Karnataka State Police

ಲೈಂಗಿಕ ಕಿರುಕುಳ

ಲೈಂಗಿಕ ಕಿರುಕುಳ ಎಂದರೇನು ?

i.ಸ್ವಾಗತಾರ್ಹವಲ್ಲದ ಲೈಂಗಿಕ ಬೇಡಿಕೆ ಅಥವಾ ಮೌಖಿಕವಾಗಿ ಅಥವಾ ಭೌತಿಕವಾದ ಲೈಂಗಿಕ ವರ್ತನೆಯು ಈ ಕೆಳಕಂಡಂತೆ ಇರುತ್ತದೆ:
ii.ಅಂತಹ ನಡತೆಯನ್ನು ಅವ್ಯಕ್ತವಾಗಿ ಅಥವಾ ಅಭಿವ್ಯಕ್ತವಾಗಿ ಅಥವಾ ವೈಯುಕ್ತಿಕ ಉದ್ಯೋಗಕ್ಕೆ ನಿರ್ಬಂಧವನ್ನು ಮಾಡಿದರೆ ಅಥವಾ
iii.ಅಂತಹ ನಡವಳಿಕೆಯನ್ನು ಒಬ್ಬ ವ್ಯಕ್ತಿಯ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುವಂತೆ ತೀರ್ಮಾನ ತೆಗೆದುಕೊಳ್ಳುವಾಗ ಒಪ್ಪುವುದು ಅಥವಾ ತಿರಸ್ಕರಿಸುವುದು ಎಂಬ ನಿವೇದನೆಗೆ ಒಳಪಡಿಸುವುದು.
iv. ಅಂತಹ ವರ್ತನೆಯಿಂದ ಸಕಾರಣವಿಲ್ಲದೇ ವ್ಯಕ್ತಿಯ ಕೆಲಸ ನಿರ್ವಹಣಾ ಸಾಮರ್ಥಕ್ಕೆ ಧಕ್ಕೆ ಬರುವಂತೆ ಮಾಡುವುದು ಅಥವಾ ಭಯ, ಬೀತಿ ಹಾಗೂ ಇತರೆ ಸಹಪಾಠಿಗಳಿಂದ ಅಸಹಕಾರ ಸೃಷ್ಟಿಸುವುದು, ವ್ಯತಿರಿಕ್ತ ಅಥವಾ ಅಪರಾಧಿಕ ಕೆಲಸದ ವಾತಾವರಣವನ್ನು ಸೃಷ್ಟಿಸುವುದು.
v.ಲೈಂಗಿಕ ಕಿರುಕುಳವು ನೈಜವಾದ ಅಥವಾ ಬಲಾತ್ ಸಂಭೋಗಕ್ಕೆ ಪ್ರಯತ್ನ ಅಥವಾ ಲೈಂಗಿಕ ಹಲ್ಲೆ ಮುಂತಾದವುಗಳನ್ನು ಒಳಗೊಂಡಿರುತ್ತದೆ.
vi.ಲೈಂಗಿಕ ಹಿತಾಸಕ್ತಿಗಾಗಿ ಅನವಶ್ಯಕ ಒತ್ತಡ, ಅನವಶ್ಯಕವಾಗಿ ಸ್ಪರ್ಶಿಸುವುದು, ಮೈಮೇಲೆ ಬೀಳುವುದು, ಮೂಲೆಗೊತ್ತುವುದು ಹಾಗೂ ಚಿವುಟುವುದು, ಅನವಶ್ಯಕ ಲೈಂಗಿಕ ನೋಟ ಬೀರುವುದು ಅಥವಾ ಲೈಂಗಿಕ ಸನ್ನೆಗಳನ್ನು ಮಾಡುವುದು, ಅನವಶ್ಯಕ ಪತ್ರಗಳು, ದೂರವಾಣಿ ಕರೆಗಳು ಅಥವಾ ಲೈಂಗಿಕವಾಗಿ ಪ್ರಚೋದಿಸುವ ವಸ್ತುಗಳು, ಭೇಟಿಗಾಗಿ ಅನವಶ್ಯಕ ಒತ್ತಡ ಹೇರುವುದು, ಅನವಶ್ಯಕವಾಗಿ ಲೈಂಗಿಕ ಚೇಡನೆ ಮಾಡುವುದು, ಹಾಸ್ಯ ಮಾಡುವುದು, ಪ್ರಶ್ನಿಸುವುದು. ಒಬ್ಬ ವಯಸ್ಸಿಗೆ ಬಂದ ಹುಡುಗಿಯನ್ನು ಗೊಂಬೆ, ಚಿನ್ನ ರನ್ನ, ಫಿಗರ್ರು ಎಂದು ಹೇಳುವುದು, ಶಿಳ್ಳೆ ಹೊಡೆಯುವುದು, ಲೈಂಗಿಕ ಪ್ರಚೋದನಕಾರಿ ಹೇಳಿಕೆ ಹಾಗೂ ಉದ್ರೇಕಗೊಂಡಂತೆ ಆಲಾಪಿಸುವುದು ಒಳಗೊಂಡಿರುತ್ತದೆ. ಕೆಲಸದ ಬಗ್ಗೆ ಚರ್ಚೆಗಳನ್ನು ಲೈಂಗಿಕ ವಿಷಯಗಳೆಡೆ ಹರಿಬಿಡುವುದು, ಲೈಂಗಿಕ ವ್ಯಾಖ್ಯಾನ ಅಥವಾ ಕಥೆಗಳು, ಲೈಂಗಿಕ ಕಲ್ಪನೆಗಳ ಬಗ್ಗೆ ಕೇಳುವುದು, ಅಂತಹ ಆದ್ಯತೆ ಅಥವಾ ಇತಿಹಾಸ ತಿಳಿದುಕೊಳ್ಳುವುದು, ಹಾಗೂ ವೈಯುಕ್ತಿಕ ವಿಚಾರಗಳನ್ನು, ನಮ್ಮ ಸಾಮಾಜಿಕ/ಲೈಂಗಿಕ ಜೀವನದ ಬಗ್ಗೆ, ವ್ಯಕ್ತಿಯ ಉಡುಗೆ ತೊಡುಗೆ ಬಗ್ಗೆ, ಶಾರೀರಿಕ ವಿನ್ಯಾಸ, ನೋಟ, ಮುತ್ತಿಡುವ ಶಬ್ದದಂತೆ ಲೈಂಗಿಕವಾಗಿ ಚೇಡಿಸುವುದು., ಹಾಗೂ ವ್ಯಕ್ತಿಯ ಲೈಂಗಿಕ ಜೀವನದ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹಬ್ಬಿಸುವುದು