾಸಗಿ ವ್ಯಕ್ತಿಗಳ ಅಸಾಮಾನ್ಯ ಸೇವೆಗೆ ಮಂಜೂರಾದ, ವಿಶೇಷ ರೀತಿಯ ಬಹುಮಾನಗಳನ್ನು, ಅವರು ಬಹಿರಂಗವಾಗಿ ಸ್ವೀಕರಿಸಲು ಸಿದ್ದರಿದ್ದಲ್ಲಿ ಸಾರ್ವಜನಿಕ ಸಮಾರಂಭವನ್ನು ಸುಗಮವಾಗಿ ಏರ್ಪಡಿಸುವುದ ಒಂದು ವೇಳೆ ಸಾಧ್ಯವಿದ್ದಲ್ಲಿ ಅಂಥ ಒಂದು ಸಾರ್ವಜನಿಕ ಸಮಾರಂಭದಲ್ಲಿ ಆ ಬಹುಮಾನ ಕೊಡತಕ್ಕದ್ದು.

ಪ್ರಕಟಣೆ

ಸರಕಾರವು ಅಥವಾ ಪೊಲೀಸ್ ಮಹಾನಿದರ್ೇಶನಾಧಿಕಾರಿಯು ಮತ್ತು ಪೊಲೀಸ್ ಮಹಾನಿರೀಕ್ಷಣಾಧಿಕಾರಿಯು ಮಂಜೂರು ಮಾಡಿದ ಬಹುಮಾನಗಳನ್ನು, ಪೊಲೀಸ್ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗುವುದು. ಆಯುಕ್ತರು (ಕಮಿಷನರ್) ಉಪಮಹಾನಿರೀಕ್ಷಣಾಧಿಕಾರಿ ಮತ್ತು ಅಧೀಕ್ಷಕರು, ಮಂಜೂರು ಮಾಡಿದ ಬಹುಮಾನಗಳನ್ನು, ಅಪರಾಧ ಮತ್ತು ಘಟನೆಯ ಹಾಳೆಗಳಲ್ಲಿ ಪ್ರಕಟಿಸಲಾಗುವುದು